Brain Therapy; ʻಏ ಮೇರೆ ವತನ್ʼ ಹಾಡಿನಿಂದ ಬ್ರೇನ್ ಸ್ಟ್ರೀಕ್‌ಗೆ ಚಿಕಿತ್ಸೆ; ಏನಿದು ಮ್ಯೂಸಿಕ್ ಥೆರಪಿ?
ನವದೆಹಲಿ; ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Latha mangeshkar) ಅವರ ʻಏ ಮೇರೆ ವತನ್ʼ ಹಾಡು ಯಾರು ಕೇಳಿಲ್ಲ ಹೇಳಿ.. ಈ ಹಾಡು ಕೇಳಿದರೇನೇ ಮೈಯೆಲ್ಲಾ ರೋಮಾಂಚನವಾಗುತ್ತದೆ.. ಈ ಹಾಡು ಈಗ ರೋಗ ನಿವಾರಣೆಗೆ ಬಳಕೆಯಾಗ್ತಿದೆ.. ಈ ಹಾಡು ಕೇಳಿದ ರೋಗಿಗಳು ಗುಣಮುಖರಾಗುತ್ತಿದ್ದಾರೆ.. ಇದೊಂದು ರೀತಿಯಲ್ಲಿ ಮೆಡಿಸಿನ್ ತರಾ ಬಳಕೆಯಾಗ್ತಿದೆ.. ಹೌದು, ಬ್ರೇನ್ ಸ್ಟ್ರೋಕ್ (Brain Stroke) ಆದವರಿಗೆ ಮ್ಯೂಸಿಕ್ ಕೇಳಿಸಿ ಸರಿಪಡಿಸುವ ಪದ್ಧತಿಯನ್ನು ಭಾರತದಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಬ್ರೇನ್ ಸ್ಟ್ರೋಕ್ ಆದವರಿಗೆ ಲತಾ ಮಂಗೇಶ್ಕರ್ ಅವರು `ಏ ಮೇರೆ ವತನ್ʼ ಹಾಡು ಕೇಳಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಎಷ್ಟು ರೋಗಿಗಳ ಆರೋಗ್ಯದಲ್ಲಿ ಸುಧಾರಣೆ ಕಂಡಿದೆಯಂತೆ..! (Brain Therapy)
ಇದನ್ನೂ ಓದಿ; Dandruff Problem; ತಲೆಹೊಟ್ಟು ಸಮಸ್ಯೆ ನಿವಾರಣೆಯಾಗ್ತಿಲ್ವಾ..?; ಹಾಗಾದ್ರೆ ಟಿಪ್ಸ್ Follow ಮಾಡಿ..
ಏಮ್ಸ್ ಆಸ್ಪತ್ರೆಯಲ್ಲಿ ಮ್ಯೂಸಿಕ್ ಥೆರಪಿ ಪ್ರಯೋಗ;
ಏಮ್ಸ್ ಆಸ್ಪತ್ರೆಯಲ್ಲಿ ಮ್ಯೂಸಿಕ್ ಥೆರಪಿ ಪ್ರಯೋಗ; ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಈ ಮ್ಯೂಸಿಕ್ ಥೆರಪಿ ಪ್ರಯೋಗ ಮಾಡಲಾಗುತ್ತಿದೆ. ವೈದ್ಯೆ ದೀಪ್ತಿ ವಿಭಾ ಎಂಬುವವರು ಈ ಥೆರಪಿ ಬಳಸಿ, ಬ್ರೇನ್ ಸ್ಟ್ರೋಕ್ ಆದವರ ಆರೋಗ್ಯದಲ್ಲಿ ಬದಲಾವಣೆ ಆಗಿದ್ದನ್ನು ಕಂಡಿದ್ದಾರೆ. ಬ್ರೈನ್ ಸ್ಟ್ರೋಕ್ ಆದವರು ಮಾತನಾಡೋದಕ್ಕೆ ಆಗೋದಿಲ್ಲ… ಭಾವನೆಗಳನ್ನು ವ್ಯಕ್ತಪಡಿಸಲು ಆಗದೇ ಕಷ್ಟಪಡುತ್ತಿರುತ್ತಾರೆ. ಆದ್ರೆ ಈ ಹಾಡು ಕೇಳಿದ ಮೇಲೆ ಎಷ್ಟೋ ರೋಗಿಗಳು, ತೊದಲು ಮಾತನಾಡಿದ್ದಾರೆ. ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಬ್ರೇನ್ ಸ್ಟ್ರೋಕ್‌ನಿಂದ ಕೆಲವರಿಗೆ ಮಾತು ಹೋಗಿರುತ್ತದೆ. ಕೇಳುವುದು ಕೂಡಾ ಕಡಿಮೆಯಾಗಿರುತ್ತದೆ. ಅಂತವರಿಗೆ ವೈದ್ಯರು ಇಂತಹ ಮ್ಯೂಸಿಕ್ ಥೆರಪಿ ಮಾಡುತ್ತಿದ್ದಾರೆ. ಇದರಿಂದ ರೋಗಿಗಳ ಆರೋಗ್ಯ ಚೇತರಿಸಲು ಸಾಕಷ್ಟು ಉಪಯೋಗಕಾರಿಯಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಅಫಾಸಿಯಾ, ನ್ಯೂರೋಲಜಿ ಸಮಸ್ಯೆ ಎದುರಿಸುತ್ತಿರುವವರು ಈ ಮ್ಯೂಸಿಕ್ ಥೆರಪಿ ಮೂಲಕ ಗುಣಮುಖರಾಗುತ್ತಿದ್ದಾರೆ.
ಇದನ್ನೂ ಓದಿ; Fingering in the nose; ಮೂಗಲ್ಲಿ ಬೆರಳಿಟ್ಟುಕೊಂಡರೆ ಮರೆವು ಕಾಯಿಲೆ ಗ್ಯಾರೆಂಟಿ!
ಏನಿದು ಅಫಾಸಿಯಾ ಸಮಸ್ಯೆ, ಹಾಗಂದ್ರೆ ಏನು..?;
ಏನಿದು ಅಫಾಸಿಯಾ ಸಮಸ್ಯೆ, ಹಾಗಂದ್ರೆ ಏನು..?; ಬ್ರೇನ್ ಸ್ಟ್ರೋಕ್ ಗೆ ತುತ್ತಾಗುವವರಲ್ಲಿ ಬಹುಪಾಲು ಜನಕ್ಕೆ ಈ ಸಮಸ್ಯೆ ಎದುರಾಗುತ್ತೆ. ಸುಮಾರು 21 ರಿಂದ 38 ರೋಗಿಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಅಫಾಸಿಯಾ ಅಂದ್ರೆ ಬೇರೆನೂ ಅಲ್ಲ, ನಮ್ಮ ಎಡಭಾಗದ ಮೆದುಳು ನಿಷ್ಕ್ರಿಯವಾಗುವುದು. ಸಂಪೂರ್ಣ ಕೆಲಸ ನಿಲ್ಲಿಸುವುದು. ಎಡ ಮೆದುಳಿನಿಂದಲೇ ನಾವು ಮಾತನಾಡುವುದಕ್ಕೆ ಆಗುವುದು ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಆಗುವುದು. ಅದು ನಿಷ್ಕ್ರಿಯಗೊಂಡರೆ ಸಾಕಷ್ಟು ಸಮಸ್ಯೆಯಾಗುತ್ತದೆ. ಇಂತಹವರಿಗೆ ಮ್ಯೂಸಿಕ್ ತೆರಪಿ ನೀಡಿದರೆ ಸಾಕಷ್ಟು ಆರೋಗ್ಯದಲ್ಲಿ ಬೆಳವಣಿಗೆ ಕಂಡುಬರುತ್ತಿದೆ. ಅದರಲ್ಲೂ ಕೂಡಾ ಏ ಮೇರೆ ವತನ್ ಹಾಡು ಕೇಳಿದ ರೋಗಿಗಳು ಬಹುಬೇಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಎಡ ಮೆದುಳು ನಿಷ್ಕ್ರಿಯಗೊಂಡವರಿಗೆ ಹಾಡು ಕೇಳಿಸಿದಾಗ ಮೊದಲು ಅವರಿಗೆ ಏನೂ ಅರ್ಥವಾಗುವುದಿಲ್ಲ. ಆದರೂ ಕೂಡಾ ಅವರು ಆ ಹಾಡನ್ನು ಕೇಳಿದಾಗ ಕೆಲ ಹೊತ್ತಿನ ನಂತರ ತೊದಲಲು ಆರಂಭಿಸುತ್ತಾರೆ. ಹಾಡೋದಕ್ಕೆ ಪ್ರಯತ್ನಪಡುತ್ತಾರೆ. ಯಾವಾಗ ರೋಗಿ ಹಾಡನನ್ನು ಗುನುಗೋದಕ್ಕೆ ಶುರು ಮಾಡುತ್ತಾನೋ ಆಗ ಎಡಮೆದುಳು ನಿಧಾನಕ್ಕಾಗಿ ಜಾಗರೂಕವಾಗುತ್ತಾ ಹೋಗುತ್ತದೆ. ಏ ಮೇರೆ ವತನ್ ಜೊತೆಗೆ ರಘುಪತಿ ರಾಘವಾ ರಾಜರಾಮ್ ಹಾಡನ್ನು ಕೂಡಾ ರೋಗಿಗಳಿಗೆ ಕೇಳಿಸಲಾಗುತ್ತಿದೆ.
ಇದನ್ನೂ ಓದಿ; Dry Fruits; ಖಾಲಿ ಹೊಟ್ಟೆಯಲ್ಲಿ ಈ ಒಣಹಣ್ಣುಗಳನ್ನು ತಿನ್ನಲೇಬಾರದು..!
ಮ್ಯೂಸಿಕ್ ಥೆರಪಿ ಪಡೆಯುತ್ತಿರುವ ರೋಗಿಗಳಲ್ಲಿ ಚೇತರಿಕೆ;
ಮ್ಯೂಸಿಕ್ ಥೆರಪಿ ಪಡೆಯುತ್ತಿರುವ ರೋಗಿಗಳಲ್ಲಿ ಚೇತರಿಕೆ; ವಿದೇಶಗಳಲ್ಲಿ ಮ್ಯೂಸಿಕ್ ಥೆರಪಿ ಈಗಾಗಲೇ ಬಳಸಲಾಗುತ್ತಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಬಗ್ಗೆ ಪ್ರಯೋಗ ಮಾಡಲಾಗುತ್ತಿದೆ. 60 ರೋಗಿಗಳಲ್ಲಿ 30 ರೋಗಿಗಳಿಗೆ ಸಾಮಾನ್ಯ ಚಿಕಿತ್ಸೆ, 30 ರೋಗಿಗಳಿಗೆ ಮ್ಯೂಸಿಕ್ ಥೆರಪಿ ನೀಡಲಾಗುತ್ತಿದೆ. ಇದರಿಂದ ವ್ಯತ್ಯಾಸ ಗಮನಿಸಲಾಗುತ್ತಿದೆ. ವೈದ್ಯೆ ದೀಪ್ತಿಯವರು ಕರ್ನಾಟಿಕ್ ಮ್ಯೂಸಿಕ್ ಕಲಿತಿರುವುದರಿಂದ ಅವರು ಕರ್ನಾಟಿಕ್ ಮ್ಯೂಸಿಕ್ ಬಳಸಿ ರೋಗಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಮೂರು ತಿಂಗಳಲ್ಲಿ ರೋಗಿಗಳಲ್ಲಿ ಆಗಿರುವ ಬದಲಾವಣೆ ಆಧಾರದ ಮೇಲೆ ಚಿಕಿತ್ಸೆ ಮುಂದುವರೆಸುವ ತೀರ್ಮಾನ ಮಾಡಲಾಗುತ್ತದೆ.