DistrictsLifestyle

Kere Tonnur; ತೊಣ್ಣೂರು ಕೆರೆಯಲ್ಲಿ ಈಜಾಡಿ ಮಜಾಮಾಡಿ, ನಂಬಿನಾರಾಯಣನ ದರ್ಶನ ಮಾಡಿ..

ಬೇಸಿಗೆಯಲ್ಲಿ ನೀರು ಹರಿಯುವ ಪ್ರದೇಶಗಳಿಗೆ ಹೋಗೋಕೆ ಜನ ಹೆಚ್ಚು ಇಷ್ಟ ಪಡ್ತಾರೆ.. ಅದರಲ್ಲೂ ಹೊಸ ಸ್ಥಳಗಳಾದರೆ ಅದರ ಮಜಾನೇ ಬೇರೆ ಇರುತ್ತೆ.. ಜನರ ಕಡಿಮೆ ಇರುವ ಸ್ಥಳಗಳಂತೂ ಮಜಾ ಮಾಡೋದಕ್ಕೆ ಸೂಕ್ತ.. ನೀವು ಈ ಬೇಸಿಗೆಗೆ ಹೊಸ ಸ್ಥಳವೊಂದಕ್ಕೆ ಭೇಟಿ ಕೊಡಬೇಕು ಅಂತಿದ್ದರೆ ತೊಣ್ಣೂರು ಕೆರೆ ಬೆಸ್ಟ್‌ ಪ್ಲೇಸ್‌.. ಕೆರೆ ಪಕ್ಕದಲ್ಲೇ ಇರೋ ಬೆಟ್ಟದಲ್ಲಿ ಟ್ರೆಕ್ಕಿಂಗ್‌ ಮಾಡಿ, ಕೆರೆಯಲ್ಲಿ ಈಜಾಡಿ ಮಸ್ತ್‌ ಮಜಾ ಮಾಡಬಹುದು..

ಇದನ್ನೂ ಓದಿ; Tattoo Aftercare; ಟ್ಯಾಟೂ ಹಾಕಿಸಿಕೊಂಡ ಮೇಲೆ ಈ ಜಾಗ್ರತೆ ಇರಲೇಬೇಕು!

ಕೆರೆ ತೊಣ್ಣೂರು ಪುರಾಣ ಪ್ರಸಿದ್ಧ ಗ್ರಾಮ!

ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯ ಪಾಂಡವಪುರ (Pandavapura) ತಾಲ್ಲೂಕಿನಲ್ಲಿರುವ ಕೆರೆ ತೊಣ್ಣೂರು (Kere tonnur) ಪುರಾಣ ಪ್ರಸಿದ್ಧ ಗ್ರಾಮ.. ಈ ಊರಿನ ಮೂಲ ಹೆಸರು ತೊಂಡನೂರು.. ಅಂದರೆ ಭಕ್ತರ ಅಥವಾ ದಾಸರ ಊರು.. ಕಾಲಾನಂತರದಲ್ಲಿ ತೊಂಡನೂರು ತೊಣ್ಣೂರಾಗಿದೆ.. ಈ ಊರಿನಲ್ಲಿರುವ ಭವ್ಯವಾದ ಕೆರೆಯಿಂದಾಗಿ ಇದು ಕೆರೆ ತೊಣ್ಣೂರು ಎಂದೂ ಕರೆಸಿಕೊಂಡಿದೆ..

 

ಯಾದವ ಸಮುದ್ರವೇ ಈ ತೊಣ್ಣೂರು ಕೆರೆ! (yadava samudra)

ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಯಾದವ ಸಮುದ್ರವೇ ಈ ಕೆರೆ… ಈ ಊರಿನಲ್ಲಿ 12 ವರ್ಷಗಳ ಕಾಲ ತಪವನ್ನಾಚರಿಸಿದ್ದ ರಾಮಾನುಜಾಚಾರ್ಯರು ಎರಡು ಬೆಟ್ಟಗಳ ನಡುವೆ ಕಟ್ಟೆ ಕಟ್ಟಿಸಿ ಈ ಕೆರೆಯನ್ನು ಜೀರ್ಣೋದ್ಧಾರ ಮಾಡಿದ್ದಾರೆ ಎಂದು ಇತಿಹಾಸ ಹೇಳುತ್ತದೆ.. ಬೆಟ್ಟಗಳ ಸಾಲುಗಳ ಮಧ್ಯೆ 300 ಅಡಿ ಆಳ ಹಾಗೂ ವಿಶಾಲವಾಗಿ ಹಬ್ಬಿರುವ ಕೆರೆ ನಿರ್ಮಾಣವಾದ ದಿನದಿಂದ ಇಂದಿನವರೆಗೂ ಬತ್ತಿಲ್ಲವಂತೆ.. ಸದಾ ತುಂಬಿ ತುಳುಕುವ ಈ ಕೆರೆಯ ಒಳಗೆ ಪುರಾತನವಾದ ಚಿನ್ನದ ಕಳಶ ಇರುವ ದೇವಾಲಯ ಇದೆ ಎಂದು ಜನ ನಂಬಿದ್ದಾರೆ..

ಇದನ್ನೂ ಓದಿ;Snowfall; ಭಾರಿ ಹಿಮಪಾತಕ್ಕೂ ಜಗ್ಗದ ಸನ್ಯಾಸಿ; ಕೇದಾರ ಕಣಿವೆಯಲ್ಲಿ ಪವಾಡ!

ಮೈಸೂರಿನಿಂದ 40 ಕಿಮೀ ದೂರದಲ್ಲಿರುವ ಕೆರೆ

ಯಾವಾಗಲೂ ನೀರಿನಿಂದ ತುಂಬಿರುವ ಈ ಕೆರೆ ಮೈಸೂರಿನಿಂದ ಕೇವಲ 40 ಕಿಲೋ ಮೀಟರ್‌ ದೂರದಲ್ಲಿದೆ.. ನೀವು ಮೇಲುಕೋಟೆಗೆ ಭೇಟಿ ಕೊಡುವುದಿದ್ದರೆ ಅಲ್ಲಿಂದ ತೊಣ್ಣೂರಿಗೆ ಹತ್ತಿರವಾಗುತ್ತದೆ.. ಮೇಲುಕೋಟೆಯ ಚೆಲುವನಾರಾಯಣನ (Melukote cheluvanarayana) ಭೇಟಿ ನಂತರ ಇಲ್ಲಿಗೆ ಬಂದು ಕೆರೆ ತೊಣ್ಣೂರಿನ ವೈಭವವನ್ನು ಕಣ್ತುಂಬಿಕೊಳ್ಳಬಹುದು.. ಮಕ್ಕಳೊಂದಿಗೆ ಬಂದರಂತೂ ನೀರಿನಲ್ಲಿ ಆಟ ಆಡುತ್ತಾ ಕಾಲ ಕಳೆಯಬಹುದು..

ಇದನ್ನೂ ಓದಿ; Bangaradoddi Naale; 4 ಶತಮಾನದ ಹಿಂದೆ ಕಟ್ಟಿದ ಮಂಡ್ಯದ ಬಂಗಾರದೊಡ್ಡಿ ನಾಲೆ ಬಗ್ಗೆ ನಿಮಗೆಷ್ಟು ಗೊತ್ತು..?

ಇತಿಹಾಸ ಪ್ರಸಿದ್ಧ ನಂಬಿ ನಾರಾಯಣ ದೇಗುಲ

ಇನ್ನು ಈ ಗ್ರಾಮದಲ್ಲಿರುವ ಪುರಾತನ ದೇವಾಲಯಗಳು ಜನರ ಮನ ಸೆಳೆಯುತ್ತವೆ. ನಂಬಿ ನಾರಾಯಣ ಸ್ವಾಮಿ (Nambinarayana) ಹಾಗೂ ವೇಣುಗೋಪಾಲಸ್ವಾಮಿ (Venugopalaswamy) ದೇವಸ್ಥಾನಗಳು ಪ್ರಸಿದ್ಧವಾದವು. ಕ್ರಿ. ಶ. ಹನ್ನೆರಡನೆಯ ಶತಮಾನದಲ್ಲಿ ವಿಷ್ಣುವರ್ಧನನು ಚೋಳರ ವಿರುದ್ಧ ವಿಜಯ ಸಾಧಿಸಿದ್ದರ ಸ್ಮರಣಾರ್ಥ ಈ ದೇಗುಲದ ನಿರ್ಮಾಣವಾಯಿತಂತೆ. ಸುರಗಿ ನಾಗಯ್ಯ ಎಂಬ ವಿಷ್ಣುವರ್ಧನನ ಆಸ್ಥಾನಿಕ ಇದರ ನಿರ್ಮಾಪಕ. ನವರಂಗ, ಮಹಾ ರಂಗಮಂಟಪ, ಅರ್ಧಮಂಟಪ, ಸುಕನಾಸಿ, ಗರ್ಭಗೃಹ ಹಾಗೂ ದೊಡ್ಡ ಪಾತಾಳಂಕಣಗಳನ್ನು ಹೊಂದಿರುವ ಈ ಪೂಜಾಸ್ಥಳ ಆಕರ್ಷಣೀಯವಾಗಿದೆ. ಹೊಯ್ಸಳ ಕಾಲದ ರಚನೆಯಾದರೂ ಚೋಳ ಶೈಲಿಯಲ್ಲಿ ಇದೆಯೆನ್ನುತ್ತಾರೆ ಇತಿಹಾಸತಜ್ಞರು.

ಇದನ್ನೂ ಓದಿ; Chukki chithra; ಕೋಟಿ ಚುಕ್ಕಿಗಳಿಂದ ಅರಳುವ ಸುಂದರ `ಚುಕ್ಕಿಚಿತ್ರ’!


ಒನ್‌ ಡೇ ಟ್ರಿಪ್‌ಗೆ ಹೇಳಿ ಮಾಡಿಸಿದ ಜಾಗ

ಒನ್‌ ಡೇ ಪಿಕ್‌ ನಿಕ್‌ ಗೆ ಇದು ಹೇಳಿ ಮಾಡಿಸಿದ ಸ್ಥಳ… ಅದರಲ್ಲೂ ಐದಾರು ಜನರ ಸ್ನೇಹಿತರ ತಂಡದಲ್ಲಿ ಬಂದರಂತೂ ಮಸ್ತ್‌ ಮಜಾ ಮಾಡಬಹುದು.. ಈಜುಪ್ರಿಯರಿಗಂತೂ ಇದು ಹೇಳಿ ಮಾಡಿಸಿದ ತಾಣ..

Share Post