ಹೆಣ್ಣು ಕೊಟ್ಟ ಅತ್ತೆಯನ್ನೇ ಮದುವೆಯಾದ ಅಳಿಯ!
ಪಾಟ್ನಾ; ಬಿಹಾರದಲ್ಲಿ ವ್ಯಕ್ತಿಯೊಬ್ಬ ಹೆಣ್ಣು ಕೊಟ್ಟ ಅತ್ತೆಯನ್ನೇ ಮದುವೆಯಾಗಿರುವ ಘಟನೆ ನಡೆದಿದೆ.. ತನ್ನ ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಅದರ ನಂತರ ಅಳಿಯ ತನ್ನ ಅತ್ತೆಯೊಂದಿಗೆ ಸಲುಗೆ ಬೆಳೆಸಿದ್ದ.. ಅದು ಪ್ರೀತಿಯಾಗಿ ಮಾರ್ಪಟ್ಟು ಇಬ್ಬರ ನಡುವೆ ಅಕ್ರಮ ಸಂಬಂಧ ಏರ್ಪಟ್ಟಿತ್ತು.. ಒಂದು ದಿನ ಅತ್ತೆಯೊಂದಿಗೆ ಹಾಸಿಗೆ ಹಂಚಿಕೊಂಡಿದ್ದ ಅಳಿಯ ಮಾವನ ಕೈಗೆ ಸಿಕ್ಕಿಬಿದ್ದಿದ್ದಾನೆ.. ಇದಾದ ಮೇಲೆ ಮಾವನೇ ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿದ್ದಾನೆ..
ಬಿಹಾರದ ಬಂಕಾದ ಛತ್ರಪಾಲ್ ಪಂಚಾಯತ್‌ನ ಹೀರ್ಮೋತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಸಿಕಂದರ್ ಯಾದವ್ ಎಂಬ ಅಳಿಯನೇ ಅತ್ತೆ ಗೀತಾ ದೇವಿ (45)ಯನ್ನು ಮದುವೆಯಾದವನು.. ಮಾವ ದಿಲೇಶ್ವರ್ ದರ್ವೆ (55) ಅವರೇ ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿದ್ದಾನೆ.. ದಿಲೇಶ್ವರ್ ದರ್ವೆ ಹಾಗೂ ಗೀತಾದೇವಿ ದಂಪತಿ ಕೆಲ ವರ್ಷಗಳ ಹಿಂದೆ ಸಿಕಂದರ್ ಯಾದವ್‌ಗೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದರು.. ಆದ್ರೆ ಅನಾರೋಗ್ಯದ ಕಾರಣದಿಂದಾಗಿ ಸಿಕಂದರ್ ಪತ್ನಿ ಸಾವನ್ನಪ್ಪಿದ್ದಳು.. ಇದಾದ ಮೇಲೆ ಸಿಂಕದರ್ ತನ್ನ ಅತ್ತೆಯ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ ಎಂದು ತಿಳಿದುಬಂದಿದೆ..
ಅಳಿಯ, ಅತ್ತೆ ಮನೆಯಲ್ಲಿ ಇದ್ದಿದ್ದರಿಂದ ಇಬ್ಬರ ನಡುವೆ ಸಲುಗೆ ಬೆಳೆದಿತ್ತು.. ಒಂದು ದಿನ ಇಬ್ಬರೂ ಪ್ರಣಯದಲ್ಲಿದ್ದಾಗ ಗಂಡ ದಿಲೇಶ್ವರ್ ದರ್ವೆ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.. ಇದರಿಂದಾಗಿ ಗಲಾಟೆ ನಡೆದಿದ್ದು, ಈ ವಿಚಾರ ಪಂಚಾಯ್ತಿ ಕಟ್ಟೆ ಏರಿತ್ತು.. ನಂತರ ಗಂಡ ಹಾಗೂ ಗ್ರಾಮಸ್ಥರ ಒಪ್ಪಿಗೆ ಪಡೆದು ಅವರಿಬ್ಬರಿಗೂ ಮದುವೆ ಮಾಡಲಾಗಿದೆ..