ಹೃದಯಾಘಾತಕ್ಕೆ ಕಿರುತೆರೆ ನಟ ಬಲಿ; 24 ವರ್ಷಕ್ಕೇ ಇಹಲೋಕ ತ್ಯಜಿಸಿದ ನಟ
ಮಂಡ್ಯ; ರಾಜ್ಯದಲ್ಲಿ ಯುವ ಸಮುದಾಯ ಹೆಚ್ಚು ಹೃದಯಾಘಾತಕ್ಕೆ ಬಲಿಯಾಗುತ್ತಿದೆ. ಇತ್ತೀಚೆಗೆ ಸ್ಪಂದನಾ ವಿಜಯ್ ರಾಘವೇಂದ್ರ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಕಹಿ ಘಟನೆ ಇನ್ನೂ ಮಾಸುವ ಮುನ್ನವೇ ನಟನೊಬ್ಬನ ಹೃದಯಬಡಿತ ನಿಂತುಹೋಗಿದೆ. ಮಂಡ್ಯ ಮೂಲದ ಕಿರುತೆರೆಯ ಯುವ ನಟ ಪವನ್ ಸಾವನ್ನಪ್ಪಿದ್ದಾರೆ. ಅವರಿಗೆ 24 ವರ್ಷ ವಯಸ್ಸಾಗಿತ್ತು.
ಪವನ್ ಅವರು ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲ್ಲೂಕಿನ ಹರಿಹರಪುರ ಗ್ರಾಮದವರು. ಆದ್ರೆ ಇವರು ತಂದೆ, ತಾಯಿ ಜೊತೆ ಮುಂಬೈನಲ್ಲಿ ನೆಲೆಸಿದ್ದರು. ಹಿಂದಿ ಹಾಗೂ ತಮಿಳು ಕಿರುತೆರೆಯಲ್ಲಿ ಬಣ್ಣ ಹಚ್ಚಿದ್ದರು. ಹಲವು ಸೀರಿಯಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಪವನ್, ಹಿರಿತೆರೆಗೆ ಬರುವ ಕನಸು ಕಂಡಿದ್ದರು. ಆದ್ರೆ, ನಿನ್ನೆ ನಸುಕನ ಜಾವ ಅವರು ತೀವ್ರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇಂದು ಅವರ ಹುಟ್ಟೂರು ಹರಿಹರಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.