Economy

State Budget; ಇಂದು ರಾಜ್ಯ ಬಜೆಟ್‌; ಸಿದ್ದರಾಮಯ್ಯ ಬಜೆಟ್‌ ನಿರೀಕ್ಷೆಗಳೇನು..?

ಬೆಂಗಳೂರು; ಲೋಕಸಭಾ ಚುನಾವಣೆಗೆ ಎರಡು ತಿಂಗಳು ಬಾಕಿ ಇರುವ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್‌ ಮಂಡಿಸುತ್ತಿದ್ದಾರೆ. ಹೀಗಾಗಿ ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 15ನೇ ಬಜೆಟ್‌ ಇದಾಗಿದೆ. ಹೀಗಾಗಿ ಸಿದ್ದರಾಮಯ್ಯ ಪಾಲಿಗೆ ಇದು ದಾಖಲೆಯ ಬಜೆಟ್‌. ಈ ಬಜೆಟ್‌ನಲ್ಲಿ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವಾರು ಮಹತ್ವದ ಹಾಗೂ ಜನಪರ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.

ಬಜೆಟ್‌ ಗಾತ್ರ 50 ಸಾವಿರ ಕೋಟಿ ಹೆಚ್ಚಳ;

ಬಜೆಟ್‌ ಗಾತ್ರ 50 ಸಾವಿರ ಕೋಟಿ ಹೆಚ್ಚಳ; ಇಂದು ಬೆಳಗ್ಗೆ 10.15ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಮಂಡನೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಸಂಪುಟ ಸಭೆ ನಡೆಸಲಿದ್ದಾರೆ. ಕಳೆದ ವರ್ಷದ ಬಜೆಟ್‌ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ಇತ್ತು. ಈ ಬಾರಿ 50 ಸಾವಿರ ಕೋಟಿ ರೂಪಾಯಿ ಜಾಸ್ತಿಯಾಗಲಿದೆ. ಹೀಗಾಗಿ ಈ ಬಾರಿಯ ಬಜೆಟ್​ ಗಾತ್ರ 3.80 ಲಕ್ಷ ಕೋಟಿಗೆ ತಲುಪುವ ಸಾಧ್ಯತೆ ಇದೆ.

ಐದು ಗ್ಯಾರೆಂಟಿಗಳ ಮುಂದವರಿಕೆಗೆ ಹಣ ಹೊಂದಿಕೆ, ಬರ ಪರಿಹಾರ ಸರ್ಕಾರಕ್ಕೆ ಸಸವಾಲೆನಿಸಿದೆ. ಗ್ಯಾರಂಟಿ ಯೋಜನೆಗಳಿಗಾಗಿಯೇ 58,000 ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕಾಗಿದೆ. ಹೀಗಾಗಿ ಗ್ಯಾರಂಟಿ ವೆಚ್ಚದ ಮಧ್ಯೆ ಅಭಿವೃದ್ಧಿಗೆ ವೇಗ ಕೊಡುವ ಸಮತೋಲಿತ ಬಜೆಟ್ ಮಂಡಿಸಬೇಕಿದೆ.

ಸಿದ್ದರಾಮಯ್ಯ ಅವರ ದಾಖಲೆ ಬಜೆಟ್​ನ ನಿರೀಕ್ಷೆಗಳೇನು…?;

ಸಿದ್ದರಾಮಯ್ಯ ಅವರ ದಾಖಲೆ ಬಜೆಟ್​ನ ನಿರೀಕ್ಷೆಗಳೇನು…?;

ಮೇಕೆದಾಟು ಯೋಜನೆಗೆ ಅನುದಾನ ಘೋಷಣೆ ಸಾಧ್ಯತೆ

ಬೆಂಗಳೂರು ನಗರದಲ್ಲಿ ಟನಲ್ ನಿರ್ಮಾಣಕ್ಕೆ ಅನುದಾನ ಸಾಧ್ಯತೆ

ಸುವರ್ಣ ಮಹೋತ್ಸವ ಹೆಸರಿನಲ್ಲಿ ಅಭಿವೃದ್ಧಿ ಯೋಜನೆ

ಬ್ರ್ಯಾಂಡ್ ಬೆಂಗಳೂರಿಗೆ ಈ ಬಜೆಟ್​ನಲ್ಲಿ ಹೆಚ್ಚು ಒತ್ತು

ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಗೆ ಅನುದಾನ

ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಿಶೇಷ ಅನುದಾನ

ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 100 ಕೋಟಿ ರೂ. ಅನುದಾನ ನಿರೀಕ್ಷೆ

ರಾಜ್ಯ ಸರ್ಕಾರಿ ನೌಕರರಿಗೆ OPS ಘೋಷಿಸುವ ಸಾಧ್ಯತೆ

ಮದ್ಯದ ಮೇಲಿನ ಅಬಕಾರಿ ಸುಂಕ ಏರಿಕೆ ಸಾಧ್ಯತೆ

ಪ್ರಾದೇಶಿಕವಾರು ನೀರಾವರಿ ಯೋಜನೆಗಳಿಗೆ ಅನುದಾನ ಸಾಧ್ಯತೆ

ರಾಜ್ಯದ ಸಾಲದ ಹೊರೆ ಹೆಚ್ಚಾಗುವ ಸಾಧ್ಯತೆ;

ಈ ಬಾರಿ ರಾಜ್ಯ ಬಜೆಟ್‌ ಗಾತ್ರ 50 ಸಾವಿರ ಕೋಟಿ ರೂಪಾಯಿ ಹೆಚ್ಚಾಗಲಿದೆ. ಗ್ಯಾರೆಂಟಿ ಯೋಜನೆಗಳಿಗೆ ಹೆಚ್ಚು ಹಣ ಮೀಸಲಿಡಬೇಕಾಗಿರುವುದರಿಂದ ಬಜೆಟ್‌ ಗಾತ್ರ ಹೆಚ್ಚಿಸಲೇಬೇಕಿದೆ. ಇದಕ್ಕಾಗಿ ರಾಜ್ಯಕ್ಕೆ ಸಾಲದ ಹೊರೆ ಮತ್ತಷ್ಟು ಹೆಚ್ಚಾಗಲಿದೆ. ಪ್ರತಿ ವರ್ಷವೂ ಬಜೆಟ್ ಗಾತ್ರದಂತೆ ಸಾಲದ ಹೊರೆಯೂ ಹೆಚ್ಚಾಗ್ತಿದೆ. ಕಳೆದ ಬಾರಿ 85,815 ಕೋಟಿ ಸಾಲ ಮಾಡಲಾಗಿತ್ತು, ಈ ಬಾರಿ ಅಂದಾಜು 1 ಲಕ್ಷ ಕೋಟಿವರೆಗೂ ಸಾಲ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

 

Share Post