Districts

State Budget; ವಿಭಜನೆಯಾಗಲಿದೆಯಾ ಬೆಳಗಾವಿ ಜಿಲ್ಲೆ..?; ಎರಡು ಹೊಸ ಜಿಲ್ಲೆ ಘೋಷಣೆ ಸಾಧ್ಯತೆ..!

ಬೆಳಗಾವಿ; ಇನ್ನೇನು ರಾಜ್ಯ ಬಜೆಟ್‌ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 15ನೇ ಬಜೆಟ್‌ ಮಂಡನೆಗೆ ಸಿದ್ಧವಾಗಿದೆ. ಈ ಬಜೆಟ್‌ ಒಂದು ರೀತಿಯಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲಾಗಿದೆ. ಜೊತೆಗೆ ಜನರಲ್ಲಿ ಕುತೂಹಲ ಕೂಡಾ ಹೆಚ್ಚಿದೆ. ಬೆಳಗಾವಿ ಜಿಲ್ಲೆ ವಿಭಜನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಎರಡು ನೂತನ ಜಿಲ್ಲೆಗಳ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕುತೂಹಲ ಮನೆ ಮಾಡಿದೆ.

ಇದನ್ನೂ ಓದಿ; Are you angry..?; ನೀವು ಶತ ಕೋಪಿಷ್ಠರಾ..?; ಹಾಗಾದ್ರೆ ಇದನ್ನು ಓದಿ ಕೂಲ್‌ ಆಗಿ..!

ಚಿಕ್ಕೋಡಿ, ಗೋಕಾಕ್‌ ಜಿಲ್ಲೆಗಳಾಗುತ್ತವಾ..?;
ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಅತಿದೊಡ್ಡ ಜಿಲ್ಲೆ… ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆ ರಾಜ್ಯ ರಾಜಕೀಯದ ಮೇಲೆ ಅತ್ಯಂತ ಪ್ರಭಾವ ಬೀರುತ್ತದೆ… ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳಿರುವ ಜಿಲ್ಲೆ ಕೂಡಾ ಇದೇ.. ಹೀಗಾಗಿ ಈ ಜಿಲ್ಲೆಯನ್ನು ವಿಭಜಿಸಬೇಕೆಂಬ ಕೂಗು ಇದ್ದೇ ಇದೆ… ಇದರಿಂದಾಗಿ ಚಿಕ್ಕೋಡಿ, ಗೋಕಾಕ ನೂತನ ಜಿಲ್ಲೆಗಳ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, ಕೆಲವರು ಬೆಳಗಾವಿ ಜಿಲ್ಲೆ ವಿಭಜನೆಗೆ ಆಗ್ರಹಿಸುತ್ತಿದ್ದರೆ, ಬೆಳಗಾವಿಯ ಹಲವು ರಾಜಕಾರಣಿಗಳಿಗೆ ಬೆಳಗಾವಿ ವಿಭಜನೆ ಇಷ್ಟವಿಲ್ಲ. ಇದರ ನಡುವೆ, ಸರ್ಕಾರ ಜಿಲ್ಲೆಯ ವಿಭಜನೆಯ ಸಾಹಸ ಮಾಡುತ್ತಾ ನೋಡಬೇಕು..
ಇದನ್ನೂ ಓದಿ; State Budget; ಇಂದು ರಾಜ್ಯ ಬಜೆಟ್‌; ಸಿದ್ದರಾಮಯ್ಯ ಬಜೆಟ್‌ ನಿರೀಕ್ಷೆಗಳೇನು..?

1997ರಲ್ಲೇ ಬೆಳಗಾವಿ ಜಿಲ್ಲೆ ವಿಭಜನೆ ಮಾಡಲಾಗಿತ್ತು;
ಅಂದಹಾಗೆ 1997ರಲ್ಲಿ ಜೆ.ಹೆಚ್‌.ಪಟೇಲ್‌ ರ ಸರ್ಕಾರ ಇತ್ತು… 1997-98ರ ಬಜೆಟ್‌ನಲ್ಲಿ ಪಟೇಲರು ಚಿಕ್ಕೋಡಿ ಹಾಗೂ ಗೋಕಾಕ್‌ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡಿದ್ದರು. ಆದ್ರೆ ನಂತರ ಗಡಿ ವಿವಾದ ಜೋರಾಗಿತ್ತು.. ಈ ಕಾರಣದಿಂದಾಗಿ, ಕೆಲವೇ ದಿನಗಳಲ್ಲಿ ಹೊಸ ಜಿಲ್ಲೆಗಳ ಘೋಷಣೆಯನ್ನು ವಾಪಸ್‌ ಪಡೆಯಲಾಗಿತ್ತು. ಅಂದಿನಿಂದ ಬೆಳಗಾವಿ ಜಿಲ್ಲೆಯ ವಿಭಜನೆಗೆ ಯಾರೂ ಕೈ ಹಾಕಿರಲಿಲ್ಲ. ಈ ಬಾರಿ ಬೆಳಗಾವಿ ಜಿಲ್ಲೆಯ ವಿಭಜನೆ ಆಗಬಹುದು ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಬೈಲಹೊಂಗಲ ಜಿಲ್ಲೆ ಘೋಷಣೆ ಮಾಡದಿದ್ದರೆ ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ. ಆದರೆ ಇಂದಿನ ಬಜೆಟ್​​ನಲ್ಲಿ ಯಾವೆಲ್ಲಾ ಹೊಸ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಘೋಷಿಸಲಿದ್ದಾರೆ? ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಕಳೆದ ಜುಲೈನಲ್ಲಿ ಸಿದ್ದರಾಮಯ್ಯನವರು ಬಜೆಟ್‌ ಮಂಡನೆ ಮಾಡಿದ್ದರು. ಅದು 3.27 ಲಕ್ಷ ಕೋಟಿ ರೂಪಾಯಿಯ ಗಾತ್ರದ್ದಾಗಿತ್ತು. ಈ ಬಾರಿ ಅದು 3.80 ಲಕ್ಷ ಕೋಟಿ ರೂಪಾಯಿ ಗಾತ್ರ ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ; Seema Hyder; ಅಯೋಧ್ಯೆಗೆ ಪಾದಯಾತ್ರೆ ಮಾಡ್ತಾಳಂತೆ ಸೀಮಾ ಹೈದರ್‌..!

 

 

Share Post