Health

ಒಮಿಕ್ರಾನ್‌ಗೆ ಭಾರತದಲ್ಲಿ ಮೊದಲ ಬಲಿ..?

ನವದೆಹಲಿ : ಗುಜರಾತ್‌ನಲ್ಲಿ ಒಮಿಕ್ರಾನ್‌ಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಹಮದಾಬಾದ್‌ನ ಸೋಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಆತನಿಗೆ ಒಮಿಕ್ರಾನ್‌ ಲಕ್ಷಣಗಳಿದ್ದವು ಎಂದು ತಿಳಿದು ಬಂದಿದೆ. ಸೋಂಕಿತನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 

     ಗುಜರಾತ್‌ನಲ್ಲಿ ಒಮಿಕ್ರಾನ್‌ ಪ್ರಕರಣಗಳು ಹೆಚ್ಚುತ್ತಿವೆ. ಈ ಬೆನ್ನಲ್ಲೇ ಕೊರೋನಾ ಸೋಂಕಿತ ಹಾಗೂ ಒಮಿಕ್ರಾನ್‌ ಲಕ್ಷಣಗಳುಳ್ಳ ವ್ಯಕ್ತಿ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.  ಒಂದು ವೇಳೆ ಮೃತ ಸೋಂಕಿತನ ವರದಿ ಪಾಸಿಟಿವ್​ ಬಂದಲ್ಲಿ ದೇಶದಲ್ಲಿಯೇ ಒಮಿಕ್ರಾನ್​ನಿಂದ ಸಾವನ್ನಪ್ಪಿದ ಮೊದಲ ಪ್ರಕರಣವಾಗಲಿದೆ. ಆಫ್ರಿಕಾದಲ್ಲಿ ಕಂಡು ಬಂದಿದ್ದ ಒಮಿಕ್ರಾನ್​ ತಳಿ ಕರ್ನಾಟಕದ ಮೂಲಕ ಮೊದಲ ಬಾರಿಗೆ ದೇಶಕ್ಕೆ ಅಡಿಯಿಟ್ಟಿತ್ತು.

Share Post