CrimeDistricts

ಜೈಲಿನಲ್ಲಿ ಮೊಬೈಲ್‌ಗಳು, ಗಾಂಜಾ, ಡ್ರಗ್ಸ್‌ ಪತ್ತೆ..!; ಈ ಜೈಲಲ್ಲಿ ಬೇಕಾದ್ದು ಸಿಗುತ್ತೆ..!

ಮಂಗಳೂರು; ಜೈಲಿನಲ್ಲಿಡೋದು ಅಪರಾಧಿಗಳ ಮನಃಪರಿರ್ತನೆಯಾಗಲಿ ಅಂತ.. ಆದ್ರೆ ಜೈಲಲ್ಲೇ ಅಪರಾಧಗಳನ್ನು ಮಾಡೋದಕ್ಕೆ ಅವಕಾಶ ಕೊಟ್ಟರೆ, ಜೈಲು ಇದ್ದು ಏನು ಪ್ರಯೋಜನ..? ಈ ಪ್ರಶ್ನೆ ಯಾಕೆ ಬಂತು ಅಂದ್ರೆ ಮಂಗಳೂರಿನ ಕೊಡಿಯಾಲ್‌ ಬೈಲ್‌ನಲ್ಲಿರುವ ಕಾರಾಗೃಹದಲ್ಲಿ ಕೈದಿಗಳ ಬಳಿ ಮೊಬೈಲ್‌ಗಳು, ಗಾಂಜಾ, ಡ್ರಗ್ಸ್‌ ಎಲ್ಲಾ ಪತ್ತೆಯಾಗಿದೆ..

ಇದನ್ನೂ ಓದಿ; ಲವಂಗ ಸೇವನೆಯಿಂದ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆಯಂತೆ!

ಇಂದು ಬೆಳಗಿನಜಾವ 150ಕ್ಕೂ ಪೊಲೀಸರಿಗೆ ಜೈಲಿನ ಮೇಲೆ ದಾಳಿ ಮಾಡಿದ್ದಾರೆ.. ಈ ವೇಳೆ ಕೈದಿಗಳ ಬಳಿ ಗಾಂಜಾ, ಡ್ರಗ್ಸ್‌ ಜೊತೆಗೆ ಮೊಬೈಲ್‌ಗಳು ಕೂಡಾ ಸಿಕ್ಕಿವೆ.. ಈ ಜೈಲಿನಲ್ಲಿ ಸುಮಾರು 25ಕ್ಕೂ ಹೆಚ್ಚು ಮೊಬೈಲ್‌ಗಳು ಸಿಕ್ಕಿವೆ.. ಐದು ಚಾರ್ಜರ್‌ಗಳು, ಇಯರ್‌ ಫೋನ್‌ಗಳು, ಪೆನ್‌ಡ್ರೈವ್‌, ಕತ್ತರಿ, ಬ್ಲ್ಯೂಟೂತ್‌ ಡಿವೈಸ್‌ ಕೂಡಾ ಸಿಕ್ಕಿದೆ.. ಅಂದರೆ ಕೈದಿಗಳು ಜೈಲಿನಲ್ಲಿದ್ದರೂ ಹೊರಗಿನ ಜಗತ್ತಿನ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು.. ಹೊರಗಿನವರೊಂದಿಗೆ ಜೈಲಿನಲ್ಲಿದ್ದುಕೊಂಡೇ ಮಾತನಾಡುತ್ತಿದ್ದರು..

ಇದನ್ನೂ ಓದಿ; ಬಿಜೆಪಿ ಮೇಯರ್‌ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ಮಹಿಳೆ!

ಇಷ್ಟೇ ಅಲ್ಲ, ಜೈಲಿಗೆ ಗಾಂಜಾ ಕೂಡಾ ಸಪ್ಲೈ ಆಗುತ್ತಿರುವುದು ಕೂಡಾ ಪತ್ತೆಯಾಗಿದೆ.. ಡ್ರಗ್ಸ್‌ ಹಾಗೂ ಗಾಂಜಾ ಕೂಡಾ ಕೈದಿಗಳ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ.. ಜೈಲು ಸಿಬ್ಬಂದಿಯ ಸಹಕಾರದಿಂದಲೇ ಇಷ್ಟೆಲ್ಲಾ ಆಗಿದೆ.. ಹೀಗಾಗಿ, ಹಿರಿಯ ಪೊಲೀಸ್‌ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ..

Share Post