BengaluruPolitics

ಚನ್ನಪಟ್ಟಣದಲ್ಲಿ ಸ್ಪರ್ಧೆ ಬಗ್ಗೆ ನಿಖಿಲ್‌ ಹೇಳಿದ್ದೇನು..?; ಧೈರ್ಯದ ಮಾತು!

ಬೆಂಗಳೂರು; ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ.. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮೈತ್ರಿ ಅಭ್ಯರ್ಥಿ ವಿರುದ್ಧ ತೊಡೆತಟ್ಟಲು ರೆಡಿಯಾಗಿದ್ದಾರೆ.. ಆದ್ರೆ ಈಗ ಮೈತ್ರಿ ಅಭ್ಯರ್ಥಿ ಯಾರು ಅನ್ನೋದೇ ಪ್ರಶ್ನೆ.. ಇಷ್ಟು ನಿಖಿಲ್‌ ಕುಮಾರಸ್ವಾಮಿ ಅಭ್ಯರ್ಥಿ ಎಂದು ಎಲ್ಲರೂ ಹೇಳುತ್ತಿದ್ದರು.. ಆದ್ರೆ ನಿಖಿಲ್‌ ಈ ಬಗ್ಗೆ ಏನನ್ನೂ ಹೇಳಿರಲಿಲ್ಲ.. ಇದೀಗ ಯೋಗೇಶ್ವರ್‌ ಕಾಂಗ್ರೆಸ್‌ ಅಭ್ಯರ್ಥಿಯಾದ ಮೇಲೆ ನಿಖಿಲ್‌ ಮಾತನಾಡಿದ್ದಾರೆ.. ಆದರೂ ಅವರ ಉತ್ತರ ಅಡ್ಡಗೋಡೆ ಮೇಲೆ ದೀಪ ಇಟ್ಟಂಗಿದೆ..
ಎನ್‌ಡಿಎ ನೇತೃತ್ವದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗುವ ಧೈರ್ಯವನ್ನು ನಿಖಿಲ್‌ ಕುಮಾರಸ್ವಾಮಿ ತೋರುತ್ತಾರೆಯೇ ಎಂದು ಮಾಧ್ಯಮಗಳು ನಿಖಿಲ್‌ರನ್ನು ಕೇಳುತ್ತವೆ.. ಅದಕ್ಕೆ ಉತ್ತರಿಸಿದ ನಿಖಿಲ್‌ ಕುಮಾರಸ್ವಾಮಿ, ಇಲ್ಲಿ ಧೈರ್ಯದ ಪ್ರಶ್ನೆ ಬರೋದಿಲ್ಲ.. ನಾವು ಎನ್‌ಡಿಎದಲ್ಲಿದ್ದೇವೆ.. ಎನ್‌ಡಿಎ ನಾಯಕರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾವು ಬದ್ಧರಾಗಿರಬೇಕಾಗುತ್ತದೆ.. ಎನ್‌ಡಿಎ ನಾಯಕರು ಅಂದರೆ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರಿಬ್ಬರೂ ಸೇರಿ ಅಭ್ಯರ್ಥಿಯನ್ನು ತೀರ್ಮಾನ ಮಾಡುತ್ತಾರೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ..
ಕಾರ್ಯಕರ್ತರು ನನ್ನನ್ನೇ ಅಭ್ಯರ್ಥಿ ಮಾಡಬೇಕೆಂದು ಒತ್ತಡ ಹಾಕುತ್ತಿದ್ದರು.. ಆದ್ರೆ ಅಭ್ಯರ್ಥಿಯನ್ನು ನಾವು ಮಾತ್ರ ನಿರ್ಧಾರ ಮಾಡೋದಕ್ಕೆ ಆಗೋದಿಲ್ಲ.. ನಾನು ಸ್ಪರ್ಧೆ ಮಾಡಿದರೆ ಗೌಡರು ಕುಟುಂಬ ರಾಜಕಾರಣ ಮಾಡುತ್ತಾರೆ ಅಂತಾರೆ.. ಬೇರೆಯವರಿಗೆ ಅವಕಾಶ ಕೊಟ್ಟರೆ ಧೈರ್ಯದ ಪ್ರಶ್ನೆ ಬರುತ್ತದೆ… ಇದಕ್ಕೆ ನಾನು ಏನು ಹೇಳಬೇಕು ಎಂದೂ ಪ್ರಶ್ನೆಯೊಂದರಕ್ಕೆ ನಿಖಿಲ್‌ ಉತ್ತರವಾಗಿ ಹೇಳಿದ್ದಾರೆ..

Share Post