EconomyLifestyle

ಪೋಸ್ಟಾಫೀಸ್‌ ಆರ್‌ಡಿ; ತಿಂಗಳಿಗೆ 5 ಸಾವಿರ ಹೂಡಿಕೆ, ಕೈಗೆ ಬರೋದು 8 ಲಕ್ಷ ರೂಪಾಯಿ!

ಬೆಂಗಳೂರು; ಬ್ಯಾಂಕ್‌ ಹಾಗೂ ಪೋಸ್ಟಾಫೀಸ್‌ಗಳಲ್ಲಿ ರಿಕರಿಂಗ್‌ ಡೆಪಾಸಿಟ್‌ ಸ್ಕೀಂ ಬಗ್ಗೆ ನಿಮಗೆ ಗೊತ್ತೇ ಇರುತ್ತೆ.. ಪ್ರತಿ ತಿಂಗಳು ಇಂತಿಷ್ಟು ಎಂದು ನೀವು ಹಣ ಹೂಡಿಕೆ ಮಾಡಿದರೆ ನಿಮಗೆ ಕೊನೆಗೆ ದೊಡ್ಡ ಮೊತ್ತದ ರಿಟರ್ನ್‌ ಬರುತ್ತೆ.. ಇದು ಒಂದು ಸುರಕ್ಷಿತವಾದ ಠೇವಣಿ ವಿಧಾನವಾಗಿದೆ.. ಜೊತೆಗೆ ಪೋಸ್ಟ್‌ ಆಫೀಸ್‌ನಲ್ಲಿ ನೀವು ಹೂಡಿಕೆ ಮಾಡಿದರೆ, ಹೆಚ್ಚಿನ ಬಡ್ಡಿ ಕೂಡಾ ಸಿಗಲಿದೆ..

ಇದನ್ನೂ ಓದಿ; ದಸರಾ ಬಳಿಕ ಸಂಪುಟ ಸರ್ಜರಿಯಾಗುತ್ತಾ..?; ವೇಣುಗೋಪಾಲ್‌, ಸುರ್ಜೇವಾಲಾ ಗರಂ ಆಗಿದ್ದೇಕೆ..?

ಪೋಸ್ಟ್‌ಆಫೀಸ್‌ ಆರ್‌ಡಿ ಸ್ಕೀಂ ಮೆಚ್ಯೂರಿಟಿ ಸಮಯ 5 ವರ್ಷಗಳು.. ಅನಂತರ ನೀವು ಬಡ್ಡ ಸಮೇತ ಹಣವನ್ನು ವಾಪಸ್‌ ಪಡೆಯಬಹುದು.. ನಿಮಗೆ ಆಗಲೇ ಬೇಡ ಎಂದರೆ ಇನ್ನೂ ಐದು ವರ್ಷ ಅದೇ ಸ್ಕೀಂ ಮುಂದುವರೆಸುವ ಅವಕಾಶವೂ ಇರುತ್ತದೆ.. ಜೊತೆಗೆ ನಿಮಗೆ ಅವಶ್ಯಕತೆ ಇದ್ದರೆ ಮೂರು ವರ್ಷದ ನಂತರ ಪ್ರೀ ಮೆಚ್ಯೂರ್‌ ವಿತ್‌ಡ್ರಾ ಮಾಡೋದಕ್ಕೂ ಇಲ್ಲಿ ಅವಕಾಶವಿದೆ.. ಕೇಂದ್ರ ಸರ್ಕಾರ ಇತ್ತೀಚೆಗೆ ಪೋಸ್ಟ್‌ ಆಫೀಸ್‌ ಆರ್‌ಡಿ ಸ್ಕೀಂ ಬಡ್ಡಿ ದರಗಳನ್ನು ಪ್ರಕಟಿಸಿದೆ.. ಪ್ರಸ್ತುತ ಇದರಲ್ಲಿ 6.7ರಷ್ಟು ಬಡ್ಡಿ ನೀಡಲಾಗುತ್ತಿದೆ.. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಬದಲಾಗುತ್ತಿರುತ್ತದೆ.. ಇದರಿಂದಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಲಾಭ ಹೆಚ್ಚು..

ಇದನ್ನೂ ಓದಿ; ಶ್ರಾವಣದಲ್ಲಿ ಈ ರಾಶಿಯವರಿಗೆ ರಾಜಯೋಗ!; ಲಕ್ಷ್ಮೀ ಸಂಚಾರದಿಂದ ಅಧಿಕ ಲಾಭ!

ತಿಂಗಳಿಗೆ 5 ಸಾವಿರ ರೂ. ಜಮೆ ಮಾಡಿದರೆ 8 ಲಕ್ಷ ರೂ. ಬರುತ್ತೆ!;
ನೀವು ಪೋಸ್ಟ್‌ ಆಫೀಸ್‌ ಆರ್‌ಡಿ ಸ್ಕೀಂನಲ್ಲಿ ಪ್ರತಿ ತಿಂಗಳು 5 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ 5 ವರ್ಷಕ್ಕೆ ನೀವು 3 ಲಕ್ಷ ರೂಪಾಯಿ ಹೂಡಿಕೆ ಮಾಡಿರುತ್ತೀರಿ. ಆಗ ನಿಮಗೆ 6.7ರ ಬಡ್ಡಿ ದರದಲ್ಲಿ ಒಟ್ಟು 56,800 ರೂಪಾಯಿ ಬಡ್ಡಿ ಬರುತ್ತದೆ.. ಅಂದರೆ ಐದು ವರ್ಷಕ್ಕೆ ನಿಮಗೆ ಬಡ್ಡಿ ಸೇರಿ ಒಟ್ಟು 3,56,800 ರೂಪಾಯಿ ಬರುತ್ತದೆ. ಆದ್ರೆ ನೀವು ಈ ಯೋಜನೆಯನ್ನು ಇನ್ನೂ ಐದು ವರ್ಷಕ್ಕೆ ಮುಂದುವರೆಸಬೇಕು. ಆ ನೀವು ಹೂಡಿಕೆ ಮಾಡಿದ ಹಣ 6 ಲಕ್ಷ ರೂಪಾಯಿ ಆಗುತ್ತದೆ. ಅದರ ಮೇಲೆ ಬಡ್ಡಿ 2,54,300 ರೂಪಾಯಿ ಬರುತ್ತದೆ. ಅಂದರೆ ಹತ್ತು ವರ್ಷಕ್ಕೆ ನಿಮ್ಮ ಕೈಗೆ ಬರೋಬ್ಬರಿ 8,54,300 ರೂಪಾಯಿ ಬರುತ್ತದೆ.

ಇದನ್ನೂ ಓದಿ; ವಾಕಿಂಗ್‌ ಮಾಡುತ್ತಿದ್ದ ಮಹಿಳೆಯನ್ನು ಬಲವಂತವಾಗಿ ಚುಂಬಿಸಿದ ಆಗಂತುಕ!

Share Post