HealthLifestyle

Heart Attack; ಚಳಿಗಾಲದಲ್ಲಿ ಹೃದಯಾಘಾತಗಳ ಹೆಚ್ಚಳಕ್ಕೆ ಕಾರಣಗಳೇನು..?

ಬೆಂಗಳೂರು; ಚಳಿಗಾಲದಲ್ಲಿ  ಹೆಚ್ಚಿನ ಹೃದಯಾಘಾತಗಳು ಸಂಭವಿಸುತ್ತವೆ. ತೀವ್ರ ಚಳಿಯಿಂದಾಗಿ ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಹೀಗಾಗಿ, ಚಳಿಗಾಲದಲ್ಲಿ ಈ ಕೆಳಗಿನ ಐದು ತಪ್ಪುಗಳನ್ನು ನಾವು ಎಂದಿಗೂ ಮಾಡಬಾರದು. ಈ ಐದು ತಪ್ಪುಗಳನ್ನು ಮಾಡುವುದರಿಂದಲೇ ಚಳಿಗಾಲದಲ್ಲಿ ಹೃದಯಾಘಾತಗಳು ಹೆಚ್ಚಾಗುತ್ತವೆ.

ನಿರ್ಜಲೀಕರಣ;

ಚಳಿಗಾಲದಲ್ಲಿ ಮನುಷ್ಯನ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಅಂದರೆ ನಿರ್ಜಲೀಕರಣ ಉಂಟಾಗುತ್ತದೆ. ಯಾಕಂದ್ರೆ ಚಳಿ ಹೆಚ್ಚಿರುವ ಸಮಯದಲ್ಲಿ ನಾವು ನೀರನ್ನು ಹೆಚ್ಚಿಗೆ ಕುಡಿಯುವುದಿಲ್ಲ. ಇದರಿಂದಾಗಿ ಚಳಿಗಾಲದಲ್ಲಿ ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ.

ಇದರಿಂದಾಗಿ ತುಟಿಗಳು ಒಣಗುವುದು, ಮೂತ್ರಿ ವಿಸರ್ಜನೆ ಸರಿಯಾಗಿ ಆಗದಿರುವುದು, ತೀವ್ರ ತಲೆನೋವು ಉಂಟಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಇದು ಹೃದಯಾಘಾತಕ್ಕೂ ಕಾರಣವಾಗಬಹುದು. ಹೀಗಾಗಿ, ಚಳಿಗಾಲದಲ್ಲಿ ಕೂಡಾ ಬಾಯಾರದಿದ್ದರೂ ಚೆನ್ನಾಗಿ ನೀರು ಕುಡಿಯುವುದು ಅಗತ್ಯ.

ಸೂರ್ಯ ಬೆಳಕು ದೇಹದ ಮೇಲೆ ಬೀಳದಿರುವುದು!

ಚಳಿಗಾಲದಲ್ಲಿ ಮಂಜು ಕವಿದ ವಾತಾವರಣವಿರುತ್ತದೆ. ಹೀಗಾಗಿ ಸೂರ್ಯನ ಬೆಳಕು ಹೆಚ್ಚು ಬೀಳುವುದಿಲ್ಲ. ಇದರಿಂದ ನಮ್ಮ ದೇಹಕ್ಕೆ ವಿಟಮಿನ್‌ ಡಿ ಕೊರತೆಯಾಗುತ್ತದೆ. ವಿಟಮಿನ್‌ ಡಿ ಕೊರೆಯಾದರೂ ಕೂಡಾ ಹೃದಯಾಘಾತಕ್ಕೆ ದಾರಿ ಮಾಡಿಕೊಡುತ್ತದೆ.

ಹೊರಾಂಗಣ ವ್ಯಾಯಾಮ

ಚಳಿಗಾಲದಲ್ಲಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ವಿಪರೀತ ಚಳಿ ಇರುತ್ತದೆ. ಇದರಿಂದಾಗಿ ವಿಪರೀತ ಚಳಿಯಲ್ಲಿ ಅದರಲ್ಲೂ ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದರಿಂದ ಚಳಿಯು ಹೃದಯದ ಮೇಲೆ ಒತ್ತಡ ಹೆಚ್ಚಿಸುತ್ತದೆ. ಹೀಗಾಗಿ ಚಳಿಗಾಲದಲ್ಲಿ ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದು ಕಡಿಮೆ ಮಾಡಬೇಕು.

ಸರಿಯಾದ ಆಹಾರ ಕ್ರಮ ಇಲ್ಲದಿರುವುದು

ಚಳಿಗಾಲದಲ್ಲಿ ಸೂಕ್ತ ಆಹಾರ ಕ್ರಮ ಅನುಸರಿಸಬೇಕು. ಕೊಬ್ಬಿನ ಅಂಶವಿರುವ ಆಹಾರ ಸೇವನೆ, ಜಂಕ್‌ ಫುಡ್ಸ್‌ ಸೇವನೆಯಿಂದಲೂ ಹೃದಯಕ್ಕೆ ತೊಂದೆಯಾಗುತ್ತದೆ. ಇದರಿಂದಲೂ ಜೀವಕ್ಕೆ ಅಪಾಯವಾಗಬಹುದು. ಆದಷ್ಟು ಚಳಿಗಾಲದಲ್ಲಿ ಕೊನ್ನ ಅಂಶ ಕಡಿಮೆ ಇರುವ ಆಹಾರಗಳನ್ನು ಸೇವನೆ ಮಾಡಬೇಕು.

ಮದ್ಯ ಸೇವನೆ

ಮದ್ಯ ಸೇವನೆ ಮಾಡುವುದು ಚಳಿಯಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ ನಿಜ. ಆದ್ರೆ ಅತಿಯಾಗಿ ಮದ್ಯ ಸೇವನೆ ಮಾಡಿದರೂ ಕೂಡಾ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಹೃದಯನಾಳಗಳು ಇದರಿಂದ ಸಂಕುಚಿತವಾಗಿ ಅಪಾಯಕ್ಕೆ ಕಾರಣವಾಗುತ್ತದೆ.

Share Post