Politics

ದಸರಾ ಬಳಿಕ ಸಂಪುಟ ಸರ್ಜರಿಯಾಗುತ್ತಾ..?; ವೇಣುಗೋಪಾಲ್‌, ಸುರ್ಜೇವಾಲಾ ಗರಂ ಆಗಿದ್ದೇಕೆ..?

ಬೆಂಗಳೂರು; ಜೆಡಿಎಸ್‌-ಬಿಜೆಪಿ ಒಂದಾಗಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುತ್ತಿವೆ.. ವಾಲ್ಮೀಕಿ ನಿಗಮದ ಹಗರಣ ಹಾಗೂ ಮುಡಾ ನಿವೇಶನ ಹಂಚಿಕೆಯಲ್ಲಿನ ಅಕ್ರಮದ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಈ ಪಾದಯಾತ್ರೆ ನಡೆಯುತ್ತಿದೆ.. ಈ ಬೆನ್ನಲ್ಲೇ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು, ರಾಜ್ಯ ನಾಯಕರ ವಿರುದ್ಧ ಗರಂ ಆಗಿದ್ದಾರೆ.. ದಿಢೀರ್‌ ಎಂದು ಬೆಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್‌ ನಾಯಕರಾದ ಕೆ.ಸಿ.ವೇಣುಗೋಪಾಲ್‌ ಹಾಗೂ ರಣದೀಪ್‌ ಸುರ್ಜೇವಾಲಾ ಅವರು, ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಸಭೆ ನಡೆಸಿದ್ದಾರೆ.. ಈ ವೇಳೆ ಸಚಿವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಶ್ರಾವಣದಲ್ಲಿ ಈ ರಾಶಿಯವರಿಗೆ ರಾಜಯೋಗ!; ಲಕ್ಷ್ಮೀ ಸಂಚಾರದಿಂದ ಅಧಿಕ ಲಾಭ!

ಕೆಲ ಸಚಿವರ ಕಾರ್ಯವೈಖರಿ ಸರಿಯಿಲ್ಲ, ಸ್ವಂತ ಜಿಲ್ಲೆಗೆ ಸೀಮಿತರಾಗಿದ್ದಾರೆ.. ಅದು ಬಿಟ್ಟು ರಾಜ್ಯಾದ್ಯಂತ ಸಂಚಾರ ಮಾಡಬೇಕು.. ಜನರ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕು.. ಇನ್ನು ಬಿಜೆಪಿ-ಜೆಡಿಎಸ್‌ ನಾಯಕರು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ.. ಇದನ್ನು ಯಾರೂ ಕೂಡಾ ಗಟ್ಟಿಯಾಗಿ ವಿರೋಧ ಮಾಡುತ್ತಿಲ್ಲ.. ಸಿಎಂ, ಡಿಸಿಎಂ ಮಾತ್ರ ಮಾತನಾಡುತ್ತಿದ್ದಾರೆ.. ಉಳಿದವರು ಅಡ್ಜೆಸ್ಟ್‌ಮೆಂಟ್‌ ರಾಜಕೀಯ ಬಿಡಬೇಕು.. ಗಟ್ಟಿಯಾಗಿ ಧ್ವನಿ ಎತ್ತಬೇಕು.. ಬಿಜೆಪಿ ಸರ್ಕಾರದ ವೇಳೆಯಲ್ಲಿನ ಅಕ್ರಮಗಳ ಬಗ್ಗೆ ಮಾತನಾಡಿ ಎಂದು ಹೈಕಮಾಂಡ್‌ ನಾಯಕರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಶ್ರಾವಣದ ಮೊದಲ ದಿನವೇ ದುರಂತ; ವಿದ್ಯುತ್‌ ಸ್ಪರ್ಶಿಸಿ 9 ಮಂದಿ ದುರ್ಮರಣ!

ಎರಡು ತಿಂಗಳ ಕಾಲಾವಕಾಶ ಕೊಡಲಾಗಿದ್ದು, ಅಷ್ಟರೊಳಗೆ ಸಚಿವರು ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.. ಇಲ್ಲದಿದ್ದರೆ ಮಂತ್ರಿಮಂಡಲಕ್ಕೆ ಮೇಜರ್‌ ಸರ್ಜರಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ಕೂಡಾ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಮಂಡ್ಯದ ಈ ಬಾಲಕ ಸಾಯಿಬಾಬಾ ಮೂರನೇ ಅವತಾರವಂತೆ!

Share Post