Cinema

Darshan Birthday; ನಟ ದರ್ಶನ್‌ ಹುಟ್ಟುಹಬ್ಬ; ಅಭಿಮಾನಿಗಳ ಸಂಭ್ರಮ

ಬೆಂಗಳೂರು; ಇಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ 47ನೇ ಹುಟ್ಟುಹಬ್ಬ… ಇದೇ ದಿನ ಅವರ ಡೆವಿಲ್‌ ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ ಕೂಡಾ ರಿಲೀಸ್‌ ಮಾಡಲಾಗಿದೆ. ಇತ್ತೀಚೆಗೆ ದರ್ಶನ್‌ ಅವರ ಕಾಟೇರ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಅನಂತರ ದರ್ಶನ್‌ ಅವರು ಡೆವಿಲ್‌ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಇಂದು ದರ್ಶನ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೊದಲ ಟೀಸರ್‌ ರಿಲೀಸ್‌ ಮಾಡಿದ್ದಾರೆ.

ಇದನ್ನೂ ಓದಿ; State Budget; ವಿಭಜನೆಯಾಗಲಿದೆಯಾ ಬೆಳಗಾವಿ ಜಿಲ್ಲೆ..?; ಎರಡು ಹೊಸ ಜಿಲ್ಲೆ ಘೋಷಣೆ ಸಾಧ್ಯತೆ..!

ಡೆವಿಲ್‌ ಸಿನಿಮಾ ಟೀಸರ್‌ ರಿಲೀಸ್‌!;
ಡೆವಿಲ್‌ ಚಿತ್ರದ ಟೀಸರ್‌ನಲ್ಲಿ ದರ್ಶನ್‌ ಸಿಗರೇಟ್‌ ಸೇದುತ್ತಾ ಒಂದು ಡೈಲಾಗ್‌ ಹೊಡೆದಿದಿದ್ದಾರೆ. ಅದು ಎಲ್ಲರನ್ನೂ ಆಕರ್ಷಿಸಿದೆ. ಸಿಗರೇಟ್‌ ಸೇದುತ್ತಾ, ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ಫೋಟೋ ತೆಗೆಯಲು ಅದಕೆ ಬಲು ಕೋಪ ಬರುವುದು’ ಎಂದು ಹೇಳುತ್ತಾರೆ. ಈಗಾಗಲೇ ಯೂಟ್ಯೂಬ್‌ನಲ್ಲಿ ಟೀಸರ್‌ ರಿಲೀಸ್‌ ಆಗಿದ್ದು, ಅಭಿಮಾನಿಗಳ ಮುಗಿಬಿದ್ದು ನೋಡುತ್ತಿದ್ದಾರೆ. ಲಕ್ಷಾಂತರ ಶೇರ್‌ಗಳು ಕೂಡಾ ಆಗಿವೆ. ಡೆವಿಲ್‌ ಚಿತ್ರಕ್ಕೆ ಪ್ರಕಾಶ್​ ವೀರ್ ಆಕ್ಷನ್‌, ಕಟ್‌ ಹೇಳುತ್ತಿದ್ದಾರೆ. ಅಜನೀಶ್​​ ಲೋಕನಾಥ್ ಅವರು ಈ ಚಿತ್ರಕ್ಕೆ​ ಸಂಗೀತ ಸಂಯೋಜನೆ ಮಾಡಿದ್ದಾರೆ. ಜೆ ಜಯಮ್ಮ ಡೆವಿಲ್​ ಸಿನಿಮಾ ನಿರ್ಮಾಪಕರಾಗಿದ್ದು, ಶ್ರೀ ಜೈ ಮಾತಾ ಕಂಬೈನ್ಸ್​ನಡಿ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ.

ಇದನ್ನೂ ಓದಿ; Ayurveda Tips; ಈ 5 ಆಯುರ್ವೇದ ವಸ್ತುಗಳಿಂದ ನಿಮ್ಮ ಚರ್ಮ ಕಾಂತಿಯುತ!


ದರ್ಶನ್‌ ಮನೆ ಮುಂದೆ ಸಾವಿರಾರು ಅಭಿಮಾನಿಗಳು!;
ದರ್ಶನ್‌ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಿಂದ ಆಚರಿಸುತ್ತಿದ್ದಾರೆ. ದರ್ಶನ್‌ ಮನೆ ಮುಂದೆ ಮುಂಜಾನೆಯಿಂದಲೇ ಸಾವಿರಾರು ಅಭಿಮಾನಿಗಳು ಸೇರಿದ್ದಾರೆ. ಕೆಲವರು ದರ್ಶನ್‌ ಅವರು ಚಿತ್ರವನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಬಂದಿದ್ದಾರೆ. ರಾಜ್ಯದ ಮೂಲೆಮೂಲೆಯಿಂದ ಬಂದಿರುವ ಅಭಿಮಾನಿಗಳು ದರ್ಶನ್‌ಗೆ ಶುಭ ಕೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್‌ ಮನೆ ಮುಂದೆ ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕೂಡಾ ವಹಿಸಲಾಗಿದೆ.


ನಾಳೆ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ;
ಇನ್ನು ದರ್ಶನ್‌ ಅವರು ಚಿತ್ರರಂಗಕ್ಕೆ ಬಂದು 25 ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಇದರ ಜೊತೆಗೆ ನಾಳೆ(ಫೆಬ್ರವರಿ 17)ಕ್ಕೆ ಶ್ರೀರಂಗಪಟ್ಟಣದಲ್ಲಿ ಬೆಳ್ಳಿಪರ್ವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

Share Post