ಬಂದೂಕಿನಿಂದ ಪತ್ನಿಯನ್ನು ಗುಂಡಿಕ್ಕಿ ಕೊಂದ ವಿರಾಜಪೇಟೆಯ ವ್ಯಕ್ತಿ!
ಕೊಡಗು; ಗಂಡ ಹೆಂಡತಿಯ ಜಗಳ ಉಂಡು ಮಲಗುವತನಕ ಅಂತಾರೆ.. ಆದ್ರೆ ಒಮ್ಮೊಮ್ಮೆ ಅದು ಅತಿರೇಕಕ್ಕೆ ತಿರುಗುತ್ತದೆ.. ಕೊಲೆ ಮಾಡುವಷ್ಟರ ಮಟ್ಟಿಗೆ ಜಗಳಾಗುತ್ತವೆ.. ಕೊಡಗಿನಲ್ಲಿ ನಡೆದಿರೋದು ಕೂಡಾ ಅದೇ.. ಕೊಡಗು ಜಿಲ್ಲೆ ವಿರಾಜಪೇಟೆ ಬಳಿಯ ಬೆಟೋಳ್ಳಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಗುಂಡಿಕ್ಕಿ ಕೊಂದಿದ್ದಾನೆ..
ಇದನ್ನೂ ಓದಿ; ಡ್ರೈವಿಂಗ್ ಕಲಿಸುವಾಗ ಯುವತಿಗೆ ಖಾಸಗಿ ಅಂಗ ಪ್ರದರ್ಶಿಸಿದ ಡ್ರೈವರ್!
ಬೆಟೋಳ್ಳಿ ವಾಸಿ ಬೋಪಣ್ಣ ಎಂಬಾತ ಬಂದೂಕಿನಿಂದ ತನ್ನ ಪತ್ನಿ ಶಿಲ್ಪಳನ್ನು ಕೊಂದಿದ್ದಾನೆ.. ಅನಂತರ ವಿರಾಜಪೇಟೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.. ಕೃತ್ಯಕ್ಕೆ ಬಳಸಿದ ಬಂದೂಕನ್ನು ಕೂಡಾ ಪೊಲೀಸರಿಗೆ ಒಪ್ಪಿಸಿದ್ದಾನೆ.. ಮನೆಯಲ್ಲಿ ಗಂಡ ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.. ಇವತ್ತೂ ಕೂಡಾ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಈ ವೇಳೆ ಬೋಪಣ್ಣ ಕೋವಿ ತೆಗೆದುಕೊಂಡು ಪತ್ನಿಗೆ ಗುಂಡಿಕ್ಕಿದ್ದಾನೆ.. ಇದರಿಂದಾಗಿ 36 ವರ್ಷ ಶಿಲ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ..
ಇದನ್ನೂ ಓದಿ; ಗಂಡನ ಜೊತೆ ಖುಷಿಯಾಗಿ ಹನಿಮೂನ್ ಮುಗಿಸಿದಳು!; ಎರಡೇ ತಿಂಗಳಿಗೆ ಪ್ರಿಯಕರ ಬಳಿಗೆ ಹೋದಳು!
ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ..