HealthLifestyle

ಮಾನಸಿಕ ಒತ್ತಡದಲ್ಲಿದ್ದೀರಾ..?; ಹಾಗಾದರೆ ಈ ಮಂತ್ರಗಳನ್ನು ಜಪಿಸಿ!

ಎಲ್ಲರದ್ದೂ ಬ್ಯುಸಿ ಲೈಫ್‌.. ಎಲ್ಲದರಲ್ಲೂ ಆತುರ.. ಊಟ, ನಿದ್ದೆ, ಕೆಲಸ ಎಲ್ಲವನ್ನೂ ರಪರಪ ಅಂತ ಆಗಿಬಿಡಬೇಕು.. ಈ ಫಾಸ್ಟ್‌ ಲೈಫ್‌ನಿಂದಾಗಿ ಎಲ್ಲರೂ ಮಾನಸಿಕ ಒತ್ತಡಕ್ಕೊಳಗಾಗುತ್ತಿದ್ದಾರೆ.. ವ್ಯವಹಾರಿಕ ಸಮಸ್ಯೆ, ಕೆಲಸದ ಸ್ಥಳದಲ್ಲಿನ ಸಮಸ್ಯೆ, ಆರ್ಥಿಕ ಸಮಸ್ಯೆ ಮತ್ತು ಕೌಟುಂಬಿಕ ಸಮಸ್ಯೆಗಳಿಂದಾಗಿ ಜನ ಒತ್ತಡ ಮತ್ತು ಆತಂಕಕ್ಕೊಳಗಾಗುತ್ತಿದ್ದಾರೆ.. ಮನೆಯ ಯಜಮಾನನಿಗೆ ಮಾನಸಿಕ ಒತ್ತಡ ಶುರುವಾದರೆ ಅದು ಮನೆ ಮಂದಿಗೆಲ್ಲಾ ವರ್ಗಾವಣೆಯಾಗುತ್ತದೆ.. ಹೀಗಾಗಿ ಪುಟ್ಟ ಮಕ್ಕಳು, ಮಹಿಳೆಯರು ಕೂಡಾ ಒತ್ತಡದ ಜೀವನ ನಡೆಸುತ್ತಿದ್ದಾರೆ.. ಹೀಗಾಗಿ ಪ್ರತಿಯೊಬ್ಬರಿಗೂ ಒತ್ತಡದಿಂದ ಮುಕ್ತಿ ಸಿಗಬೇಕು.. ಜೀವನದಲ್ಲಿ ಶಾಂತಿ ನೆಲೆಸಬೇಕು.. ಆದ್ರೆ ಬಹುತೇಕರ ಬಾಳಲ್ಲಿ ಅದು ಸಾಧ್ಯವಾಗ್ತಿಲ್ಲ.. ಒತ್ತಡ ನಿವಾರಣೆಯಾಗಬೇಕಾದರೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.. ಇರೋದು ಅದೊಂದೇ ದಾರಿ.. ನಮ್ಮ ಮನಸ್ಸು ಆಧ್ಯಾತ್ಮಿಕದತ್ತ ವಾಲಿದರೆ ಸಹಜವಾಗಿಯೇ ನಮ್ಮ ಒತ್ತಡ ಕಡಿಮೆಯಾಗುತ್ತಾ ಹೋಗುತ್ತದೆ.. ಹಿಂದೂ ಧರ್ಮದಲ್ಲಿ ಒತ್ತಡವನ್ನು ಕಡಿಮೆ ಮಾಡಲು ಹಲವು ಮಾರ್ಗಗಳಿವೆ.. ಅದರಲ್ಲಿ ಮಂತ್ರಪಠಣೆ ಕೂಡಾ ಒಂದು… ಬೆಳಗ್ಗೆ ಏಳುವ ಮುನ್ನ ಹಲವು ಮಂತ್ರಗಳನ್ನು ಪಠಣೆ ಮಾಡುವುದರಿಂದ ಒತ್ತಡದಿಂದ ಮುಕ್ತಿ ಪಡೆಯಬಹುದು..

ಇದನ್ನೂ ಓದಿ; ಬೇಸಿಗೆಯಲ್ಲಿ ಸನ್ ಟ್ಯಾನ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಓಂ ಮಂತ್ರ ಪಠಣೆ;

ಓಂಕಾರ ಮನಸ್ಸು ನಿರಾಳ ಮಾಡುತ್ತದೆ.. ಬೆಳಗ್ಗೆ ಎದ್ದ ಕೂಡಲೇ ಓಂ ಎಂದು ಏಕಾಗ್ರತೆಯಿಂದ ಜಪಿಸಿದರೆ ಒತ್ತಡ ದೂರವಾಗುತ್ತದೆ.. ಮಾನಸಿಕ ಒತ್ತಡ ಕಡಿಮೆಯಾಗಲು ಓಂಕಾರ ಬಹಳ ಉಕಯೋಗಕಾರಿ.. ಓಂ ಎಂದು ಪಠಣೆ ಮಾಡದಿದ್ದರೂ, ಓಂಕಾರ ಸಂಗೀತ ಕೇಳುತ್ತಾ ಏಕಾಗ್ರತೆಯಿಂದ ಧ್ಯಾನ ಮಾಡಿದರೆ ಸಾಕು ನಮ್ಮ ಮನಸ್ಸು ಶಾಂತವಾಗುತ್ತದೆ.. ಇದರಿಂದ ಬಹುಬೇಗ ಒತ್ತಡ ನಿವಾರಣೆಯಾಗುತ್ತದೆ.. ಆ ದಿನದ ಕೆಲಸಗಳು ಸರಾಗವಾಗಿ ನಡೆಯುತ್ತವೆ..

ಇದನ್ನೂ ಓದಿ; ಡಸ್ಟ್‌ ಅಲರ್ಜಿಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ..?; ಹಾಗಾದರೆ ಇದನ್ನು ಓದಿ..

ಗಾಯತ್ರಿ ಮಂತ್ರ;

ಗಾಯತ್ರಿ ಮಂತ್ರ ಪಠಣೆ ತುಂಬಾನೇ ಒಳ್ಳೆಯದು.. ಅದೂ ಕೂಡಾ ಬೆಳಗ್ಗೆ ಎದ್ದಾಗ ಗಾಯತ್ರಿ ಪಠಣ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.. ಒತ್ತಡ, ಆತಂಕಗಳು ಇದರಿಂದ ಕಡಿಮೆಯಾಗುತ್ತವೆ.. ಹೀಗಾಗಿಯೇ ಅನೇಕ ಶಾಲೆಗಳಲ್ಲಿ ಮಕ್ಕಳಿಗೆ ಬೆಳಿಗ್ಗೆ ಗಾಯತ್ರಿ ಮಂತ್ರ ಹೇಳಿಕೊಡಲಾಗುತ್ತದೆ.. ಗಾಯತ್ರಿ ಮಂತ್ರವು ಹೆಚ್ಚಿನ ದೈವಿಕ ಶಕ್ತಿಯನ್ನು ಹೊಂದಿದೆ. ಪ್ರತಿದಿನ ಇದನ್ನು ಪಠಣೆ ಮಾಡುವುದರಿಂದ ಮನಸ್ಸಿನಲ್ಲಿ ನಕಾರಾತ್ಮಕತೆ ಹೋಗಿ ಒಳ್ಳೆಯ ಆಲೋಚನೆಗಳು ಹೆಚ್ಚಾಗುತ್ತವೆ.. ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ದೂರವಾದರೆ ತನ್ನಿಂದತಾನೇ ಮಾನಸಿಕ ಒತ್ತಡ ಕಡಿಮೆಯಾಗುತ್ತಾ ಹೋಗುತ್ತದೆ.. ಈ ಮೂಲಕ ನಮ್ಮ ಭಾವನೆಗಳನ್ನು ನಿಯಂತ್ರಿಸುವ ಶಕ್ತಿ ನಮ್ಮದಾಗುತ್ತದೆ.. ಯಾವಾಗ ಕೋಪ, ತಾಪವನ್ನು ನಿಯಂತ್ರಿಸುವ ಶಕ್ತಿ ನಮಗೆ ಬರುತ್ತದೋ ಆಗ ತನ್ನಿಂದ ತಾನೇ ಮನಸ್ಸು ಶಾಂತವಾಗುತ್ತಾ ಹೋಗುತ್ತದೆ… ಅನಗತ್ಯ ಜಗಳಗಳು, ಕೋಪಗಳು ಬರೋದಿಲ್ಲ.. ಮನಸ್ಸು ಯಾವಾಗಲೂ ಶಾಂತಿ ಬಯಸಲು ಶುರು ಮಾಡುತ್ತದೆ..

ಇದನ್ನೂ ಓದಿ; ಹುಡುಗರಲ್ಲಿ ಸುಂದರ ಹುಡುಗಿಯರು ಇಷ್ಟಪಡೋದು ಇದೇನಂತೆ!

ಹನುಮಾನ್ ಚಾಲೀಸಾ;

ಹನುಮಾನ್‌ ಚಾಲೀಸಾ ತುಂಬಾನೇ ಪವರ್‌ಫುಲ್‌ ಮಂತ್ರ.. ಬಹುತೇಕರು ಇದನ್ನು ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಪಠಣೆ ಮಾಡುತ್ತಾರೆ.. ಈ ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸಬೇಕು.. ಇದರಿಂದಾಗಿ ನಾವು ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಹನುಮಾನ್ ಚಾಲೀಸಾವನ್ನು ಓದುವವರಲ್ಲಿ ಧೈರ್ಯ ಹೆಚ್ಚಾಗುತ್ತದೆ.. ಎಲ್ಲವನ್ನೂ ಎದುರಿಸುವ ಶಕ್ತಿ ಕೂಡ ಹೆಚ್ಚಾಗುತ್ತದೆ. ನಿಮ್ಮಲ್ಲಿರುವ ಯಾವುದೇ ಒತ್ತಡ ಮತ್ತು ಭಯ ಮಾಯವಾಗುತ್ತದೆ.

ಮಹಾ ಮೃತ್ಯುಂಜಯ ಮಂತ್ರ:

ಇದು ಸಾವನ್ನೇ ಗೆಲ್ಲುವ ತಾಕತ್ತಿರುವ ಮಂತ್ರ.. ಹೀಗಾಗಿಯೇ ಇದನ್ನು ಪವರ್‌ಫುಲ್‌ ಮಂತ್ರ ಎಂದೇ ಕರೆಯಲಾಗುತ್ತದೆ.. ಶಿವನ ಈ ಮಂತ್ರ ಅತ್ಯಂತ ಶಕ್ತಿಶಾಲಿಯಾಗಿದೆ. ಮೃತ್ಯುಂಜಯ ಮಂತ್ರವನ್ನು ಪ್ರತಿನಿತ್ಯ ಜಪಿಸಬೇಕು.. ಆಗ ನಮ್ಮಲ್ಲಿನ ಭಯ, ಒತ್ತಡ ಮತ್ತು ಆತಂಕದಂತಹ ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ. ನಮ್ಮ ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ.. ನಾವು ಯಾವುದೇ ಕ್ಷೇತ್ರದಲ್ಲಿ ಜಯ ಸಾಧಿಸಬೇಕಾದರೆ ಮೊದಲು ನಮ್ಮ ಮನಸ್ಸಿನಲ್ಲಿ ಶಾಂತಿ ಇರಬೇಕು.. ಎಲ್ಲವನ್ನೂ ನಿಭಾಯಿಸುವ ತಾಳ್ಮೆ ಇರಬೇಕು.. ಅದನ್ನು ಮಹಾ ಮೃತ್ಯುಂಜಯ ಮಂತ್ರ ನೀಡುತ್ತದೆ..

ಇದನ್ನೂ ಓದಿ; ಅಲಸಂದೆ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆಯಾ..?

ಓಂ ನಮಃಶಿವಾಯ:

ಓಂ ನಮಶಿವಾಯ ಮಂತ್ರ ನಮ್ಮಲ್ಲಿನ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.. ಹೀಗಾಗಿ ಒತ್ತಡದಲ್ಲಿರುವವರು ಬಳಸಬಹುದಾದ ಶಕ್ತಿಶಾಲಿ ಮಂತ್ರಗಳಲ್ಲಿ ಇದೂ ಕೂಡಾ ಒಂದಾಗಿದೆ. ಈ ಮಂತ್ರವನ್ನು ಏಕಾಗ್ರತೆಯಿಂದ ಜಪಿಸುವುದರಿಂದ ಯಾವುದೇ ಭಯವಿಲ್ಲದೆ ಶಾಂತವಾಗಿರಬಹುದು.

ಇದನ್ನೂ ಓದಿ; ಪಂಚಾಮೃತ ಅಂದ್ರೆ ಏನು..?; ಇದನ್ನು ತಯಾರು ಮಾಡೋದು ಹೇಗೆ..?

Share Post