DistrictsHealth

ಟ್ರ್ಯಾಕ್ಟರ್‌ ಮೇಲಿಂದ ಬಿದ್ದು 6 ವರ್ಷದ ಬಾಲಕಿ ಸಾವು!

ವಿಜಯನಗರ; ಅಮಾವಾಸ್ಯೆ ಪೂಜೆ ಮಾಡಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ ಮೇಲೆ ಹತ್ತಿದ್ದ 6 ವರ್ಷದ ಬಾಲಕಿಯೊಬ್ಬಳು ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ.. ಮನೆ ಮುಂದೆ ಟ್ರ್ಯಾಕ್ಟರ್‌ ಮೇಲೆ ನಿಲ್ಲಿಸಿದ್ದಾಗ ಅದರ ಟ್ರ್ಯಾಲಿಯಲ್ಲಿ ಹತ್ತಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾಲಕಿ ಕೆಳಗೆ ಬಿದ್ದಿದ್ದಾಳೆ.. ಇದರಿಂದಾಗಿ ತೀವ್ರ ಗಾಯವಾಗಿ ಸಾವನ್ನಪ್ಪಿದ್ದಾಳೆ..
ದಾವಣಗೆರೆ ಜಿಲ್ಲೆ ಹರಪ್ಪನಹಳ್ಳಿ ತಾಲ್ಲೂಕಿನ ಜಿಟ್ಟಿನಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಆರು ವರ್ಷದ ದಿಶಾಗೌಡ ಎಂಬಾಕೆಯೇ ಸಾವನ್ನಪ್ಪಿದ ಬಾಲಕಿಯಾಗಿದ್ದಾಳೆ.. ವಕೀಲ ಸಿದ್ದನಗೌಡ ಹಾಗೂ ಸವಿತಾ ಗೌಡ ಪುತ್ರಿ ದಿಶಾ ಗೌಡ ಎಂದು ತಿಳಿದುಬಂದಿದೆ.. ಟ್ರ್ಯಾಕ್ಟರ್‌ ಮೇಲಿಂದ ಬೀಳುತ್ತಿದ್ದಂತೆ ತೀವ್ರ ಗಾಯವಾಗಿದೆ.. ಕೂಡಲೇ ಆಕೆಯನ್ನು ಹರಪನಹಳ್ಳಿ ಆಸ್ಪತ್ರೆಗೆ ದಾಖಲಿಸಲಾಯಿತು.. ಆದ್ರೆ ಅಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲದ ಕಾರಣ ವೈದ್ಯರು ದಾವಣಗೆರೆಗೆ ಹೋಗುವಂತೆ ಹೇಳಿದ್ದಾರೆ.. ಆಂಬುಲೆನ್ಸ್‌ನಲ್ಲಿ ದಾವಣಗೆರೆಗೆ ಹೋಗುವಾಗ ಮಾರ್ಗಮಧ್ಯೆ ಮಗು ಸಾವನ್ನಪ್ಪಿದೆ..
ಈ ಬಗ್ಗೆ ಅರಸೀಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ..

Share Post