ದಸರಾ ಉತ್ಸವಕ್ಕಾಗಿ ಕುದುರೆ ಸವಾರಿ ಕಲಿಕೆ; ಬಿದ್ದು ಯಾದವರಾಜ ವಶಂಸ್ಥ ಸಾವು!
ತೆಲಂಗಾಣ; ರಾಜರ ಕಾಲದಲ್ಲಿ ದಸರಾ ಹಬ್ಬವನ್ನು ಅದ್ದೂರಿಯಾಗಿ ನಡೆಸಲಾಗುತ್ತಿತ್ತು.. ಈಗಲೂ ರಾಜವಂಶಸ್ಥರು ಅದನ್ನು ಕೆಲವು ಕಡೆ ಮುಂದುವರೆಸಿದ್ದಾರೆ.. ಮೈಸೂರಿನಲ್ಲಿ ರಾಜವಂಶಸ್ಥರು ಈಗಲೂ ದಸರಾ ನವರಾತ್ರಿಯನ್ನು ವೈಭವದಿಂದ ಆಚರಣೆ ಮಾಡುತ್ತಾರೆ.. ಅದೇ ರೀತಿ ತೆಲಂಗಾಣದ ಕರ್ನೂಲ್‌ನಲ್ಲಿ ಯಾದವರಾಜ ವಂಶವಿದೆ.. ಈ ವಂಶಸ್ಥರು ದಸರಾ ಹಬ್ಬದಂದು ಕುದುರೆ ಸವಾರಿ ಮಾಡುತ್ತಾರೆ.. ಈ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಹಬ್ಬಕ್ಕೆ ಕುದುರೆ ಸವಾರಿ ಕಲಿಯುತ್ತಿದ್ದ ಯಾದವರಾಜ ವಂಶಸ್ಥ ದಾರುಣವಾಗಿ ಸಾವನ್ನಪ್ಪಿದ್ದಾರೆ..
ಇದನ್ನೂ ಓದಿ; ಬ್ಯಾಡರಹಳ್ಳಿಯ ಮಾನಸ ಆತ್ಮಹತ್ಯೆಗೆ ಕಾರಣ ಏನು ಗೊತ್ತಾ..?
ಕುದುರೆ ಸವಾರಿ ಕಲಿಯುತ್ತಿದ್ದ ವೇಳೆ ಕೆಳಗೆ ಬಿದ್ದು ರಾಜವಂಶಸ್ಥ ಪೃಥ್ವಿರಾಜ್ ರಾಯುಡು ಸಾವನ್ನಪ್ಪಿದ್ದಾರೆ.. ಕಂಟ್ರೋಲ್ ತಪ್ಪಿದ್ದರಿಂದ ಕೆಳಗೆಬಿದ್ದ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತೀವ್ರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವವಾಗಿದ್ದರಿಂದ ಅವರು ಸಾವನ್ನಪ್ಪಿದ್ದಾರೆ.. ಕುದುರೆಯಿಂದ ಕೆಳಗೆ ಬಿದ್ದ ದೃಶ್ಯಗಳು ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿವೆ..