ಮಗು ಬೇಕು ಎಂದ ಗಂಡನಿಗೆ 3ನೇ ಮದುವೆ ಮಾಡಿದ ಪತ್ನಿಯರು!
ಆಂಧ್ರಪ್ರದೇಶ; ಇನ್ನೊಂದು ಮಗು ಬೇಕು ಎಂದು ಕೇಳಿದ ಗಂಡನಿಗೆ ಇಬ್ಬರೂ ಹೆಂಡತಿಯರು ಸೇರಿ ಮೂರನೇ ಮದುವೆ ಮಾಡಿಸಿದ್ದಾರೆ. ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪೆದ್ದಬಯಲು ಗ್ರಾಮದಲ್ಲಿ ನಡೆದಿದೆ..
ಪಂಡನ್ನ ಎಂಬ ವ್ಯಕ್ತಿಯೇ ಮೂರನೇ ಮದುವೆಯಾದ ವ್ಯಕ್ತಿಯಾಗಿದ್ದಾನೆ.. ಈ ಮೊದಲು ಮೊದಲ ಹೆಂಡತಿಗೆ ಮಕ್ಕಳಾಗಿರಲಿಲ್ಲ.. ಹೀಗಾಗಿ ಮೊದಲ ಹೆಂಡತಿಯೇ ಮುಂದೆ ನಿಂತು ಗಂಡನಿಗೆ ಎರಡನೇ ಮದುವೆಯನ್ನು 2007ರಲ್ಲಿ ಮಾಡಿಸಿದ್ದಳು.. ಅವರಿಗೆ ಒಬ್ಬ ಗಂಡು ಮಗ ಕೂಡಾ ಇದ್ದಾನೆ.. ಆದರೂ ಪಂಡನ್ನ ಇನ್ನು ಒಂದು ಮಗು ಬೇಕು ಅಂತ ತನ್ನ ಇಬ್ಬರೂ ಪತ್ನಿಯರನ್ನ ಕೇಳಿದ್ದಾನೆ.. ಆಗ ಇಬ್ಬರೂ ಪತ್ನಿಯರು ತನ್ನ ಗಂಡನಿಗೆ ಮೂರನೇ ಮದುವೆ ಮಾಡಲು ನಿರ್ಧಾರ ಮಾಡಿದ್ದಾರೆ..
ಪಂಡನ್ನಾ ಪತ್ನಿಯರಾದ ಪಾರ್ವತಮ್ಮ ಮತ್ತು ಅಪ್ಪಲಮ್ಮ ಮೂರನೇ ಮದುವೆಗೆ ಭರ್ಜರಿ ತಯಾರಿಯನ್ನು ನಡೆಸಿ ಪೆದ್ದಬಯಲು ಗ್ರಾಮದಲ್ಲಿ ಬ್ಯಾನರ್‌ಗಳನ್ನು ಕಟ್ಟಿಸಿ ಅದ್ದೂರಿ ಮದುವೆ ಮಾಡಿಸಲಾಗಿದೆ. ಇದೇ ತಿಂಗಳ 25 ರಂದು ಪಂಡನ್ನ ಮದುವೆ ವಿಜೃಂಭಣೆಯಿಂದ ನೆರವೇರಿತು. ಈ ಮದುವೆಯ ಮೂಲಕ ಪಂಡನ್ನಾಗೆ ಪಾರ್ವತಮ್ಮ, ಅಪ್ಪಲಮ್ಮ ಮತ್ತು ಲಕ್ಷ್ಮಿ ಎಂಬ ಮೂವರು ಪತ್ನಿಯರು ಸಿಕ್ಕಂತಾಗಿದೆ..