Everyone Owns a Plane; ಈ ಹಳ್ಳಿಯಲ್ಲಿ ಮನೆಗೊಂದು ವಿಮಾನವಿದೆ..!
ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಓಡಾಡಬೇಕು ಅನ್ನೋ ಕನಸು ಸಾಕಷ್ಟು ಜನರಲ್ಲಿರುತ್ತೆ.. ಈಗ ವಿಮಾನ ಪ್ರಯಾಣ ಅಷ್ಟೇನೂ ದುಬಾರಿಯಲ್ಲದಿದ್ದರಿಂದ ಎಲ್ಲರೂ ಇದು ಎಟಕುತ್ತಿದೆ ಕೂಡಾ.. ವಿಮಾನ ಹತ್ತೋ ಕನಸು ಕಾಣೋದು ಓಕೆ.. ಆದರೆ ಯಾರೂ ವಿಮಾನವನ್ನೇ ತಂದು ಮನೆ ಮುಂದೆ ನಿಲ್ಲಿಸಿಕೊಳ್ಳುವ ಯೋಚನೆಯನ್ನಾಗಲೀ, ಕನಸನ್ನಾಗಿ ಕಾಣಲ್ಲ.. ಹೀಗಂತ ಅಂದುಕೊಳ್ಳೋದು ನಮ್ಮ ಭ್ರಮೆ ಅಷ್ಟೇ.. ಯಾಕೆಂದ್ರೆ ಅಮೆರಿಕದಲ್ಲಿ ಒಂದು ಹಳ್ಳಿ ಇದೆ.. ಈ ಹಳ್ಳಿಯಲ್ಲಿ ಮನೆ ಮನೆಗೂ ಒಂದು ವಿಮಾನವಿದೆ.. ಆ ಗ್ರಾಮವೇ ಒಂದು ಏರ್ ಪೋರ್ಟ್.. ಪ್ರತಿಮನೆಯ ಮುಂದೆ ಒಂದು ವಿಮಾನ ನಿಂತಿರುತ್ತದೆ..
ಇದನ್ನೂ ಓದಿ; Tattoo Aftercare; ಟ್ಯಾಟೂ ಹಾಕಿಸಿಕೊಂಡ ಮೇಲೆ ಈ ಜಾಗ್ರತೆ ಇರಲೇಬೇಕು!
ಸ್ಪ್ರೂಸ್ ಕ್ರಿಕ್ ಹಳ್ಳಿ ವಿಶೇಷತೆ ಏನು ಗೊತ್ತಾ..?
ಇದು ಅಮೆರಿಕದ ಸ್ಟ್ರೂಸ್ ಕ್ರಿಕ್ ಎಂಬ ಗ್ರಾಮ.. ಇಲ್ಲಿನ ಪ್ರತಿಯೊಂದು ಮನೆಯಲ್ಲೂ ಒಂದೊಂದು ವಿಮಾನವಿದೆ.. ನಮ್ಮಲ್ಲಿ ಬೈಕ್, ಕಾರುಗಳಿಗೆ ಹೇಗೆ ಜಾಗ ಮಾಡಿರುತ್ತೇವೆಯೋ ಹಾಗೆ ಮನೆ ಮುಂದೆ ವಿಮಾನ ನಿಲ್ಲಿಸೋದಕ್ಕೆ ಇಲ್ಲಿ ಜಾಗ ಮಾಡಿರುತ್ತಾರೆ..
ಈ ಊರಲ್ಲಿ ಮನೆಗೊಂದು ವಿಮಾನ ಇದೆ!
ಡೇಟೋನಾ ಬೀಚ್ ನಿಂದ ಹನ್ನೊಂದು ಕಿಲೋ ಮೀಟರ್ ದೂರದಲ್ಲಿ ಈ ಹಳ್ಳಿ ಸಿಗುತ್ತೆ.. ಇಲ್ಲಿ ಒಟ್ಟು, 1,300 ಮನೆಗಳಿವೆ.. ಇದರಲ್ಲಿ ಆರು ಸಾವಿರ ಕುಟುಂಬಗಳಿದ್ದು, 1300ಕ್ಕೂ ಹೆಚ್ಚು ವಿಮಾನಗಳಿವೆ.. ಅಂದರೆ ಪ್ರತಿ ಮನೆಯಲ್ಲೂ ಕನಿಷ್ಠವೆಂದ್ರೂ ಒಂದೊಂದು ವಿಮಾನವಿದೆ.. ಕೆಲವೊಂದು ಕುಟುಂಬಗಳಲ್ಲಿ 2-3 ವಿಮಾನಗಳಿರುವುದೂ ಉಂಟು.. ಇವರು ತಮ್ಮ ವಿಮಾನಗಳನ್ನು, ಮನೆಯ ಮುಂದೆ, ಕೆಲವೊಮ್ಮೆ ರಸ್ತೆಯ ಮೇಲೆ ಹಾಗೂ ಕೆಲವರು ಪ್ರತ್ಯೇಕವಾದ ಪಾರ್ಕಿಂಗ್ ಜಾಗವನ್ನು ಮಾಡಿಕೊಂಡು ನಿಲ್ಲಿಸುತ್ತಾರೆ..
ಈ ಗ್ರಾಮವೇ ಒಂದು ವಿಮಾನ ನಿಲ್ದಾಣದಂತೆ ಕಾಣಿಸುತ್ತದೆ.. ಇಲ್ಲಿನ ಜನರು, ವಿಮಾನಗಳ ಸುಗಮ ಸಂಚಾರಕ್ಕೆ ವಿಶೇಷ ತಂತ್ರಜ್ಞಾನವನ್ನು ಕಂಡುಕೊಂಡಿದ್ದಾರೆ.. ಇದರ ಮೂಲಕ ಯಾವ ಮನೆಯ ವಿಮಾನ ಎಲ್ಲಿ ಓಡಾಡುತ್ತಿದೆ, ಯಾವುದು ರನ್ ವೇಯಲ್ಲಿ ಬಂದು ಇಳಿಯುತ್ತಿದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು.. ಇದರಿಂದಾಗಿ ಎಲ್ಲರ ಪ್ರಯಾಣವೂ ಸುಖಕರ. ಹೆಚ್ಚು ವಿಮಾನವಿದ್ದರೂ ಅಪಘಾತಗಳು ನಡೆಯುವುದಿಲ್ಲ.
ಇದನ್ನೂ ಓದಿ; Dry Fruits; ಖಾಲಿ ಹೊಟ್ಟೆಯಲ್ಲಿ ಈ ಒಣಹಣ್ಣುಗಳನ್ನು ತಿನ್ನಲೇಬಾರದು..!
ಒಂದೇ ಕಡೆ ಬೈಕ್, ಕಾರು, ವಿಮಾನಗಳು!
ಒಂದೇ ಕಡೆ ಬೈಕ್, ಕಾರು ಮತ್ತು ವಿಮಾನಗಳು ಸಮ್ಮಿಳಿತಗೊಂಡಿರುವುದು ಇಲ್ಲಿನ ವಿಶೇಷ. ಗ್ರಾಮದ ಒಟ್ಟು ನಿವಾಸಿಗಳ ಸಂಖ್ಯೆ ಸುಮಾರು 60,000 ಇದ್ದು, ಈ ಗ್ರಾಮಕ್ಕೆ ವರ್ಷವೊಂದರಲ್ಲಿ ಸುಮಾರು ಎಂಬತ್ತು ಲಕ್ಷದಷ್ಟು ಪ್ರವಾಸಿಗರು ಬರುತ್ತಾರೆ.. ಈ ಗ್ರಾಮದ ಕೆಲವೊಂದು ಮನೆಗಳಲ್ಲಿ, ವಿಮಾನಗಳನ್ನು ನಿಲ್ಲಿಸಲು ಅಗತ್ಯವಿರುವ ಮೂರು ಗೋಡೆಗಳುಳ್ಳ ವಿವಿಧ ಗಾತ್ರದ ಶೆಡ್ ನಿರ್ಮಿಸಿದ್ದಾರೆ. ಕೆಲವೊಬ್ಬರು ಇತರರಿಗೆ ವಿಮಾನ ನಿಲ್ಲಿಸಲು ಬಾಡಿಗೆಗೆ ಶೆಡ್‌ಗಳನ್ನು ಕೊಡುತ್ತಾರೆ. ವಾರ್ಷಿಕ ಸುಮಾರು 25,000 ಬಾರಿ ಇಲ್ಲಿ ವಿಮಾನಗಳು ಗಗನಕ್ಕೆ ನೆಗೆದು ಮತ್ತೆ ಇಳಿಯುತ್ತವೆ. ವಿಮಾನಗಳು ಬಿಳಿಯ ಹೊಗೆಯ ಮೂಲಕ ಬಾನಂಗಳದಲ್ಲಿ I Love You, Will You Marry Me ಎಂಬ ಬರಹಗಳನ್ನು ವರ್ಣರಂಜಿತವಾಗಿ ಬಿಡಿಸುವುದನ್ನು ಇಲ್ಲಿನ ಸಮುದ್ರ ಕಿನಾರೆಯಲ್ಲಿ ನಿಂತು ಪ್ರವಾಸಿಗರು ಸಂಭ್ರಮ ಪಡುತ್ತಾರೆ..
ಇದನ್ನೂ ಓದಿ; Horoscope; ಇಂದಿನ ನಿಮ್ಮ ಭವಿಷ್ಯ ಹೇಗಿದೆ..? ಇವತ್ತು ಈ ಕೆಲಸ ಮಾಡಲೇಬೇಡಿ