CrimeDistricts

ಸ್ಕೂಟಿಗೆ ಖಾಸಗಿ ಬಸ್‌ ಡಿಕ್ಕಿ; 13 ವರ್ಷದ ಬಾಲಕಿ ಬಲಿ..!

ಕಾರವಾರ; ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಸೀಬರ್ಡ್ ಖಾಸಗಿ ಬಸ್‌ ಡಿಕ್ಕಿಯಾಗಿದ್ದು, ಹದಿಮೂರು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಕಾರವಾರ ನಗರದ ಬಿಣಗಾದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದಿದೆ.

ಲವಿತಾ ಜಾರ್ಜ ಫರ್ನಾಂಡಿಸ್ (13) ಎಂಬ ಬಾಲಕಿಯೇ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ. ತಂದೆ ಜಾರ್ಜ್ ಫರ್ನಾಂಡಿಸ್ ಜೊತೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಜಾರ್ಜ್‌ ಫರ್ನಾಂಡಿಸ್‌ ಕೂಡಾ ಗಾಯಗೊಂಡಿದ್ದು, ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ ಬೆಂಗಳೂರಿನಿಂದ ಕಾರವಾರಕ್ಕೆ ಬರುತ್ತಿದ್ದು ಎಂದು ತಿಳಿದುಬಂದಿದೆ.

Share Post