BengaluruCinemaHealth

ಲಂಡನ್‌ನಲ್ಲಿ ನಟಿ ರಮ್ಯಾಗೆ ಚಿಕಿತ್ಸೆ; ವಿದೇಶಕ್ಕೆ ಹಾರಿದ್ದು ಯಾಕೆ ಗೊತ್ತಾ..?

ಬೆಂಗಳೂರು; ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಮಗತ್ತೆ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್‌ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ, ಅದಕ್ಕೂ ಮೊದಲು ಅವರು ಲಂಡನ್‌ಗೆ ಹಾರಿದ್ದಾರೆ. ಚಿಕಿತ್ಸೆ ಪಡೆಯೋದಕ್ಕಾಗಿ ಅವರು ಇದ್ದಕ್ಕಿದ್ದಂತೆ ಲಂಡನ್‌ಗೆ ಹೋಗಿದ್ದಾರೆ. ಹಾಗಂತ ಅವರಿಗೇನಾದರೂ ಅನಾರೋಗ್ಯ ಇರಬಹುದೇ ಎಂದು ನೀವು ಭಾವಿಸಿದರೆ ಅದು ತಪ್ಪಾಗುತ್ತೆ. ಯಾಕಂದ್ರೆ ಅವರು ಲಂಡನ್‌ಗೆ ಹೋಗಿರೋದು ನೈಸರ್ಗಿಕ ಚಿಕಿತ್ಸೆ ಪಡೆಯೋದಕ್ಕೆ.

ಉತ್ತರಕಾಂಡ ಸಿನಿಮಾಗಾಗಿ ಸದ್ಯದಲ್ಲೇ ರಮ್ಯಾ ಬಣ್ಣ ಹಚ್ಚೋಕೆ ರೆಡಿಯಾಗಿದ್ದಾರೆ. ಚಿತ್ರರಂಗ ತೊರೆದು ಎಂಟು ವರ್ಷವಾಗಿರುವುದರಿಂದ ಅವರು ದೇಹದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಸಿಕ್ಕಿದ್ದೆಲ್ಲಾ ತಿಂದಿದ್ದರಿಂದ ಸ್ವಲ್ಪ ದಪ್ಪವೂ ಆಗಿದ್ದರು. ಆದರೂ ಅವರಿಗೆ ಈಗಲೂ ಚಿತ್ರರಂಗದಲ್ಲಿ ಬೇಡಿಕೆ ಇದೆ. ಹೀಗಾಗಿ ಎರಡನೇ ಬಾರಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರಮ್ಯಾ ರೆಡಿಯಾಗಿದ್ದಾರೆ. ಇದಕ್ಕೂ ಮೊದಲು ಅವರು ರಿಲ್ಯಾಕ್ಸ್‌ ಆಗಲು ಹಾಗೂ ಕೊಂಚ ಸ್ಲಿಮ್‌ ಆಗೋದಕ್ಕೆ ಅವರು ನೈಸರ್ಗಿಕ ಚಿಕಿತ್ಸೆಯ ಮೊರೆ ಹೋಗಿದ್ದಾರೆ.

ಇದಕ್ಕಾಗಿಯೇ ಲಂಡನ್‌ಗೆ ಹೋಗಿದ್ದಾರೆ. ಈ ವಿಚಾರವನ್ನು ರಮ್ಯಾ ಅವರೇ ಖುದ್ದು ಹೇಳಿಕೊಂಡಿದ್ದಾರೆ.

Share Post