ಚೆನ್ನೈನಲ್ಲಿ ಕ್ಯಾಬ್ ಡ್ರೈವರ್ ಖಾತೆಗೆ ಬಂತು ಬರೋಬ್ಬರಿ 9000 ಕೋಟಿ ರೂಪಾಯಿ!!
ಚೆನ್ನೈ; ಬ್ಯಾಂಕ್ ಅಧಿಕಾರಿಗಳ ಎಡವಟ್ಟಿನಿಂದ ಕ್ಯಾಬ್ ಡ್ರೈವರ್ ಒಬ್ಬರ ಅಕೌಂಟ್ಗೆ ಬರೋಬ್ಬರಿ 9 ಸಾವಿರ ಕೋಟಿ ರೂಪಾಯಿ ಜಮೆಯಾಗಿತ್ತು. ಆದ್ರೆ ಅರ್ಧ ಗಂಟೆಯೊಳಗೇ ಎಚ್ಚೆತ್ತುಕೊಂಡು ಅಧಿಕಾರಿಗಳು ಅದನ್ನು ವಾಪಸ್ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪಳನಿಯ ನೈಕ್ಕರಪಟ್ಟಿ ಮೂಲದ ರಾಜ್ಕುಮಾರ್ ಎಂಬ ಕ್ಯಾಬ್ ಚಾಲಕನ ಅಕೌಂಟ್ಗೆ 9000 ಕೋಟಿ ರೂಪಾಯಿ ಜಮೆಯಾಗಿದೆ. ಇದರ ಮೆಸೇಜ್ ಬರುತ್ತಿದ್ದಂತೆ ಎಷ್ಟು ಸೊನ್ನೆಗಳಿವೆ, ಅದು ಎಷ್ಟು ಮೊತ್ತದ ಹಣ ಎಂದು ಎಣಿಸೋದಕ್ಕೂ ಆತನಿಗೆ ಗೊತ್ತಾಗಿಲ್ಲ. ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ ನಿಂದ ಜಮೆಯಾಗಿದ್ದು, ಅಪಾರ ಪ್ರಮಾಣದ ಹಣ ಬಂದಿರುವುದು ನೋಟಿ ಚಾಲಕ ರಾಜ್ಕುಮಾರ್ ಖುಷಿಯಾಗಿದ್ದಾನೆ.
ಕೂಡಲೇ ಈ ಹಣವನ್ನು ಬೇರೆ ಕಡೆ ವರ್ಗಾವಣೆ ಮಾಡಲು ತೀರ್ಮಾನಿಸಿದ್ದಾನೆ. ಬೇಗಬೇಗನೆ ಆತ 21000 ಸಾವಿರ ರೂಪಾಯಿಯನ್ನು ಸ್ನೇಹಿತರಿಗೆ ವರ್ಗಾವಣೆ ಮಾಡಿದ್ದಾನೆ. ಇನ್ನೂ ಒಂದಷ್ಟು ಹಣ ವರ್ಗಾವಣೆ ಮಾಡಬೇಕು ಎಂದುಕೊಳ್ಳುತ್ತಿರುವಾಗಲೇ ಆತನ ಅಕೌಂಟ್ ನಲ್ಲಿ ಹಣ ಜೀರೋ ಆಗಿದೆ. ಬ್ಯಾಂಕ್ ಅಧಿಕಾರಿಗಳು ಅರ್ಧ ಗಂಟೆಯಲ್ಲೇ ಎಚ್ಚೆತ್ತುಕೊಂಡು ಹಣವನ್ನು ಪಾಸ್ ತೆಗೆದುಕೊಂಡಿದ್ದಾರೆ.