Bengaluru

ಜನಪ್ರತಿನಿಧಿಗಳಿಂದ ಕೊರೋನಾ ನಿಯಮ ಉಲ್ಲಂಘನೆ

ಬೆಂಗಳೂರು: ಕೊರೋನಾ ನಿಯಂತ್ರಿಸುವ ಸಲುವಾಗಿ ಸರ್ಕಾರವೇ ರೂಲ್ಸ್‌ ಜಾರಿ ಮಾಡಿದೆ. ಆದರೆ ನಾಯಕರುಗಳೇ ಆ ರೂಲ್ಸ್‌ ಬ್ರೇಕ್‌ ಮಾಡುತ್ತಿದ್ದಾರೆ.ಇದ್ದರಿಂದ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳಿಗೆ ಒಂದು ರೂಲ್ಸ್‌ ಸಾರ್ವಜನಿಕರಿಗೆ ಒಂದು ನಿಯಮ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಯಾಕೆಂದರೆ ಇಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ ನಲ್ಲಿ ವಿಧಾನ ಪರಿಷತ್‌ ೨೫ ನೂತನ ಸದ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆದಿದೆ. ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಈ ವೇಳೆ ಬ್ಯಾಂಕ್ವೆಟ್‌ ಹಾಲ್‌ ನಲ್ಲಿ ಜನಜಂಗುಳಿ ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲದೆ ಬ್ಯಾಂಕ್ವೆಟ್‌ ಹಾಲ್‌ ನಲ್ಲಿ ಜನಪ್ರತಿನಿಧಿಗಳ ಬೆಂಬಲಿಗರಂತೂ ಫೋಟೋ ತೆಗೆಸಿಕೊಳ್ಳುವುದರಲ್ಲಿ ಮುಗಿಬಿದಿದ್ದರು.
ಆದರೆ ಬೆಂಬಲಿಗರು ಯಾರು ಕಾರ್ಯಕ್ರಮದ ಒಳಗೆ ಮಾಸ್ಕ್‌ ಧರಿಸದೆ, ಜೊತೆಗೆ ಸಾಮಾಜಿಕ ಅಂತರವನ್ನು ಮರೆತೆ ಬಿಟ್ಟಿದ್ದರು. ಆ ವೇದಿಕೆಯಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಡಿ.ಕೆ. ಶಿವಕುಮಾರ್‌ ಕೂಡ ಇದ್ದರು. ಆದರೆ ಅದನ್ನು ಯಾರು ಗಮನಹರಿಸಲಿಲ್ಲ. ಈ ಹಿಂದೆ ವಿಧಾನಸೌಧ ಕಾರಿಡಾರ್‌ ನಲ್ಲಿ ಗುಂಪು ಆಗದಂತೆ ಸಿಎಂ ನಿರ್ಬಂಧ ಹೇರಿದ್ದರು. ಆದರೆ ಈ ಎಲ್ಲ ನಿಯಮ ಉಲ್ಲಂಘಿಸಿದ್ದಾರೆ.

 

Share Post