DistrictsHealth

ಒಂದೇ ಗ್ರಾಮದ ಐವರ ದುರ್ಮರಣ!; ಕಲುಷಿತ ನೀರು ಸೇವನೆ?

ವಿಜಯನಗರ; ಒಂದೇ ಗ್ರಾಮದಲ್ಲಿ ಗರ್ಭಿಣಿ ಸೇರಿ ಐವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.. ಕಲುಷಿತ ನೀರು ಸೇವನೆಯಿಂದ ಈ ದರ್ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಟಿ ತುಂಬಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ..
ಒಂದು ವಾರದಿಂದ ಗ್ರಾಮದ ಜನರು ವಾಂತಿ ಬೇಧಿಯಿಂದ ಬಳಲುತ್ತಿದ್ದಾರೆ.. ಒಂದು ವಾರದಲ್ಲಿ ಸುಮಾರು ಐದು ಮಂದಿ ಸಾವನ್ನಪ್ಪಿದ್ದಾರೆ.. ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಪೈಪ್‌ನಲ್ಲಿ ಕಲುಷಿತ ನೀರು ಬರುತ್ತಿದೆ..ಇದನ್ನು ಅರಿಯದೇ ಜನ ಕುಡಿದಿದ್ದು, ಇದರಿಂದ ಜನರು ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಆರೋಪ ಮಾಡಲಾಗಿದೆ..
ಗರ್ಭಿಣಿ ನಿಂಗಮ್ಮ ಎಂಬುವವರು ವಾಂತಿ ಬೇಧಿಯಿಂದ ತೀವ್ರ ಅಸ್ವಸ್ಥರಾಗಿದ್ದರು.. ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.. ಆದ್ರೆ ಕಾಯಿಲೆ ಉಲ್ಬಣಗೊಂಡು ಗರ್ಭದಲ್ಲಿನ ಮಗು ಹಾಗೂ ಮಹಿಲೆ ಇಬ್ಬರೂ ಸಾವನ್ನಪ್ಪಿದ್ದಾರೆ.. ನಂತರ ವಾರದಿಂದೀಚೆಗೆ ಗ್ರಾಮದ ಗೌರಮ್ಮ, ಮಹಾಂತೇಶ್‌, ಹನುಮಂತಪ್ಪ ಹಾಗೂ ಎಂಟು ತಿಂಗಳ ಗಂಡು ಮಗು ಕೂಡಾ ಸಾವನ್ನಪ್ಪಿದೆ.. ಸುಮಾರು 50ಕ್ಕೂ ಹೆಚ್ಚು ಮಂದಿ ವಾಂತಿ ಬೇಧಿಯಿಂದ ಬಳಲುತ್ತಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಆರೋಗ್ಯ ಇಲಾಖೆ ಅಧಿಕಾರಿಗಳು ಘಟನೆಗೆ ಕಾರಣವನ್ನು ಇನ್ನೂ ದೃಢಪಡಿಸಿಲ್ಲ.. ಸದ್ಯ ಪೂರೈಕೆಯಾಗಿರುವ ನೀರನ್ನು ತಪಾಸಣೆಗೆ ಕಳುಹಿಸಲಾಗಿದೆ..

 

Share Post