ಇಂತಹ ವ್ಯಕ್ತಿಗಳನ್ನು ಬುದ್ಧಿ ಇರುವ ಯಾವ ಹೆಣ್ಣೂ ಮದುವೆ ಆಗೋದಿಲ್ಲ..!
ಬೆಂಗಳೂರು; ಗಂಡ-ಹೆಂಡತಿ ಸಂಬಂಧ ಅನ್ನೋದು ನೂರು ವರ್ಷ ಫಲ ಎಂದು ದೊಡ್ಡವರು ಹೇಳುತ್ತಾರೆ.. ಆದ್ರೆ ಇತ್ತೀಚಿನ ದಿನಗಳಲ್ಲಿ ಯಾವಾಗ ಒಂದಾಗುತ್ತಾರೋ ಯಾವಾಗ ಬೇರೆಯಾಗುತ್ತಾರೋ ಅನ್ನೋದೇ ಗೊತ್ತಾಗೋದಿಲ್ಲ.. ಬಟ್ಟೆ ಬದಲಿಸಿದಂತೆ ಸಂಗಾತಿಗಳನ್ನು ಬದಲಿಸುತ್ತಿರುತ್ತಾರೆ.. ಡಿವೋರ್ಸ್ ಅನ್ನೋದು ತುಂಬಾ ಸುಲಭ ಎಂಬ ರೀತಿಯಲ್ಲಿ ಎಲ್ಲರೂ ಭಾವಿಸಿಬಿಟ್ಟಿದ್ದಾರೆ.. ಇದಕ್ಕೆ ಕಾರಣಗಳು ಹಲವಾರು.. ಹೆಣ್ಣ ಹೆತ್ತವರು ನಮ್ಮ ಮಗಳು ಗಂಡನ ಮನೆಯಲ್ಲಿ ಸುಖವಾಗಿರಲಿ ಅಂತ ಎಲ್ಲರಲ್ಲೂ ವಿಚಾರ ಮಾಡಿ ಮಗಳಿಗೆ ಹುಡುನನ್ನು ಹುಡುಕಿರುತ್ತಾರೆ.. ಇಷ್ಟೆಲ್ಲಾ ಆದರೂ ಮೋಸ ಹೋಗುವವರೇ ಹೆಚ್ಚು.. ಗಂಡಿನ ಕೆಲವೊಂದು ವರ್ತನೆಗಳಿಂದ ಪತ್ನಿ ರೋಸಿಹೋಗುತ್ತಾಳೆ.. ಮದುವೆಯೇ ಆಗದಿದ್ದರೆ ಒಳ್ಳೆಯದಿತ್ತು ಎಂಬ ಹಂತಕ್ಕೆ ಬರುತ್ತಾಳೆ.. ಹೀಗಾಗಿ, ಈ ಕೆಳಗಿನ ಗುಣಗಳುಳ್ಳ ವ್ಯಕ್ತಿಯನ್ನು ಎಂದಿಗೂ ಮಹಿಳೆಯರು ಮದುವೆಯಾಗಬಾರದು..
ಇದನ್ನೂ ಓದಿ; ಶೀಘ್ರದಲ್ಲೇ ಅಂಗನವಾಡಿ ಕಾರ್ಯಕರ್ತೆಯ ಗೌರವಧನ ಹೆಚ್ಚಳ; ಹೆಬ್ಬಾಳ್ಕರ್
ಹುಡುಗಿ ಮದುವೆಯಾದ ಮೇಲೆ ತನ್ನನ್ನು ಹೆತ್ತು ಬೆಳೆಸಿದವರನ್ನು ಬಿಟ್ಟು ಗಂಡನ ಮನೆ ಸೇರುತ್ತಾಳೆ.. ಯಾರದೋ ಮನೆ ಸೇರಿದ ಮೇಲೆ ತುಂಬಾ ವರ್ಷಗಳ ಕಾಲ ಹುಡುಗಿ ಯಾನು ಬೇರೆ ಮನೆಯಲ್ಲಿದ್ದೇನೆ ಎಂಬಂತೆಯೇ ಭಾವಿಸುತ್ತಾಳೆ.. ತವರು ಮನೆಯಲ್ಲಿರುವಷ್ಟು ಫ್ರೀಡಂ ಆಕೆಗೆ ಇರುವುದಿಲ್ಲ.. ಇದರ ನಡುವೆ ಗಂಡ ಕೂಡಾ ಹೆಂಡತಿಗೆ ಹಲವು ಷರತ್ತುಗಳನ್ನು ಹಾಕುತ್ತಾ ಹೋದರೆ ಆಕೆಗೆ ಸಂಸಾರ ಮಡೋದು ಕಷ್ಟವಾಗಿಬಿಡುತ್ತದೆ.. ಅದೂ ಕೂಡಾ ತವರು ಮನೆಯವರ ಜೊತೆ ಮಾತನಾಡಬಾರದು, ಸ್ನೇಹಿತರ ಜೊತೆ ಮಾತನಾಡಬಾರದು ಎಂದು ಹೇಳುವುದು. ಸಣ್ಣ ಪುಟ್ಟ ವಿಚಾರಗಳಿಗೂ ಕಂಡೀಷನ್ ಹಾಕುವ ಮನಸ್ಥಿತಿ ಉಳ್ಳವರ ಜೊತೆ ಬಾಳುವುದು ಹೆಣ್ಣಿಗೆ ತುಂಬಾ ಕಷ್ಟವಾಗಬಹುದು..
ಇದನ್ನೂ ಓದಿ; ಮಳೆಯಿಂದ ಗೋಡೆ ಕುಸಿತ; ಸಂಬಂಧಿಕರ ಮನೆಗೆ ಬಂದಿದ್ದ ಬಾಲಕ ಸಾವು!
ಕೆಲವರು ಸುಮ್ಮನೆ ದಾಳಿ ಮಾಡುವುದು, ಹೊಡೆಯುವ ಪ್ರವೃತ್ತಿ ಹೊಂದಿರುತ್ತಾರೆ.. ಹೆಂಡತಿ ಅಂದರೆ ಹೇಳಿದ್ದೆಲ್ಲಾ ಕೇಳುವವಳು ಎಂಬ ಭಾವನೆ ಹಲವರಲ್ಲಿರುತ್ತದೆ.. ಅಂತಹವರು ಹೇಳಿದ ಮಾತು ಕೇಳಲಿಲ್ಲ ಅಂತ ಹೊಡೆಯುವವರೂ ಇದ್ದಾರೆ.. ಇಂತಹ ಮನಸ್ಥಿತಿ ಮದುವೆಯಾಗುವವನಿಗೆ ಇದೆಯಾ ಎಂಬುದನ್ನು ಮೊದಲು ಗಮನಿಸಬೇಕು.. ಅನಂತರವೇ ಸಂಬಂಧ ಕುದುರಿಸಬೇಕು..
ಇನ್ನು ಗಂಡಸರು ಹೆಚ್ಚಾಗಿ ಈಗ ಮದ್ಯ ಸೇವನೆ, ಸಿಗರೇಟ್ ಸೇದೋದು ಮಾಡುತ್ತಿರುತ್ತಾರೆ… ಯಾವಾಗಲೂ ಪಾರ್ಟಿಗಳಿಗೆ ಹೋಗುವ ಸಂಪ್ರದಾಯ ಅವರದ್ದು… ದಿನವೂ ಪಾರ್ಟಿಗಳಿಗೆ ಹೋಗೋದು ಮಧ್ಯರಾತ್ರಿ ಬರೋದು, ಗಲಾಟೆ ಮಾಡೋದು ಮಾಡುತ್ತಿರುತ್ತಾರೆ.. ಇಂತಹವರು ಕೂಡಾ ತುಂಬಾನೇ ಡೇಂಜರ್.. ಇಂತಹ ಗಂಡಸರು ಸಾಯಿಸುವುದಕ್ಕೂ ಹೇಸುವುದಿಲ್ಲ..
ಇದನ್ನೂ ಓದಿ; ಕಪ್ಪು ಅರಿಶಿಣ ನೋಡಿದ್ದೀರಾ..?; ಇದನ್ನು ಬಳಸುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ..?
ಇನ್ನು ಯಾವುದೇ ಮಹಿಳೆ ತಾನು ಹೋಗುವ ಮನೆಯಲ್ಲಿ ಗೌರವ ಸಿಗಬೇಕು ಎಂದು ಬಯಸುತ್ತಾಳೆ.. ಯಾಕಂದ್ರೆ ತವರು ಮನೆಯಲ್ಲಿ ಆಕೆ ರಾಣಿಯಂತೆ ಬದುಕಿರುತ್ತಾಳೆ.. ಆದ್ರೆ, ಗಂಡನ ಮನೆಗೆ ಬಂದಾಗ ಕನಿಷ್ಟ ಸಂತೋಷದಿಂದ ಜೀವನ ಮಾಡೋದಕ್ಕಾದರೂ ಅವಕಾಶ ಸಿಗಬೇಕು.. ಸಂಗಾತಿ ಹೆಣ್ಣಿನ ಅಭಿಪ್ರಾಯ ಹಾಗೂ ಆಸಕ್ತಿಗಳನ್ನು ಗೌರವಿಸದೇ ಹೋದರೆ ಹೆಣ್ಣು ಜೀವನ ನರಕವಾಗುತ್ತಾ ಹೋಗುತ್ತದೆ..
ಮೋಸ ಮಾಡುವುದು ಇತ್ತೀಚೆಗೆ ಫ್ಯಾಶನ್ ಆಗಿದೆ. ಅನೇಕ ಜನರು ತಮ್ಮ ಸಂಗಾತಿಗೆ ಮೋಸ ಮಾಡಿ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುತ್ತಾರೆ.. ಇಂತಹ ವರ್ತನೆಗಳು ಕೂಡಾ ಹೆಣ್ಣನ್ನು ಘಾಸಿಗೊಳಿಸುತ್ತವೆ..