Lifestyle

Tattoo Aftercare; ಟ್ಯಾಟೂ ಹಾಕಿಸಿಕೊಂಡ ಮೇಲೆ ಈ ಜಾಗ್ರತೆ ಇರಲೇಬೇಕು!

ಹಚ್ಚೆ (Tattoo) ಹಾಕಿಸಿಕೊಳ್ಳುವುದು ಈಗ ಯುವಸಮುದಾಯದಲ್ಲಿ ಒಂದು ಟ್ರೆಂಡ್ ಆಗ್ಬಿಟ್ಟಿದೆ. ಕೆಲವರು ತಮ್ಮ ಪ್ರೀತಿಪಾತ್ರರಿಗೆ ಪ್ರೀತಿ ತೋರಿಸಲು ಹಚ್ಚೆ ಹಾಕಿಸಿಕೊಂಡರೆ, ಕೆಲವರು ಪ್ರೀತಿಗಾಗಿಯೇ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಫ್ಯಾಷನ್‌ಗಾಗಿ ಟ್ಯಾಟೂ ಹಾಕಿಸಿಕೊಳ್ಳುವವರೂ ತುಂಬಾ ಜನ ಇದ್ದಾರೆ.  ಇಷ್ಟವಾದ ಚಿಹ್ನೆಗಳು, ಮುಖಗಳು, ದೇವರಚಿತ್ರಗಳು, ಹೆಸರುಗಳು ಮುಂತಾದವುಗಳನ್ನು ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ, ಟ್ಯಾಟೂ ಹಾಕಿಸಿಕೊಂಡ ನಂತರ, ಟ್ಯಾಟೋ ಹಾಕಿರುವ ಭಾಗದ ಬಗ್ಗೆ ಕೆಲಕಾಲ ಕಾಳಜಿ ವಹಿಸಬೇಕು. ಆ ಭಾಗದ ಆರೈಕೆ ಮಾಡಬೇಕು. ಹೀಗಂತ ತಜ್ಞರು ಹೇಳುತ್ತಿದ್ದಾರೆ.  ಇಲ್ಲವಾದಲ್ಲಿ ಟ್ಯಾಟೂ ಹಾಕಿಸಿಕೊಂಡ ಸ್ಥಳದಲ್ಲಿ ತ್ವಚೆಯಲ್ಲಿ ಅಲರ್ಜಿ, ದದ್ದು ಬರುವ ಸಾಧ್ಯತೆ ಇದೆಯಂತೆ. ಟ್ಯಾಟೂ ಹಾಕಿಸಿಕೊಂಡ ಜಾಗದಲ್ಲಿ ತ್ವಚೆಯ ಆರೈಕೆ ಹೇಗಿರಬೇಕು..? ಇಲ್ಲಿದೆ ಮಾಹಿತಿ.

ಇದನ್ನೂ ಓದಿ; Clown Fish; ಈ ಮೀನುಗಳು ಗಂಡಾಗಿ ಹುಟ್ಟುತ್ತೆ.. ಹೆಣ್ಣಾಗಿ ಬದಲಾಗುತ್ತೆ..!

ಸನ್‌ಸ್ಕ್ರೀನ್ ಬಳಸಿ;

ಸನ್‌ಸ್ಕ್ರೀನ್ ಬಳಸಿ; ಹೊಸದಾಗಿ ಹಾಕಿದ ಟ್ಯಾಟೂವನ್ನು ಸೂರ್ಯನಿಂದ ರಕ್ಷಿಸಬೇಕು ಎಂದು ತಜ್ಞರು ಹೇಳುತ್ತಾರೆ. UV ಕಿರಣಗಳಿಂದಾಗಿ, ಹಚ್ಚೆಗಾಗಿ ಬಳಸುವ ಕೆಲವು ರೀತಿಯ ಶಾಯಿಗಳ ಬಣ್ಣಗಳು ಮಸುಕಾಗುತ್ತವೆ. ಅಲ್ಲದೆ, ಸೂರ್ಯನ ಕಿರಣಗಳು ಆ ಪ್ರದೇಶದಲ್ಲಿ ಅಲರ್ಜಿಯನ್ನು ಉಂಟುಮಾಡಬಹುದು. ನಿಮ್ಮ ಹಚ್ಚೆ ಹಾಕಿದ ಜಾಗದ ಚರ್ಮವನ್ನು ಸೂರ್ಯನಿಂದ ರಕ್ಷಿಸಲು SPF 30 ಸನ್‌ಸ್ಕ್ರೀನ್ ಬಳಸಬೇಕು. ಪ್ರತಿ ಎರಡು ಗಂಟೆಗಳಿಗೊಮ್ಮೆ ಇದನ್ನು ಹಚ್ಚುತ್ತಾ ಇರಬೇಕು, ಕೆಲ ದಿನಗಳ ಕಾಲ ಹೀಗೆ ಮಾಡಿದರೆ ಒಳ್ಳೆಯದು.

ಹಚ್ಚೆ ಹಾಕಿದ ತ್ವಚೆಯನ್ನು ತೇವವಾಗಿಡಿ;

ಹಚ್ಚೆ ಹಾಕಿದ ತ್ವಚೆಯನ್ನು ತೇವವಾಗಿಡಿ; ಹಚ್ಚೆ ಹಾಕಿದ ಪ್ರದೇಶದಲ್ಲಿ ಚರ್ಮದ ಜೀವಕೋಶಗಳು ಹಾನಿಗೊಳಗಾಗುತ್ತವೆ. ಪರಿಣಾಮವಾಗಿ, ಈ ಪ್ರದೇಶ ತೇವಾಂಶವನ್ನು ಕಳೆದುಕೊಂಡು ನಿರ್ಜೀವವಾಗುತ್ತದೆ. ಹೊಸ ಕೋಶ ಹುಟ್ಟಿಕೊಳ್ಳುವಂತೆ ಮಾಡಲು ಟ್ಯಾಟೂ ಇರುವ ಜಾಗಕ್ಕೆ ಮಾಯಿಶ್ಚರೈಸರ್ ಅನ್ನು  ಹಚ್ಚಬೇಕು. ಮಾಯಿಶ್ಚರೈಸರ್ ಚರ್ಮವನ್ನು ತಂಪಾಗಿಸುತ್ತದೆ ಮತ್ತು ಹೊಸ ಕೋಶಗಳು ಬೆಳೆಯುವುದಕ್ಕೆ ಸಹಕಾರಿಯಾಗುತ್ತದೆ.

ಇದನ್ನೂ ಓದಿ;Dry Fruits; ಖಾಲಿ ಹೊಟ್ಟೆಯಲ್ಲಿ ಈ ಒಣಹಣ್ಣುಗಳನ್ನು ತಿನ್ನಲೇಬಾರದು..!

ಸ್ಕ್ರಬ್‌ಗಳು, ಮಾಸ್ಕ್‌ಗಳು ಬಳಸಬೇಡಿ;

ಸ್ಕ್ರಬ್‌ಗಳು, ಮಾಸ್ಕ್‌ಗಳು ಬಳಸಬೇಡಿ; ಹಚ್ಚೆ ಹಾಕಿದ ಜಾಗದ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ.  ಹೊಸ ಕೋಶಗಳು ಹುಟ್ಟುವವರೆಗೆ ಸುಮಾರು ಎರಡರಿಂದ ಮೂರು ವಾರಗಳವರೆಗೆ ಆ ಜಾಗದಲ್ಲಿ ಬ್ಯೂಟಿ ಮಾಸ್ಕ್, ಸ್ಕ್ರಬ್, ವ್ಯಾಕ್ಸ್ ಇತ್ಯಾದಿಗಳನ್ನು ಬಳಸಬಾರದು. ಇವುಗಳಿಂದ ಸೋಂಕುಗಳು ಉಂಟಾಗುವ ಅಪಾಯವಿರುತ್ತದೆ.

 

ಹೊಸದಾಗಿ ಟ್ಯಾಟೂ ಹಾಕಿಸಿಕೊಂಡಾಗ ಈಜಾಡಬೇಡಿ;

ಹೊಸದಾಗಿ ಟ್ಯಾಟೂ ಹಾಕಿಸಿಕೊಂಡಾಗ ಈಜಾಡಬೇಡಿ; ಹೊಸದಾಗಿ ಹಚ್ಚೆ ಹಾಕಿಸಿಕೊಂಡವರು ಎರಡರಿಂದ ಮೂರು ವಾರಗಳ ಕಾಲ ಈಜುವುದಕ್ಕೆ ಹೋಗಬಾರದು. ಪೂಲ್ ನೀರು ಕ್ಲೋರಿನ್ ಮತ್ತು ಉಪ್ಪನ್ನು ಹೊಂದಿರುತ್ತದೆ. ಇವು ಹಚ್ಚೆ ಹಾಕಿದ ತ್ವಚೆಯನ್ನು ಹೆಚ್ಚು ಒಣಗಿಸುತ್ತವೆ. ಇದಲ್ಲದೆ, ಹಚ್ಚೆ ಕೂಡ ಮಸುಕಾಗುತ್ತದೆ.

ಇದನ್ನೂ ಓದಿ; Overweight Problem; ಏನೂ ತಿನ್ನದಿದ್ದರೂ ದೇಹದ ತೂಕ ಹೆಚ್ಚಾಗುತ್ತಿದೆಯಾ..?, ಹಾಗಾದರೆ ನಿಮ್ಮ ಸಮಸ್ಯೆ ಇದೇ..?

Share Post