HealthLifestyle

ನೆಲದ ಮೇಲೆ ಮಲಗಿದರೆ ಇಷ್ಟೆಲ್ಲಾ ಪ್ರಯೋಜನಗಳಾ..?; ಮತ್ಯಾಕೆ ತಡೆ ಹಾಸಿಗೆ ಮೂಲೆಗಿಟ್ಟುಬಿಡಿ!

ಬೆಂಗಳೂರು; ಹಿಂದಿನ ಕಾಲದಲ್ಲಿ ಎಲ್ಲರೂ ನೆಲದ ಮೇಲೆಯೇ ಮಲಗುತ್ತಿದ್ದರು. ಈ ಜನ ಸುಖದ ಸುಪ್ಪತ್ತಿಗೆಯಲ್ಲಿ ಮಲಗುತ್ತಿದ್ದಾರೆ. ನಾನಾ ತರದ ಹಾಸಿಗೆಗಳು ಮಾರುಕಟ್ಟೆಗೆ ಬಂದಿದೆ. ಎಲ್ಲರ ಮನೆಗಳಲ್ಲೂ ಈಗ ಮೆತ್ತನೆಯ ಹಾಸಿಗೆಗಳು ಬಂದಿವೆ. ಆದರೂ, ಬಹುತೇಕರಿಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ಜೊತೆ ಬೆನ್ನುನೋವು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಇದಕ್ಕೆಲ್ಲಾ ಕಾರಣ ನಮಗೆ ಸುಖದ ನಿದ್ದೆ ನೀಡುತ್ತವೆ ಎಂದು ನಂಬಿರುವ ಹಾಸಿಗೆಗಳೇ ಅನ್ನೋದು ನಮಗೆ ಮೊದಲ ಅರ್ಥವಾಗಬೇಕು. ಹೌದು, ಮೆತ್ತನೆಯ ಹಾಸಿಗೆಗಳನ್ನು ಪಕ್ಕಕ್ಕಿಟ್ಟು ನೆಲದ ಮೇಲೆ ಮಲಗಿದರೆ ಸುಖದ ನಿದ್ದೆ ಬರುವುದರ ಜೊತೆಗೆ ಬೆನ್ನುನೋವಿನಂತಹ ಸಮಸ್ಯೆಗಳು ಬರುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ಹೌದು, ನೆಲದ ಮೇಲೆ ಮಲಗುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಅಂತ ತಜ್ಞ ವೈದ್ಯರು ಹೇಳುತ್ತಿದ್ದಾರೆ. ನೆಲದ ಮೇಲೆ ಮಲಗುವುದರಿಂದ ಬೆನ್ನುಮೂಳೆ ಸಹಜ ಸ್ಥಿತಿಯಲ್ಲಿಯೇ ಇರುತ್ತದೆ. ಇದರಿಂದಾಗಿ ಬೆನ್ನುನೋವಿನ ಸಮಸ್ಯೆ ಬರುವುದಿಲ್ಲ. ಈಗಾಗಲೇ ನಿಮಗೆ ಬೆನ್ನುನೋವಿದ್ದರೆ ನೆಲದ ಮೇಲೆ ಮಲಗುವುದನ್ನು ಅಭ್ಯಾಸ ಮಾಡಿಕೊಂಡಂತೆ ಆ ಸಮಸ್ಯೆ ನಿವಾರಣೆಯಾಗುತ್ತದೆ. ಯಾಕಂದ್ರೆ ನೆಲದ ಮೇಲೆ ಮಲಗುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಇದರಿಂದಾಗಿ ನಿದ್ದೆ ಚೆನ್ನಾಗಿ ಬರುತ್ತದೆ. ಮಾನಸಿಕ ಒತ್ತಡ, ಅಸ್ವಸ್ಥತೆಯಿಂದ ಕೂಡಾ ನಾವು ದೂರ ಇರಬಹುದು. ದೇಹದ ಉಷ್ಣತೆ ಕಡಿಮೆಯಾಗುವುದರ ಜೊತೆಗೆ ದೇಹದ ತೂಕವನ್ನು ಕೂಡಾ ಹತೋಟಿಯಲ್ಲಿಟ್ಟುಕೊಳ್ಳಬಹುದು.

ಆದ್ರೆ ನೆಲವನ್ನು ಸ್ವಚ್ಛ ಮಾಡಿ ಮಲಗೋದು ಇಲ್ಲಿ ಮುಖ್ಯವಾಗುತ್ತದೆ. ಯಾಕಂದ್ರೆ ನೆಲದ ಮೇಲೆ ಕೀಟಗಳು ಓಡಾಡುತ್ತವೆ. ಧೂಳು ತುಂಬಿರುತ್ತದೆ. ಹೀಗಾಗಿ ಹಾಗೆಯೇ ಮಲಗಿದರೆ ಅಲರ್ಜಿಯಂತಹ ಸಮಸ್ಯೆಗಳು ಬರಬಹುದು. ಹೀಗಾಗಿ ಯಾವಾಗಲೂ ನೆಲದ ಮೇಲೆ ಮಲಗುವ ಮುಂಚೆ ಅದನ್ನು ಶುಭ್ರ ಮಾಡಬೇಕು, ಅನಂತರವೇ ಮಲಗಬೇಕು.

ಈಗಾಗಲೇ ಸಾಕಷ್ಟು ಬೆನ್ನುನೋವು ಇರುವವರು ಹಾಗೂ ಗರ್ಭಿಣಿಯರು ನೆಲದ ಮೇಲೆ ಮಲಗುವುದನ್ನು ಅಭ್ಯಾಸ ಮಾಡುವ ಮುಂಚೆ ವೈದ್ಯರನ್ನು ಸಂಪರ್ಕ ಮಾಡಬೇಕು. ವೈದ್ಯ ಹೇಳಿದರೆ ಮಾತ್ರ ನೆಲದ ಮೇಲೆ ಮಲಗಲು ಶುರು ಮಾಡಿ. ವೈದ್ಯರು ಹೇಳಿದಂತೆ ಕೇಳುವುದು ಎಲ್ಲದಕ್ಕಿಂತ ಉತ್ತಮ.

Share Post