Health

Are you angry..?; ನೀವು ಶತ ಕೋಪಿಷ್ಠರಾ..?; ಹಾಗಾದ್ರೆ ಇದನ್ನು ಓದಿ ಕೂಲ್‌ ಆಗಿ..!

ನಾವು ನಿತ್ಯ ವ್ಯಕ್ತಪಡಿಸುವ ಭಾವನೆಗಳಿಗೂ ನಾವು ತಿನ್ನುವ ಆಹಾರಕ್ಕೂ ದೊಡ್ಡ ಸಂಬಂಧವಿದೆ. ನಾವು ತಿನ್ನುವ ಆಹಾರದ ಮೇಲೆ ನಮ್ಮ ಮಾನಸಿಕ ಆರೋಗ್ಯ ನಿಂತಿರುತ್ತದೆ.. ಕೆಲವರು ಅತ್ಯಂತ ಕೋಪಿಷ್ಠರಾಗಿರುತ್ತಾರೆ.. ವಿನಾಕಾರಣ ಕಾರಣ ಸಿಡುಕುತ್ತಿರುತ್ತಾರೆ. ಕಾರಣ ಇಲ್ಲದೆ ಸಿಡುಕುತ್ತಾರೆ ಅಂದರೆ ಅದಕ್ಕೆ ಕಾರಣ ಅವರು ಸೇವಿಸುವ ಆಹಾರ. ಹೀಗಾಗಿ ನಮ್ಮ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಆಹಾರಗಳನ್ನು ನಾವು ಸೇವಿಸಬೇಕಾಗುತ್ತದೆ. ನಕಾರಾತ್ಮಕ ಪರಿಣಾಮ ಬೀರುವ ಆಹಾರಗಳಿಂದ ದೂರವಿರಬೇಕಾಗುತ್ತದೆ. ನೀವು ಕೋಪಗೊಂಡಾಗ ಅಥವಾ ಒತ್ತಡದಲ್ಲಿದ್ದಾಗ ನೀವು ಸೇವಿಸುವ ಕೆಲವು ಆಹಾರಗಳು ನಿಮ್ಮ ಕೋಪವನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ. ಹಾಗಾದ್ರೆ ನಮ್ಮ ಕೋಪ ಹೆಚ್ಚು ಮಾಡುವ ಆಹಾರಗಳು ಯಾವುವು ನೋಡೋಣ ಬನ್ನಿ..

ಸಂಸ್ಕರಿಸಿದ ಆಹಾರಗಳು;
ಸಂಸ್ಕರಿಸಿದ ಆಹಾರಗಳು ಅಥವಾ ತ್ವರಿತ ಆಹಾರಗಳು ತಿನ್ನುವುದರಿಂದ ನಮಲ್ಲಿ ಕೋಪ ಹೆಚ್ಚಾಗುತ್ತದೆ. ಇವುಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಮಟ್ಟದಲ್ಲಿ ಅನಾರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ. ಇವು ನರಪ್ರೇಕ್ಷಕಗಳ ಸಮತೋಲನವನ್ನು ಅಡ್ಡಿಪಡಿಸುತ್ತವೆ. ಇದು ನಿಮ್ಮ ಮನಸ್ಥಿತಿ ಮತ್ತು ಭಾವನಾತ್ಮಕ ಸ್ಥಿತಿಯ ಮೇಲೆ ಭಾರೀ ಪರಿಣಾಮ ಬೀರುತ್ತವೆ. ಜೊತೆಗೆ, ಸಂಸ್ಕರಿಸಿದ ತ್ವರಿತ ಆಹಾರದ  ಸೇವನೆ ನಮ್ಮ ದೇಹದ ಶಕ್ತಿಯ ನಷ್ಟಕ್ಕೆ ಕಾರಣವಾಗಬಹುದು. ಇದರಿಂದ ನಿಮ್ಮಲ್ಲಿ ಕೋಪ ಹೆಚ್ಚು ಮಾಡಬಹುದು.

ಸಕ್ಕರೆ ಪದಾರ್ಥಗಳ ಅಧಿಕ ಸೇವನೆ;
ಮಿಠಾಯಿಗಳು, ಚಾಕೊಲೇಟ್‌ಗಳು, ಸಕ್ಕರೆ-ಸಿಹಿ ಪಾನೀಯಗಳು ಮತ್ತು ಸಿಹಿತಿಂಡಿಗಳು ಸೇರಿದಂತೆ ಹೆಚ್ಚಿನ ಸಕ್ಕರೆಯ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತವೆ.  ಇದರಿಂದ ಶಕ್ತಿಯ ಕುಸಿತ, ಮನಸ್ಥಿತಿ ಬದಲಾವಣೆ, ಕಿರಿಕಿರಿಯನ್ನು ಉಂಟುಮಾಡುತ್ತದೆ. ಹೆಚ್ಚು ಸಕ್ಕರೆ ಸೇವನೆಯಿಂದ ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಕೆಫೀನ್;
ಹೆಚ್ಚು ಕೆಫೀನ್ ಭರಿತ ಆಹಾರಗಳನ್ನು ತಿನ್ನುವುದು ಕೆಲವೊಮ್ಮೆ ಆತಂಕ, ಒತ್ತಡ ಮತ್ತು ಕೋಪದಂತಹ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಇಂತಹ ಸಮಸ್ಯೆಗಳಿರುವ ಜನರು ತಮ್ಮ ಅತಿಯಾದ ಕೆಫೀನ್ ಬಳಕೆಯನ್ನು ಮಿತಿಗೊಳಿಸಬೇಕು.

ಉಪ್ಪು;
ಹೆಚ್ಚು ಖಾರ ಮತ್ತು ತಿಂಡಿಗಳನ್ನು ತಿನ್ನುವುದರಿಂದ ಕೆಲವರಲ್ಲಿ ಅಧಿಕ ರಕ್ತದೊತ್ತಡ ಮತ್ತು ಕೋಪವೂ ಉಂಟಾಗುತ್ತದೆ. ಆದ್ದರಿಂದ ಇವುಗಳನ್ನು ಅಧಿಕ ಉಪ್ಪು ಹಾಗೂ ಅಧಿಕ ಖಾರ ಸೇವಿಸುವುದರಿಂದ ದೂರವಿರಬೇಕು.

ಮಸಾಲೆಯುಕ್ತ ಆಹಾರಗಳು;
ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಕೆಲವರಲ್ಲಿ ಕೋಪ ಅಥವಾ ಒತ್ತಡ ಹೆಚ್ಚಾಗುತ್ತದೆ. ಹೀಗಾಗಿ ಹೆಚ್ಚಾಗಿ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಬೇಡಿ. ನಿಮಗೆ ಕೋಪ ಹೆಚ್ಚಾಗುತ್ತಿದೆ ಎಂದರೆ ಅವುಗಳಿಂದ ದೂರವೇ ಉಳಿದುಬಿಡಿ.

ಮದ್ಯ;
ಮದ್ಯಪಾನ ಅತಿಯಾಗಿ ಮಾಡುವವರಲ್ಲಿ ಕೋಪ ಮತ್ತು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಮದ್ಯ ಸೇವನೆಯನ್ನೂ ಮಿತಿಗೊಳಿಸಬೇಕು.

Share Post