Snowfall; ಭಾರಿ ಹಿಮಪಾತಕ್ಕೂ ಜಗ್ಗದ ಸನ್ಯಾಸಿ; ಕೇದಾರ ಕಣಿವೆಯಲ್ಲಿ ಪವಾಡ!
ಕಾಶ್ಮೀರ; ಜಮ್ಮು-ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಹಿಮಪಾತವಾಗುತ್ತಿದೆ (snowfall). ಅದರಲ್ಲೂ ಕೇದಾರನಾಥ ದೇಗುಲ ಸಂಪೂರ್ಣದ ಹಿಮದಲ್ಲಿ ಮುಚ್ಚಿಹೋಗಿದೆ. ಹೀಗಾಗಿ, ಕೇದಾರ ಕಣಿವೆಗೆ (kedar vally) ಚಳಿಗಾಲದ ಸಮಯದಲ್ಲಿ ಯಾರೂ ಹೋಗುವಂತಿಲ್ಲ. ಹೋಗೋದು ಕೂಡಾ ಕಷ್ಟವೇ. ಅಲ್ಲಿಗೆ ಹೋದರೇ ಪ್ರಾಣ ಹೋಗೋದು ಬಹುತೇಕ ಖಚಿತ. ಆದರೂ ಕೂಡಾ ಸನ್ಯಾಸಿಯೊಬ್ಬರು ಭಾರಿ ಹಿಮಪಾತದ ನಡುವೆಯೂ ಅಲ್ಲಿ ಓಡಾಡಿದ್ದಾರೆ. ಇದು ವಿಡಿಯೋ ಕೂಡಾ ಮಾಡಲಾಗಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಕೇದಾರ ಕಣಿವೆಯಲ್ಲಿ ಓಡಾಡಿದ ಲಲಿತ್ ಮಹಾರಾಜ್
ಕೇದಾರ ಕಣಿವೆಯಲ್ಲಿ ಓಡಾಡಿದ ಲಲಿತ್ ಮಹಾರಾಜ್; ಕೇದಾರ ಕಣಿವೆಯ ಭೈರವ ಮಂದಿರದಲ್ಲಿ ಹಿಮಪಾತನದ ನಡುವೆಯೂ ಲಲಿತ್ ಮಹಾರಾಜ್ ಎಂಬ ಸನ್ಯಾಸಿ ವಾಸವಿದ್ದಾರೆ. ಹಿಮದಲ್ಲಿ ಓಡಾಟ ನಡೆಸಿದ್ದಾರೆ. ಇದು ಎಲ್ಲರ ಅಚ್ಚರಿಗೂ ಕಾರಣವಾಗಿದೆ. ಯಾಕಂದ್ರೆ, ಹಿಮದಲ್ಲಿ ಮನುಷ್ಯರೇ ಮುಚ್ಚಿಹೋಗುವಷ್ಟು ಹಿಮಪಾತವಾಗುತ್ತಿರುತ್ತವೆ. ಉಷ್ಣಾಂಶ ಮೈನಸ್ ಗೆ ಹೋಗಿರುತ್ತದೆ. ಕೇದನಾಥ ದೇಗುಲವೇ ಹಿಮದಲ್ಲಿ ಮುಳುಗಿಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಒಬ್ಬರು ಸನ್ಯಾಸಿ ಹಿಮದಲ್ಲಿ ಓಡಾಡಿದ್ದಾರೆ. ಇದು ಒಂದು ರೀತಿಯ ಪವಾಡವೇ ಸರಿ ಎಂದು ಹೇಳುತ್ತಿದ್ದಾರೆ ಜನ.
ಇದನ್ನೂ ಓದಿ;176 Feet Hanuman Statue; ರಾಜಾನಗರದಲ್ಲಿ ವಿಶ್ವದ ಅತಿ ಎತ್ತರ ಹನುಮಾನ್ ಪ್ರತಿಮೆ!
ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ!
ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ!; ಪ್ರತಿ ಚಳಿಗಾಲದಲ್ಲೂ ಇಲ್ಲಿ ಭಾರಿ ಹಿಮಪಾತವಾಗುತ್ತದೆ. ದೇಗುಲಗಳು ಕೂಡಾ ಹಿಮದಲ್ಲಿ ಮುಳುಗಿಹೋಗುತ್ತವೆ. ಕೇದಾರನಾಥ ದೇಗುಲ ಸಂಪೂರ್ಣ ಹಿಮದಿಂದ ಮುಚ್ಚಿಹೋಗಿದೆ. ಹೀಗಾಗಿ ಇಲ್ಲಿ ಜನಸಾಮಾನ್ಯರು ಓಡಾಡೋದಕ್ಕೆ ಸಾಧ್ಯವೇ ಇಲ್ಲ. ಇಂತಹ ಹವಾಮಾನದಲ್ಲಿ ಇಲ್ಲಿ ಓಡಾಡಿದರೆ ರಕ್ತ ಹೆಪ್ಪುಗಟ್ಟಿಬಿಡುತ್ತದೆ. ನೀವೇ ಜಾಗ್ರತೆಗಳನ್ನು ತೆಗೆದುಕೊಂಟು, ದಪ್ಪನೆಯ ಬಟ್ಟೆಗಳನ್ನು ಧರಿಸಿಕೊಂಡು ಹೋದರೂ ರಕ್ತ ಹೆಪ್ಪುಗಟ್ಟೋದು ಗ್ಯಾರೆಂಟಿ. ರಕ್ತ ಹೆಪ್ಪುಗಟ್ಟಿದರೆ ಸಾವು ಕೂಡಾ ಗ್ಯಾರೆಂಟಿ. ಈ ಹಿನ್ನೆಲೆಯಲ್ಲಿ ಚಳಿಗಾಲದಲ್ಲಿ ಜನರು ಪ್ರವೇಶಕ್ಕೆ ನಿರ್ಬಂಧಿ ವಿಧಿಸಲಾಗುತ್ತದೆ. ಪ್ರತಿಬಾರಿಯಂತೆ ಈ ಬಾರಿಯೂ ನಿರ್ಬಂಧ ವಿಧಿಸಲಾಗಿದೆ. ಇದರ ನಡುವೆಯೇ ಸನ್ಯಾಸಿ ಲಲಿತ್ ಮಹಾರಾಜ್ ಅದೇ ಜಾಗದಲ್ಲಿ ಓಡಾಡಿದ್ದಾರೆ.
ಹರಹರ ಮಹದೇವ್ ಘೋಷಣೆಯೊಂದಿಗೆ ಹೆಜ್ಜೆ!
ಹರಹರ ಮಹದೇವ್ ಘೋಷಣೆಯೊಂದಿಗೆ ಹೆಜ್ಜೆ!: ಒಂದು ಕಡೆ ಹಿಮಪಾತವಾಗುತ್ತದೆ. ಒಂದು ವೇಳೆ ದೊಡ್ಡ ಹಿಮಗಡ್ಡೆಯೊಂದು ಜಾರಿಬಿದ್ದರೆ ಸತ್ತೇಹೋಗುತ್ತಾರೆ. ಅಷ್ಟೇ ಏಕೆ ಬಿದ್ದಿರುವ ಹಿಮದಲ್ಲಿ ಸಿಲುಕಿಬಿಡುವ ಸಾಧ್ಯತೆಯೂ ಇರುತ್ತದೆ. ಹೀಗಿದ್ದರೂ ಸನ್ಯಾಸಿಯಾದ ಲಲಿತ್ ಮಹಾರಾಜ್ ಅವರು ಆರಾಮಾಗಿ ಓಡಾಡಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಅವರು ಹರ ಹರ ಮಹದೇವ್ ಎಂದು ಘೋಷಣೆ ಕೂಗುತ್ತಾ ಆರಾಮಾಗಿ ಹಿಮದಲ್ಲಿ ಓಡಾಡಿದ್ದಾರೆ. ಆ ಶಿವನೇ ಈ ಸನ್ಯಾಸಿಯನ್ನು ರಕ್ಷಿಸಿದ್ದಾರೆ. ದೇವರೇ ಬಂದು ಸನ್ಯಾಸಿ ಲಲಿತ್ ಮಹಾರಾಜ್ ಅವರನ್ನು ಹಿಮದಲ್ಲಿ ನಡೆಸಿದ್ದಾರೆ. ಹೀಗಾಗಿಯೇ ಅವರಿಗೆ ಏನೂ ಆಗಿಲ್ಲ. ಇದು ಒಂದು ಪವಾಡ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ; Krishna idol; ಕೃಷ್ಣಾ ನದಿಯಲ್ಲಿ ಪುರಾತನ ಶ್ರೀಕೃಷ್ಣನ ಮೂರ್ತಿ ಪತ್ತೆ
ಹಿಮಪಾತದ ಸಂದರ್ಭದಲ್ಲಿ ಉತ್ತರಾಖಂಡದಲ್ಲಿ ಜೀವಿಸೋದು ಬಹಳ ಕಷ್ಟ. ಆದರೆ ಲಲಿತ ಮಹಾರಾಜ್ ಅವರು ಭೈರವ ಮಂದಿರದಲ್ಲಿ ಪೂಜೆ, ಧ್ಯಾನದ ಮೂಲಕ ಕಳೆದ 1 ವರ್ಷದಿಂದ ಕಾಲ ಕಳೆಯುತ್ತಿದ್ದಾರೆ.