Lazy Rich; ಶ್ರೀಮಂತರಾಗಬೇಕೆ..?, ಹಾಗಾದ್ರೆ ಈ 10 ವರ್ಷ ಶತ ಸೋಮಾರಿಗಳಾಗಿಬಿಡಿ!
ಬೆಂಗಳೂರು; ನೀವು ಶ್ರೀಮಂತರಾಗಬೇಕೇ..? ಹಾಗಾದರೆ ಈ ಹತ್ತು ವರ್ಷ ಈ ವಿಚಾರಗಳಲ್ಲಿ ಶತ ಸೋಮಾರಿಗಳಾಗಿಬಿಡಿ… ಈ ಮಾತು ಕೇಳಿ ನಗು ಬರ್ತಾ ಇದೆಯಾ..?.. ಶ್ರೀಮಂತರಾಗಬೇಕಾದರೆ, ಸೋಮಾರಿಗಳಾಗಬಾರದು.. ಸಮಯ ವೇಸ್ಟ್ ಮಾಡದೇ ನಿರಂತರವಾಗಿ ದುಡಿಯಬೇಕು ಅಂತ ಎಲ್ಲರೂ ಹೇಳ್ತಾರೆ.. ಇವರು ನೋಡಿದರೆ ಸೋಮಾರಿಗಳಾಗಿ ಎಂದು ಹೇಳ್ತಿದ್ದಾರಲ್ಲ ಅಂತ ನಿಮಗೆ ಅಚ್ಚರಿ ಆಗಿರಬಹುದು. (WealthMindset) ಆದ್ರೆ ನಿಜ, ಕೆಲ ವಿಚಾರಗಳಲ್ಲಿ ನೀವು ಶತ ಸೋಮಾರಿಗಳಾದರೆ ಮಾತ್ರ ಶ್ರೀಮಂತರಾಗೋದಕ್ಕೆ ಸಾಧ್ಯ..!. ಯಾಗಾದರೆ ಯಾರು ಸೋಮಾರಿಗಳಾಗಬೇಕು..?, ಯಾವ ಯಾವ ವಿಚಾರಗಳಲ್ಲಿ ಸೋಮಾರಿಗಳಾಗಬೇಕು..? ಸೋಮಾರಿಗಳಾದರೆ ಹೇಗೆ ಲಾಭವಾಗುತ್ತೆ..? ನೋಡೋಣ ಬನ್ನಿ… (UnconventionalSuccess)
ಇದನ್ನೂ ಓದಿ;Money Mindset; ನಾವೇ ಸೃಷ್ಟಿಸಿದ ಹಣ ಪಳಗಿಸೋದು ಹೇಗೆ..?
ಮೂರು ವೀಕೆಂಡ್‌ಗಳು ಮನೆಗೇ ಸೀಮಿತರಾಗಿ!
ಮೂರು ವೀಕೆಂಡ್‌ಗಳು ಮನೆಗೇ ಸೀಮಿತರಾಗಿ!; ಟೆಕ್ಕಿಗಳು, ವಿವಿಧ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರು, ಮುಖ್ಯವಾಗಿ ಎಲ್ಲಾ ಉದ್ಯೋಗಿಗಳು ಹಣ ಹೆಚ್ಚು ಖರ್ಚು ಮಾಡೋದು ವೀಕೆಂಡ್‌ಗಳಲ್ಲಿ… ಬರೀ ಮೋಜು, ಮಸ್ತಿಗಾಗಿ ಅರಿವಿಲ್ಲದೆ ವೃಥಾ ಹಣ ಪೋಲು ಮಾಡುತ್ತಾರೆ.. ಸಾಫ್ಟ್‌ವೇರ್ ಕೆಲಸ ಮಾಡುವವರಿಗೆ ಶನಿವಾರ ಹಾಗೂ ಭಾನುವಾರ ರಜೆ ಇರುತ್ತದೆ.. ಹೀಗಾಗಿ ಶುಕ್ರವಾರ ಸಂಜೆಯಿಂದಲೇ ಟ್ರಿಪ್, ಪಾರ್ಟಿ ಅದೂ ಇದೂ ಅಂತ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಪಾರ್ಟಿ, ಟ್ರಿಪ್ ಮಾಡೋದ್ರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಅದರಲ್ಲಿ ಎರಡು ಮಾತಿಲ್ಲ. ಆದ್ರೆ ಈ ವೇಳೆ ಹೆಚ್ಚು ಹಣ ಖರ್ಚು ಮಾಡುವುದರಿಂದ ದುಡಿಯೋ ಸಮಯದಲ್ಲಿ ಉಳಿತಾಯ ಮಾಡೋದಕ್ಕೆ ಆಗೋದಿಲ್ಲ. (FinancialFreedom)
ಹೀಗಾಗಿ ತಿಂಗಳ ಮೊದಲ ಮೂರು ವೀಕೆಂಡ್‌ಗಳಲ್ಲಿ ಬರೀ ಮನೆಗೇ ಸೀಮಿತವಾಗಿ… ಶುಕ್ರವಾರದಂದೇ ನಿಮಗೆ ಏನು ಬೇಕೋ ಅದನ್ನು ಅದೂ ಕೂಡಾ ಅತ್ಯಂತ ಅಗತ್ಯ ವಸ್ತುಗಳನ್ನು ಮನೆಗೆ ತಂದಿಟ್ಟುಕೊಳ್ಳಿ… ಮನೆಯಲ್ಲೇ ಬೇಕಾದರೆ ನಿಮ್ಮ ಸಂತೋಷಕ್ಕೆ ಪಾರ್ಟಿ ಮಾಡಿ ಎಂಜಾಯ್ ಮಾಡಿ… ಆದ್ರೆ ಹೊರಗಡೆ ಕಾಲಿಡೋದಕ್ಕೆ ಹೋಗಬೇಡಿ.. ಕೊನೆಯ ವೀಕೆಂಡ್‌ನಲ್ಲಿ ನೀವು ಯಾವುದಾದರೂ ಟ್ರಿಪ್, ಪಾರ್ಟಿ ಎಂದು ಪ್ಲ್ಯಾನ್ ಮಾಡಿಕೊಳ್ಳಿ…(LazyRich) ಕೊನೆಯ ವೀಕೆಂಡ್‌ನಲ್ಲಿ ಪಾರ್ಟಿ, ಟ್ರಿಪ್ ಅಂದ್ರೆ ನಿಮ್ಮ ಬಳಿ ಕಡಿಮೆ ಹಣ ಇರುತ್ತದೆ.. ಆಗ ಯೋಚನೆ ಮಾಡಿ ಖರ್ಚು ಮಾಡುತ್ತೀರಿ… ಮೊದಲ ಮೂರು ವೀಕೆಂಡ್‌ಗಳು ನೀವು ಸೋಮಾರಿಗಳಾದರೆ, ಆಗ ನಿಮ್ಮ ಬಳಿ ಸಂಬಳದ ರೂಪದಲ್ಲಿ ಬಂದ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಯೋಚನೆ ಮಾಡುತ್ತೀರಿ.. ಆಗ ನೀವು ಆರ್ಥಿಕವಾಗಿ ಸಬಲರಾಗುತ್ತಾ ಹೋಗುತ್ತೀರಿ… (MindsetMatters)
ಇದನ್ನೂ ಓದಿ; Financial Freedom; ದೇಶದ ಶೇ.90ರಷ್ಟು ಜನ 25 ಸಾವಿರಕ್ಕಿಂತ ಹೆಚ್ಚು ದುಡಿಯುತ್ತಿಲ್ಲ!
ಕೊನೇ ವೀಕೆಂಡ್‌ನಲ್ಲಿ ಮಾತ್ರ ಶಾಪಿಂಗ್ ಮಾಡಿ;
ಕೊನೇ ವೀಕೆಂಡ್‌ನಲ್ಲಿ ಮಾತ್ರ ಶಾಪಿಂಗ್ ಮಾಡಿ; (SuccessJourney) ಪ್ರತಿಯೊಬ್ಬರೂ ಸಂಬಳ ಬಂದ ವಾರದಲ್ಲಿ ಶಾಪಿಂಗ್‌ಗೆ ಹೋಗುತ್ತಾರೆ… ಈ ಸಂದರ್ಭದಲ್ಲಿ ಅಕೌಂಟ್‌ನಲ್ಲಿ ಹೆಚ್ಚು ಹಣವಿರುವ ಖುಷಿಯಲ್ಲಿರುತ್ತಾರೆ.. ಅದೇ ಖುಷಿಯಲ್ಲಿ ಸಿಕ್ಕಿದ್ದನ್ನೆಲ್ಲಾ ಖರೀದಿಸಿ ಮನೆಗೆ ತರುತ್ತಾರೆ… ಮನೆಗೆ ಅವಶ್ಯಕತೆಯೇ ಇರೋದಿಲ್ಲ… ಕಣ್ಣಿಗೆ ಚೆನ್ನಾಗಿ ಕಾಣಿಸಿತು ಅನ್ನೋ ಕಾರಣಕ್ಕೋ, ಆಫರ್ ಇದೆ ಅನ್ನೋ ಕಾರಣಕ್ಕೋ ಬೇಡದ ವಸ್ತುಗಳನ್ನೂ ಕೊಂಡು ತಂದಿರುತ್ತೇವೆ.. ಅದರ ಬದಲಾಗಿ ನಿಮ್ಮ ಶಾಪಿಂಗ್ ಅವನ್ನು ಕೊನೆಯ ವೀಕೆಂಡ್‌ಗೆ ಬದಲಾಯಿಸಿಕೊಂಡರೆ, ಆಗ ಹಣದ ಬೆಲೆ ನಿಮಗೆ ಗೊತ್ತಿರುತ್ತದೆ.. ಅಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಶಾಪಿಂಗ್ ಮಾಡುತ್ತೀರಿ… ಸುಮ್ಮನೆ ಹಣ ಪೋಲು ಮಾಡೋದಿಲ್ಲ.. ಇಲ್ಲ ಅಂದ್ರೆ, ಮನೆಯಲ್ಲಿ ನಾಯಿ ಇಲ್ಲದಿದ್ದರೂ ಆಫರ್ ಇದೆ ಅಂತ ನಾಯಿಗೆ ಆಹಾರ ನೀಡೋ ತಟ್ಟೆಯನ್ನು ಕೊಂಡು ತಂದಿರುತ್ತೀರಿ…
ಇದನ್ನೂ ಓದಿ;Early Retirement Plan; 45 ವರ್ಷಕ್ಕೇ ನಿವೃತ್ತಿ, ಸಾಯೋವರೆಗೂ ಸುಖದ ಸುಪ್ಪತ್ತಿಗೆಯಲ್ಲಿ ಜೀವಿಸಬಹುದು!
ಕೆಲಸ ಮುಗಿಯುತ್ತಿದ್ದಂತೆ ಮನೆಗೆ ಬಂದುಬಿಡಿ;
ಕೆಲಸ ಮುಗಿಯುತ್ತಿದ್ದಂತೆ ಮನೆಗೆ ಬಂದುಬಿಡಿ; (WealthBuilding) ಕೆಲವರು ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುತ್ತಾರೆ.. ಆದ್ರೆ ಕೆಲಸ ಮುಗಿದ ತಕ್ಷಣ ಮನೆಗೆ ವಾಪಸ್ಸಾಗೋದಿಲ್ಲ… ಬದಲಾಗಿ ಫ್ರೀಯಾಗಿರುವ ಸ್ನೇಹಿತರನ್ನು ಭೇಟಿಯಾಗೋದಕ್ಕೆ ಹೋಗುತ್ತಾರೆ.. ಎಷ್ಟೋ ಸ್ನೇಹಿತರೋ ಕೆಲಸವಿಲ್ಲದೆ ಕೂತಿರುತ್ತಾರೆ.. ಅಂತಹವರಿಗೆ ಇಂತಹ ಸ್ನೇಹಿತರು ಬೇಕು.. ಕ್ಲೋಸ್ ಫ್ರೆಂಡ್ಸ್ ಅನ್ನೋ ಕಾರಣಕ್ಕೆ ಸಂಜೆ ಕೆಲಸ ಮುಗಿಸಿಕೊಂಡು ಅವರನ್ನು ಭೇಟಿಯಾಗೋಕೆ ಹೋದರೆ ಅಲ್ಲೇ ಪಾರ್ಟಿ, ಊಟ ಆಗಿಬಿಡುತ್ತದೆ.. ಅಂದರೆ ಅವರ ಜೊತೆ ಊಟ, ಪಾರ್ಟಿ ಮಾಡಿ ನಿಮ್ಮ ಜೇಬಿನಿಂದ ಹಣ ಕೊಟ್ಟು ಬಂದಿರುತ್ತೀರಿ.. ಇದರಿಂದ ನಿಮ್ಮ ಆರೋಗ್ಯವೂ ಹಾಳು, ಹಣವೂ ವ್ಯರ್ಥವಾಗುತ್ತದೆ… ಹೀಗಾಗಿ ಕೆಲದ ಮುಗಿದ ತಕ್ಷಣ ಮನೆಗೆ ಬಂದು ಮಲಗಿಬಿಡಿ.. ನೋಡಿದವರು ಸೋಮಾರಿ ಅಂದರೂ ಪರವಾಗಿಲ್ಲ… ಕೆಲವಿಲ್ಲದಾಗ ನೀವು ಸುಮ್ಮನೆ ಮಲಗಿಬಿಟ್ಟಾಗ, ನೀವು ಗಳಿಸಿ, ಹೂಡಿಕೆ ಮಾಡಿದ ಹಣ ನಿಮಗಾಗಿ ದುಡಿಯುತ್ತಿರುತ್ತದೆ.
ಇದನ್ನೂ ಓದಿ;Early Retirement Plan; 45 ವರ್ಷಕ್ಕೇ ನಿವೃತ್ತಿ, ಸಾಯೋವರೆಗೂ ಸುಖದ ಸುಪ್ಪತ್ತಿಗೆಯಲ್ಲಿ ಜೀವಿಸಬಹುದು!
ಮದುವೆಗೆ ಮುಂಚಿನ 10 ವರ್ಷ ಸೋಮಾರಿಗಳಾಗಿಬಿಡಿ;
ಮದುವೆಗೆ ಮುಂಚಿನ 10 ವರ್ಷ ಸೋಮಾರಿಗಳಾಗಿಬಿಡಿ; ಓದು ಮುಗಿಸಿಕೊಂಡು ಕೆಲಸಕ್ಕೆ ಸೇರಿದಾಗ ಯುವಕರು ಉತ್ಸಾಹದಲ್ಲಿರುತ್ತಾರೆ.. ಸಂಪಾದಿಸಲು ಶುರು ಮಾಡುತ್ತಿದ್ದಂತೆ ಆಸೆ, ಆಕಾಂಕ್ಷೆಗಳು ಹೆಚ್ಚಾಗಿಬಿಡುತ್ತವೆ.. ಜೊತೆಗೆ ಜವಾಬ್ದಾರಿಗಳೂ ಇರೋದಿಲ್ಲ.. ಹೀಗಾಗಿ ಸಂಬಳ ಅಕೌಂಟ್‌ಗೆ ಬೀಳುತ್ತಿದ್ದಂತೆ ಮಜಾ ಮಾಡಲು ಶುರು ಮಾಡುತ್ತಾರೆ.. ಇದ್ರಿಂದ ಗಳಿಸಿದ್ದೆಲ್ಲಾ ವೇಸ್ಟ್ ಮಾಡಿಬಿಡುತ್ತಾರೆ.. ಮದುವೆಗೆ ಮುಂಚೆಯೇ ಎಲ್ಲಾ ಉದ್ಯೋಗಸ್ಥರೂ ಮದ್ಯಪಾನ, ಧೂಮಪಾನದಂತಹ ಕೆಟ್ಟ ಅಭ್ಯಾಸಗಳಿಗೆ ದಾಸರಾಗೋದು.. ಜೊತೆಗೆ ಬಟ್ಟೆ, ಬರೆ ಅಂತ ವಿನಾಕಾರಣ ಖರ್ಚು ಮಾಡುತ್ತಾರೆ.. (10YearPlan)
ಅದೇ ಕೆಲಸಕ್ಕೆ ಸೇರಿದಂದಿನಿಂದ ಮದುವೆಯಾಗುವವರೆಗೆ ಆದಷ್ಟು ಹಣ ಉಳಿತಾಯ ಮಾಡಿದರೆ ಮುಂದಿನ ಜೀವನ ತುಂಬಾ ಚೆನ್ನಾಗಿರುತ್ತದೆ.. ಮದುವೆಗೆ ಮುಂಚೆ ಹೆಚ್ಚಿನ ಖರ್ಚುಗಳು ಇರೋದಿಲ್ಲ… ಖರ್ಚು ಮಾಡೋದೆಕ್ಕಾ ವೃಥಾ ಪೋಲು ಮಾಡೋದೇ ಆಗಿರುತ್ತದೆ… ಹೀಗಾಗಿ ಮದುವೆಗೆ ಮುಂಚಿನ ಹತ್ತು ವರ್ಷಗಳು ಉದ್ಯೋಗಸ್ಥರು ಅತ್ಯಂತ ಸೋಮಾರಿಗಳಾಗಬೇಕು… ವೀಕೆಂಡ್‌ಗಳಲ್ಲಿ ಮಾಲ್, ಥಿಯೇಟರ್, ಶಾಪಿಂಗ್, ಪಾರ್ಟಿ ಎಂಬ ವಿಚಾರಗಳಿಂದ ದೂರವಿರಬೇಕು. ವೀಕೆಂಡ್ ಶಾಪಿಂಗ್ ಅಂದ್ರೆ ಅಯ್ಯೋ ಯಾರಪ್ಪ ಅಷ್ಟು ದೂರ ಹೋಗೋದು ಎಂಬ ಮನಸ್ಥಿತಿ ನಿಮ್ಮದಾಗಬೇಕು… (MoneyGoals)
ಇದನ್ನೂ ಓದಿ; Money Mindset; 15-15-15 ರೂಲ್ ಅನುಸರಿಸಿದರೆ ನೀವೂ ಕೋಟ್ಯಧೀಶರಾಗಬಹುದು!
ಏನೂ ಸಿಗದ ಪ್ರದೇಶದಲ್ಲಿ ಮನೆ ಮಾಡಿ;
ಏನೂ ಸಿಗದ ಪ್ರದೇಶದಲ್ಲಿ ಮನೆ ಮಾಡಿ; ತುಂಬಾ ಜನ ಮಾಲ್, ಚಿತ್ರಮಂದಿರ, ಪಬ್‌ಗಳು, ಹೋಟೆಲ್‌ಗಳು ಎಲ್ಲಾ ಹತ್ತಿರದಲ್ಲೇ ಇರುವ ಕಡೆ ಮನೆ ಮಾಡೋದಕ್ಕೆ ನೋಡುತ್ತಾರೆ. ಮನೆಗೆ ಬಳಿಯೇ ಎಲ್ಲವೂ ಸಿಗೋದಾದರೆ ನಾವು ಮಾತು ಮಾತಿಗೂ ಅಲ್ಲಿಗೇ ಭೇಟಿ ಕೊಡುತ್ತೇವೆ.. ಮನುಷ್ಯನಿಗೆ ಆಸೆ ಹೆಚ್ಚಿರುವುದರಿಂದ ಓಡಾಡುವಾಗ ನಮ್ಮ ಕಣ್ಣಿಗೆ ಕಾಣಿಸಿದ್ದೆಲ್ಲಾ ಖರೀದಿ ಮಾಡುತ್ತೇವೆ. ಆದ್ರೆ ಅದೇ ಮನೆ ಏನೋ ಸಿಗದ ದೂರದ ಸ್ಥಳದಲ್ಲಿದ್ದರೆ, ಏನಾದರೂ ಖರೀದಿ ಮಾಡಬೇಕು ಅಂದ್ರೂ, ಯಾರು ಅಷ್ಟು ದೂರ ಹೋಗುತ್ತಾರೆ ಬಿಡು ಎಂದು ಸುಮ್ಮನಾಗುತ್ತಾರೆ. ಇದರಿಂದ ಸಾಕಷ್ಟು ಉಳಿತಾಯವಾಗುತ್ತದೆ. ಮನೆ ದೂರದ ಪ್ರದೇಶದಲ್ಲಿದ್ದರೂ ಸಿಟಿಯಲ್ಲಿ ಓಡಾಡೋದು ಏನೂ ಕಷ್ಟವಾಗೋದಿಲ್ಲ…