CinemaPolitics

Jayapradha; ನಟಿ, ರಾಜಕಾರಣಿ ಜಯಪ್ರದಾ ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ; ಯಾಕೆ ಗೊತ್ತಾ..?

ಉತ್ತರ ಪ್ರದೇಶ; ನಟಿ ಜಯಪ್ರದಾ ಯಾವುದೇ ಕ್ಷಣದಲ್ಲಿ ಬಂಧನವಾಗಬಹುದು. 2019ರಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಜಯಪ್ರದಾಗೆ ಸಂಕಷ್ಟ ತಂದೊಡ್ಡಿದೆ. ಉತ್ತರ ಪ್ರದೇಶದ ರಾಂಪುರ್‌ ಕೋರ್ಟ್‌ ಜಯಪ್ರದಾ ಅವರಿಗೆ ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಅವರು ಬಂಧನವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ; Dr.C.N.Mnajunath; ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್‌?

7 ನೋಟಿಸ್‌ ಕೊಟ್ಟರೂ ಕೋರ್ಟ್‌ಗೆ ಬಾರದ ಜಯಪ್ರಧಾ;

7 ನೋಟಿಸ್‌ ಕೊಟ್ಟರೂ ಕೋರ್ಟ್‌ಗೆ ಬಾರದ ಜಯಪ್ರಧಾ; ರಾಂಪುರ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ಜಯಪ್ರಧಾ ಅವರು ಚುನಾವಣಾ ನೀತಿ  ಸಂಹಿತೆ ಉಲ್ಲಂಘನೆ ಮಾಡಿದ್ದರು. ಬಹಿರಂಗ ಸಭೆ ಸಮಯ ಮುಗಿದ ನಂತರವೂ ಅವರು ಬಹಿರಂಗ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ್ದರು.. ಈ ಸಂಬಂಧ ಅವರ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧ ಕೋರ್ಟ್‌ ಏಳು ಬಾರಿ ನೋಟಿಸ್‌ ಜಾರಿ ಮಾಡಿತ್ತು. ಎಷ್ಟು ಬಾರಿ ನೋಟಿಸ್‌ ಕೊಟ್ಟರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್‌, ಜಯಪ್ರಧಾ ಬಂಧನಕ್ಕೆ ಆದೇಶ ನೀಡಿದೆ.

ಇದನ್ನೂ ಓದಿ; MLA GopalaIah; ಮಾಜಿ ಸಚಿವ ಗೋಪಾಲಯ್ಯಗೆ ಜೀವಬೆದರಿಕೆ; ಬೆದರಿಕೆ ಹಾಕಿದ್ಯಾರು..?

 2019ರಲ್ಲಿ ನೀತಿ ಸಂಹಿತೆ ಉಲ್ಲಂಘನೆ;

2019ರಲ್ಲಿ ನೀತಿ ಸಂಹಿತೆ ಉಲ್ಲಂಘನೆ; ಬಹುಭಾಷಾ ನಟಿಯಾಗಿರುವ ಜಯಪ್ರದಾ ಅವರು ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದಾರೆ. ಅವರು ಮೊದಲಿಗೆ ಸಮಾಜವಾದಿ ಪಾರ್ಟಿಯಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಅನಂತರ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಚುನಾವಣಾ ಆಯೋಗ ದೂರು ದಾಖಲು ಮಾಡಿತ್ತು. ಆದ್ರೆ ಎಷ್ಟೇ ಬಾರಿ ನೋಟಿಸ್‌ ನೀಡಿದರೂ ಅವರು  ನಿರ್ಲಕ್ಷ್ಯ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರಂಟ್‌ ಹೊರಡಿಸಲಾಗಿದೆ.

ಇದನ್ನೂ ಓದಿ; Driverless Metro Train; ಬಂದೇ ಬಿಡ್ತು ಚಾಲಕ ರಹಿತ ಮೆಟ್ರೋ ರೈಲು; ಏನಿದರ ವಿಶೇಷತೆ..?

ಜಯಪ್ರದಾ ಬಂಧನಕ್ಕೆ ವಿಶೇಷ ತಂಡಕ್ಕೆ ಸೂಚನೆ;

ಜಯಪ್ರದಾ ಬಂಧನಕ್ಕೆ ವಿಶೇಷ ತಂಡಕ್ಕೆ ಸೂಚನೆ; ಎಷ್ಟು ಬಾರಿ ಸಮನ್ಸ್‌ ನೀಡಿದರೂ ಕೋರ್ಟ್‌ ಬಾರದ ಜಯಪ್ರದಾ ವಿರುದ್ಧ ನ್ಯಾಯಾಧೀಶರು ಆಕ್ರೋಶಗೊಂಡಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆಗೆ ಕರೆತರುವಂತೆ ಸೂಚನೆ ಕೊಟ್ಟಿದ್ದಾರೆ. ಜಯಪ್ರದಾ ಅವರ ಬಂದನಕ್ಕೆ ವಿಶೇಷ ತಂಡ ರಚನೆ ಮಾಡುವಂತೆಯೂ ನ್ಯಾಯಾಧೀಶರು ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.ಫೆಬ್ರವರಿ 27ರಂದು ರಾಂಪುರ್ ಕೋರ್ಟ್ ಮುಂದೆ ಹಾಜರುಪಡಿಸಲು ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ;

 

Share Post