CrimeNational

ಭಾರತದಲ್ಲಿ ಟೆಲಿಗ್ರಾಮ್‌ ಆ್ಯಪ್ ನಿಷೇಧಕ್ಕೆ ಚಿಂತನೆ!

ನವದೆಹಲಿ(Newdelhi); ಭಾರತದಲ್ಲಿ ಟೆಲಿಗ್ರಾಮ್‌ ಮೊಬೈಲ್‌ ಆಪ್ಲಿಕೇಷನ್‌ ಅನ್ನು ಬ್ಯಾನ್‌ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದ್ದಂತೆ ಕಾಣುತ್ತಿದೆ.. ಜೂಜು, ವಂಚನೆ ಮತ್ತು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಟೆಲಿಗ್ರಾಮ್ ಬಗ್ಗೆ ತನಿಖೆ ಶುರು ಮಾಡಿದೆ.. ಒಂದು ವೇಳೆ ಈ ಅಪ್ಲಿಕೇಷನ್‌ ಮೂಲಕ ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದರೆ, ಭಾರತದಲ್ಲಿ ಇದನ್ನು ನಿಷೇಧ ಮಾಡುವ ಸಾಧ್ಯತೆ ದಟ್ಟವಾಗಿದೆ..

ಇದನ್ನೂ ಓದಿ; ವಿಪರೀತ ಖರ್ಚು ಮಾಡಿಸುತ್ತಿದ್ದ ಪತ್ನಿಯನ್ನು ಕೊಲೆ ಮಾಡಿದ ಪತಿ!

ಕೇಂದ್ರ ಸರ್ಕಾರದ ಗೃಹ ಇಲಾಖೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಟೆಲಿಗ್ರಾಮ್‌ ಅಪ್ಲಿಕೇಷನ್‌ ಅನ್ನು ತನಿಖೆ ಮಾಡುತ್ತಿದೆ.. ಸೆಕ್ಷನ್ 14ಸಿ ಅಡಿಯಲ್ಲಿ ಈ ತನಿಖೆ ನಡೆಯುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಟೆಲಿಗ್ರಾಂನಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾದ ಆರೋಪಗಳಿವೆ. ಪೋರ್ನ್ ವೀಡಿಯೋಗಳನ್ನು ಅಪ್ ಲೋಡ್ ಮಾಡಿ ಮನಬಂದಂತೆ ಶೇರ್ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಇದನ್ನೂ ಓದಿ; ಚೇಳು ಕಚ್ಚಿದರೂ ಭಯದಿಂದ ಹೇಳಲಿಲ್ಲ; ಸಾವನ್ನಪ್ಪಿದ ಬಾಲಕ!

ಷೇರುಪೇಟೆಯ ವಹಿವಾಟಿನ ಹೆಸರಿನಲ್ಲಿ ಕೂಡಾ ವಂಚನೆಗಳು ಹೆಚ್ಚಾಗಿ ಈ ಅಪ್ಲಿಕೇಷನ್‌ ಮೂಲಕ ನಡೆಯುತ್ತಿವೆ.
ಇನ್ನು ಟೆಲಿಗ್ರಾಮ್ ಅಪಾಯಕಾರಿ ಆಟಗಳು ಮತ್ತು ಜೂಜಿಗೆ ವೇದಿಕೆಯಾಗಿ ಮಾರ್ಪಟ್ಟಿದೆ. ಪೈರಸಿ ಸಿನಿಮಾಗಳನ್ನು ಹಂಚುವುದಕ್ಕೂ ಈ ಟೆಲಿಗ್ರಾಮ್ ವೇದಿಕೆಯಾಗಿದೆ. ಇನ್ನು ಮಾದಕವಸ್ತುಗಳ ಕಳ್ಳಸಾಗಣೆಗೂ ಇದು ಬಳಕೆಯಾಗುತ್ತಿದೆ.. ಹಿಂಸಾಚಾರವನ್ನು ಕೂಡಾ ಈ ಅಪ್ಲಿಕೇಷನ್‌ ಮೂಲಕ ಪ್ರಚೋದಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.. ಇದೇ ಕಾರಣಕ್ಕೇ ಫ್ರಾನ್ಸ್‌ ನಲ್ಲಿ ಈ ಟೆಲಿಗ್ರಾಮ್‌ ಅಪ್ಲಿಕೇಷನ್‌ ಮಾಲೀಕ ಪಾವೆಲ್ ಡುರಾವ್ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ; ಬರೀ 6 ಸಾವಿರಕ್ಕೆ ಹೆಣ್ಣು ಮಗುವನ್ನು ಮಾರಿದ ಮಹಾತಾಯಿ!

Share Post