Politics

ರಾಜ್ಯಪಾಲರ ನೋಟಿಸ್‌ಗೆ ಹೆದರಲ್ಲ; ಸಿದ್ದರಾಮಯ್ಯ ಗುಡುಗು

ಮೈಸೂರು; ರಾಜ್ಯಪಾಲರ ಶೋಕಾಸ್‌ ನೋಟಿಸ್‌ಗೆ ನಾನು ಹೆದರೋದಿಲ್ಲ.. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ತಪ್ಪು ಮಾಡಿದ್ದರೆ ಹೆದರಬಹುದಿತ್ತು.. ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಪಾತ್ರ ಏನೂ ಇಲ್ಲದಿದ್ದರೂ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ರಾಜ್ಯಪಾಲರು ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಕೈಗೊಂಬೆಯಂತೆ ವರ್ತನೆ ಮಾಡುತ್ತಿದ್ದಾರೆ.. ನೋಟಿಸ್‌ಗೆ ನಾನು ಹೆದರೋದಿಲ್ಲ, ಅಶೋಕ್‌ದ ಹೆದರಿರಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಟೆ.ಜೆ.ಅಬ್ರಹಾಂ ಒಬ್ಬ ಬ್ಲ್ಯಾಕ್‌ಮೇಲರ್‌ ಆಗಿದ್ದು, ಆತ ಜುಲೈ 26ರ ಬೆಳಗ್ಗೆ 11.30ಕ್ಕೆ ದೂರು ಕೊಡುತ್ತಾನೆ. ರಾಜ್ಯಪಾಲರು ಅದರ ಪರಾಮರ್ಶೆಯೂ ಮಾಡದೆ ಅಂದು ಸಂಜೆಯೇ ಶೋಕಾಸ್‌ ನೋಟಿಸ್‌ ಜಾರಿ ಮಾಡುತ್ತಾರೆ.. ಜೊಲ್ಲೆ, ನಿರಾಣಿ, ರೆಡ್ಡಿ ವಿರುದ್ಧದ ದೂರುಗಳು ಹಾಗೆಯೇ ಇವೆ ಎಂದು ಆಕ್ರೋಶ ಹೊರಹಾಕಿದ್ದಾರೆ..
ಮುಡಾ ವಿಚಾರದಲ್ಲಿ ಏನೂ ಇಲ್ಲ ಪಾದಯಾತ್ರೆ ಬೇಡ ಎಂದು ಕುಮಾರಸ್ವಾಮಿ ಹೇಳಿದ್ದರು.. ಆದ್ರೆ ಬಿಜೆಪಿ ನಾಯಕರ ಬಲವಂತದಿಂದ ಇದನ್ನು ಮಾಡುತ್ತಿದ್ದಾರೆ.. ಸ್ವ ಇಚ್ಛೆಯಿಂದ ಅವರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Share Post