CrimeNational

ಹೈದರಾಬಾದ್‌ ಬಳಿ ಭೀಕರ ಅಪಘಾತ; ಉಂಡೆಯಂತಾಯ್ತು ಕಾರು!

ಹೈದರಾಬಾದ್‌; ಹೈದರಾಬಾದ್‌ ಬಳಿ ರಣ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವಿದಾರ್ಥಿಯೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾರೆ.. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಯಿ ಉಂಡೆಯಂತಾಗಿದೆ.. ಫೈಓವರ್‌ ಸೇತುವೆಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ನಡೆದಿದೆ..

ಇದನ್ನೂ ಓದಿ; ರಾಜ್ಯಪಾಲರ ನೋಟಿಸ್‌ ವಾಪಸ್‌ ಪಡೆಯುವಂತೆ ಒತ್ತಾಯಿಸಿ ನಿರ್ಣಯ!

ಹೈದರಾಬಾದ್‌ನ ರಾಯದುರ್ಗಂನಲ್ಲಿ ಈ ದುರ್ಘಟನೆ ನಡೆದಿದೆ.. ಐಸಿಎಫ್‌ಎಐ ವಿವಿಯಲ್ಲಿ ಬಿಬಿಎ ಓದುತ್ತಿದ್ದ ಚರಣ್‌ ಎಂಬಾತನೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.. ಈತ ಕಾರಿನಲ್ಲಿ ಬಿಎನ್‌ಆರ್‌ ಹಿಲ್ಸ್‌ನಿಂದ ಮೆಹದಿಪಟ್ಟಣಂನ ಮನೆಗೆ ಹೋಗುತ್ತಿದ್ದ. ವೇಗವಾಗಿ ಓಡಿಸುತ್ತಿದ್ದ ಕಾರು ಮಾರ್ಕಮ್‌ ಕೊಳದಯ ಬಳಿಯ ಫ್ಲೈಓವರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ; ಕುಳಿತಲ್ಲೇ ಪ್ರಾಣ ಬಿಟ್ಟ ಗಾರೆ ಕೆಲಸಗಾರ; ಮಾರನೆ ದಿನದವರೆಗೂ ಗೊತ್ತಾಗಲೇ ಇಲ್ಲ!

ಡಿಕ್ಕಿಯ ರಭಸಕ್ಕೆ ಟೈರ್‌ ಹಾಗೂ ಸ್ಟಿಯರಿಂಗ್‌ ಹಾರಿ ಹಲವು ಮೀಟರ್‌ ದೂರದಲ್ಲಿ ಬಿದ್ದಿವೆ.. ಉಂಡೆಯಂತಾಗಿರುವ ಕಾರಿನಿಂದ ಮೃತದೇಹವನ್ನು ತೆಗೆಯಲು ಸತತ ಎರಡು ಗಂಟೆ ಹಿಡಿಯಿತು ಎಂದು ತಿಳಿದುಬಂದಿದೆ.. ಕಾರು ಅತಿ ವೇಗವಾಗಿ ಚಾಲನೆ ಮಾಡಿದ್ದೇ ಈ ದುರ್ಘಟನೆ ಕಾರಣ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ತಾನೇ ಬಟ್ಟೆ ಹರಿದುಕೊಂಡು ಯುವಕನ ಮೇಲೆ ಆರೋಪ ಮಾಡಿದ ಮಹಿಳೆ!

Share Post