ಸಿಂಗಾಪುರದಲ್ಲಿ ಲಾಲೂ ಯಾದವ್ಗೆ ಕಿಡ್ನಿ ಕಸಿ ಯಶಸ್ವಿ
ಸಿಂಗಾಪುರ; ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಕಿಡ್ನಿ ಕಸಿ ಯಶಸ್ವಿಯಾಗಿದೆ. ಲಾಲೂ ಪ್ರಸಾದ್ ಯಾದವ್ ಅವರಿಗೆ ಎರಡೂ ಕಿಡ್ನಿ ವೈಫಲ್ಯವಾಗಿತ್ತು. ಕಿಡ್ನಿ ಟ್ರಾನ್ಸ್ಪ್ಲಾಂಟ್ ಮಾಡಿದರೆ ಮಾತ್ರ ಬದುಕುತ್ತಾರೆ ಎಂದು ವೈದ್ಯರು ಹೇಳಿದ್ದರು. ಈ ಕಾರಣದಿಂದಾಗಿ ಸಿಂಗಾಪುರದ ಖಾಸಗಿ ಆಸ್ಪತ್ರೆಯಲ್ಲಿ ಲಾಲೂ ಅವರಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಆಗಿದ್ದು, ಅದು ಯಶಸ್ವಿಯಾಗಿದೆ. ಲಾಲೂ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಲಾಲು ಅವರಿಗೆ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಕಿಡ್ನಿ ದಾನ ಮಾಡಿದ್ದಾರೆ. ಮೊದಲು ಮಗಳು ಕಿಡ್ನಿ ನೀಡುತ್ತೇನೆ ಎಂದಾಗ ಲಾಲೂ ಒಪ್ಪಿರಲಿಲ್ಲ. ಅನಂತರ ಕುಟುಂಬದವರ ಒತ್ತಾಯದ ಮೇರೆಗೆ ಕಿಡ್ನಿ ಕಸಿ ಮಾಡಿಸಿಕೊಳ್ಳಲು ಒಪ್ಪಿದರು. ಸದ್ಯ ಲಾಲೂ ಹಾಗೂ ರೋಹಿಣಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.