Health

ತೆಲಂಗಾಣದಲ್ಲಿ ಒಮಿಕ್ರಾನ್‌ ಹೆಚ್ಚಳ; ಒಂದೇ ದಿನ 14 ಕೇಸ್‌ ಪತ್ತೆ..!

ಹೈದರಾಬಾದ್‌: ತೆಲಂಗಾಣದಲ್ಲಿ ಒಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ದೆಹಲಿ, ಮಹಾರಾಷ್ಟ್ರದ ನಂತರ ಮೂರನೇ ಸ್ಥಾನದಲ್ಲಿದೆ ತೆಲಂಗಾಣ ರಾಜ್ಯ. ಡಿಸೆಂಬರ್‌ ೨೨ರಂದು ತೆಂಗಾಣದಲ್ಲಿ ಒಟ್ಟು 14 ಮಂದಿಗೆ ಒಮಿಕ್ರಾನ್‌ ಇರುವುದು ದೃಢಪಟ್ಟಿದೆ. ಇದರಿಂದಾಗಿ ತೆಲಂಗಾಣದಲ್ಲಿ ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ 38 ಕ್ಕೆ ಏರಿದೆ.

ಎಲ್ಲಾ ಒಮಿಕ್ರಾನ್‌ ಸೋಂಕಿತರನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ. ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ಅವರ ಬಗ್ಗೆ ವೈದ್ಯರು ತೀವ್ರ ನಿಗಾ ಇಟ್ಟಿದ್ದಾರೆ. ಇನ್ನೊಂದೆಡೆ ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚಿ, ಅವರಿಗೂ ಪರೀಕ್ಷೆ ನಡೆಸಲಾಗುತ್ತಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಾಗಲೇ ದೇಶದಲ್ಲಿ ಒಮಿಕ್ರಾನ್‌ ಸೋಂಕಿತರ ಸಂಖ್ಯೆ ೩೦೦ ದಾಟಿದೆ. ಕೊವಿಡ್‌ ರೋಗಿಗಳಿಗಿಂತ ಒಮಿಕ್ರಾನ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಭೀತಿಗೆ ಕಾರಣವಾಗಿದೆ.

Share Post