Lifestyle

Bangaradoddi Naale; 4 ಶತಮಾನದ ಹಿಂದೆ ಕಟ್ಟಿದ ಮಂಡ್ಯದ ಬಂಗಾರದೊಡ್ಡಿ ನಾಲೆ ಬಗ್ಗೆ ನಿಮಗೆಷ್ಟು ಗೊತ್ತು..?

ಬಂಗಾರ ದೊಡ್ಡಿ ನಾಲೆ.. (Bangaradoddi naale) ಈ ಹೆಸರು ಎಲ್ಲರಿಗೂ ಪರಿಚಿತ.. ಎಲ್ಲೋ ಕೇಳಿದೀವಿ ಅಂತಾರೆ.. ಆದರೆ ಹೆಚ್ಚು ಜನರಿಗೆ ಇದು ಎಲ್ಲಿದೆ ಅಂತಾನೇ ಗೊತ್ತಿಲ್ಲ.. ನಾಲ್ಕು ಶತಮಾನಗಳಷ್ಟು ಹಳೆಯದಾದ ಈ ನಾಲೆ ಇರೋದು ಶ್ರೀರಂಗಪಟ್ಟಣದ (srirangapattana) ಸನಿಹದಲ್ಲೇ.. ಚಂದವನ ಆಶ್ರಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಈ ನಾಲೆ ಕಟ್ಟಲಾಗಿದೆ.. ರೈತರ ಪಾಲಿಗೆ ಜೀವನಾಡಿಯಾಗಿರುವ ಬಂಗಾರದೊಡ್ಡಿ ನಾಲೆ, ಪ್ರವಾಸಿಗರ ಪಾಲಿಗೂ ಬಂಗಾರದಂತಹ ಸ್ಥಳ..


ವೀಕೆಂಡ್‌ನಲ್ಲಿ ಇಲ್ಲಿ ಮೋಜಿ-ಮಸ್ತಿ ಹೆಚ್ಚು..!

ಬಂಗಾರ ದೊಡ್ಡಿ ನಾಲೆ ಹೆಚ್ಚು ಜನಕ್ಕೆ ಗೊತ್ತಿಲ್ಲ.. ಆದರೆ ಮೈಸೂರಿನ ಜನಕ್ಕೆ ಇದು ಚಿರಪರಿಚಿತ.. ವೀಕೆಂಡ್‌ ನಲ್ಲಿ ಮೋಜು, ಮಸ್ತಿ ಮಾಡಬೇಕು ಅಂದ್ರೆ ಯುವಕರು ಇಲ್ಲಿಗೇ ಬರೋದು.. ಕೆಲ ಫ್ಯಾಮಿಲಿಗಳು ವೀಕೆಂಡ್‌ ನಲ್ಲಿ ಇಲ್ಲಿಗೆ ಬಂದು ಇಲ್ಲೇ ಅಡುಗೆ ಮಾಡಿ ದಿನ ಕಳೆಯುತ್ತಾರೆ.. ಪ್ರೇಮಿಗಳಿಗಂತೂ ಇದು ಅಚ್ಚುಮೆಚ್ಚು..
ಬರಗಾಲದಲ್ಲಿ ಕೆರೆ ಕಟ್ಟೆಗಳು ಖಾಲಿಯಾಗುತ್ತವೆ.. ಆದರೆ ಎಂಥಾ ಬರಗಾಲ ಬಂದರೂ ಈ ಬಂಗಾರ ದೊಡ್ಡಿ ನಾಲೆ ಖಾಲಿಯಾಗುವುದಿಲ್ಲವಂತೆ.. ಎಷ್ಟೇ ಬರ ಬಡಿದರೂ ಈ ಭಾಗದ ರೈತರಿಗೆ ಅದರ ಸೋಂಕೂ ತಗಲುವುದಿಲ್ಲವಂತೆ.. ಹೀಗಾಗಿ ಇಲ್ಲಿನ ರೈತರ ಪಾಲಿಗೆ ವರದಾನವಾಗಿರುವ ‘ಬಂಗಾರ ದೊಡ್ಡಿ’ ನಾಲೆ, ವರ್ಷವೆಲ್ಲಾ ಹರಿಯುವುದರಿಂದ ಕೃಷಿಕರ ಬದುಕು ಬೆಳಕಾಗಿದೆ..

ಇದನ್ನೂ ಓದಿ; Chukki chithra; ಕೋಟಿ ಚುಕ್ಕಿಗಳಿಂದ ಅರಳುವ ಸುಂದರ `ಚುಕ್ಕಿಚಿತ್ರ’!

1638ರಲ್ಲಿ ಈ ಬಂಗಾರದೊಡ್ಡಿ ನಾಲೆ ನಿರ್ಮಾಣ

ಶ್ರೀರಂಗ ಪಟ್ಟಣದ ಈಗಿನ ಚಂದ್ರವನ ಆಶ್ರಮದ ಹಿಂಭಾಗ ಕಾವೇರಿ ನದಿಗೆ ಒಡ್ಡು ಕಟ್ಟಿ ಬಂಗಾರದೊಡ್ಡಿ ನಾಲೆ ನಿರ್ಮಾಣ ಮಾಡಲಾಗಿದೆ. ಶ್ರೀರಂಗಪಟ್ಟಣ ಹಾಗೂ ಗಂಜಾಂ ಗ್ರಾಮಗಳ ರೈತರ ಜಮೀನಿಗೆ ಈ ನಾಲೆ ಮೂಲಕ ನೀರುಣಿಸಲಾಗುತ್ತದೆ.. ಈ ನಾಲೆ 60 ಕ್ಯೂಸೆಕ್ ನೀರು ಹರಿಸುವ ಸಾಮರ್ಥ್ಯ ಹೊಂದಿದ್ದು, 850 ಎಕರೆಗೂ ಹೆಚ್ಚು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗುತ್ತಿದೆ…

ಬಂಗಾರ ದೊಡ್ಡಿ ನಾಲೆ ಮೈಸೂರು ಒಡೆಯರ ಕೊಡುಗೆ. ರಣಧೀರ ಕಂಠೀರವ ನರಸರಾಜ ಒಡೆಯರ್ ಅವರು ಪತ್ನಿ ಬಂಗಾರಮ್ಮ ಹೆಸರಿನಲ್ಲಿ ಕ್ರಿ.ಶ.1638 ರಲ್ಲಿ ನಾಲೆ ನಿರ್ಮಾಣ ಮಾಡಿದರು. ನದಿಗೆ ಅಡ್ಡಲಾಗಿ ನಾಲೆ ನಿರ್ಮಿಸಿರುವುದರಿಂದ ಕೆಆರ್‌ಎಸ್ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದಿದ್ದರೂ ನಾಲೆಯ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರಿನ ಅಭಾವ ಕಾಡುವುದಿಲ್ಲ..

ಈಜಾಡಲೆಂದೇ ಪ್ರವಾಸಿಗರು ಇಲ್ಲಿ ಬರುತ್ತಾರೆ!

ರೈತರ ಪಾಲಿಗೆ ಜೀವನಾಡಿಯಾಗಿರುವ ಈ ನಾಲೆಯಲ್ಲಿ ಪ್ರವಾಸಿಗರು ಈಜಾಡಲು ಬರುತ್ತಾರೆ.. ಸುತ್ತಲೂ ಹಸಿರಿನ ಪ್ರದೇಶವಿರುವುದರಿಂದ ಈ ಸ್ಥಳ ಮನಸಿಗೆ ಮುದ ನೀಡುತ್ತದೆ.. ವೀಕೆಂಡ್‌ ನಲ್ಲಿ ಇಲ್ಲಿ ಜನ ತುಂಬಿ ತುಳುಕುತ್ತಿರುತ್ತಾರೆ.. ವಾರದ ದಿನಗಳಲ್ಲಿ ಬಂದರೆ ಯಾವ ಕಿರಿಕಿರಿಯೂ ಇಲ್ಲದೇ ಸ್ವಚ್ಛಂದವಾಗಿ ನೀರಿನಲ್ಲಿ ಆಟವಾಡಬಹುದು..

ಇದನ್ನೂ ಓದಿ; Krishna idol; ಕೃಷ್ಣಾ ನದಿಯಲ್ಲಿ ಪುರಾತನ ಶ್ರೀಕೃಷ್ಣನ ಮೂರ್ತಿ ಪತ್ತೆ

Share Post