ಬ್ಲ್ಯೂಫಿಲಂ ನೋಡಿ ಪಕ್ಕದಲ್ಲಿ ಮಲಗಿದ್ದ ತಂಗಿಯ ಮೇಲೇ ಅತ್ಯಾಚಾರ!
ಭೋಪಾಲ್; ರಾತ್ರಿ ವೇಳೆ ಬ್ಲ್ಯೂಫಿಲಂ ನೋಡಿದ ಬಾಲಕನೊಬ್ಬ ಪಕ್ಕದಲ್ಲೇ ಮಲಗಿದ್ದ ತನ್ನ ಅಪ್ರಾಪ್ತ ತಂಗಿಯ ಮೇಲೇ ಅತ್ಯಾಚಾರ ನಡೆಸಿರುವ ದಾರುಣ ಘಟನೆ ನಡೆದಿದೆ.. ಮಧ್ಯಪ್ರದೇಶದ ರಿವಾ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ ತಂದೆಗೆ ಹೇಳುತ್ತೇನೆ ಎಂದು ಬೆದರಿಸಿದ್ದು, ಇದರಿಂದ ಹೆದರಿದ ಬಾಲಕ, ತಂಗಿಯ ಉಸಿರುಗಟ್ಟಿಸಿ ಸಾಯಿಸಿಬಿಟ್ಟಿದ್ದಾನೆ..
ಇದನ್ನೂ ಓದಿ; ಚೀನಾದಲ್ಲಿ ಸ್ಟ್ರೀಟ್ ಗರ್ಲ್‌ಫ್ರೆಂಡ್ ಟ್ರೆಂಡ್!; HUGಗೆ 11 ರೂಪಾಯಿ, KISSಗೆ 110 ರೂಪಾಯಿ!
13 ವರ್ಷದ ಬಾಲಕನಿಗೆ ಒಂದು ವರ್ಷದ ಹಿಂದೆ ಮೊಬೈಲ್ ಕೊಡಿಸಲಾಗಿತ್ತು.. ಆತ ಅಂದಿನಿಂದ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದ ಎನ್ನಲಾಗಿದೆ.. ಅದನ್ನೇ ಚಟವಾಗಿ ಮಾಡಿಕೊಂಡಿದ್ದ ಆತ, ಜುಲೈ 24ರಂದು ಮಲಗಿರುವಾಗಲೂ ಅದನ್ನು ನೋಡಿದ್ದಾನೆ.. ಇದರಿಂದ ಉದ್ರೇಕಗೊಂಡ ಆತ, ಪಕ್ಕದಲ್ಲೇ ಮಲಗಿದ್ದ 9 ವರ್ಷದ ತಂಗಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.. ಆಕೆ ತಂದೆಗೆ ಹೇಳುತ್ತೇನೆ ಎಂದಿದ್ದಕ್ಕೆ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ.. ಬೆಳಗ್ಗೆ ವಿಷಯ ಮನೆಯ ಹಿರಿಯರಿಗೆ ಗೊತ್ತಾಗಿದೆ..
ಇದನ್ನೂ ಓದಿ; ಭೂಕುಸಿತಗಳು ಏಕೆ ಸಂಭವಿಸುತ್ತವೆ..?; ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ..?
ಆರೋಪಿ ಬಾಲಕನಿಗೆ ಶಿಕ್ಷೆ ನೀಡಬೇಕಿದ್ದ ಪೋಷಕರು ನಂತರ ಆತನನ್ನು ರಕ್ಷಣೆ ಮಾಡೋದಕ್ಕೆ ಮುಂದಾಗಿದ್ದಾರೆ.. ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ.. ಆದ್ರೆ ಪೊಲೀಸರು ಅನುಮಾನದಿಂದ ತನಿಖೆ ನಡೆಸಿದಾಗಿ ಆರೋಪಿ ನಿಜ ಬಾಯ್ಬಿಟ್ಟಿದ್ದಾನೆ..
ತಾಯಿ ಬಂದು ನೋಡಿದಾಗ ಮಗಳ ಉಸಿರಾಟದ ಚಲನೆ ಇತ್ತು. ಮಗಳ ಜೀವ ಉಳಿಸುವ ಬದಲು ತಾಯಿ ಮಗನ ಜೊತೆ ಸೇರಿ ಮತ್ತಷ್ಟು ಜೋರಾಗಿ ಕತ್ತು ಹಿಸುಕಿ ಬಾಲಕಿಯ ಉಸಿರು ನಿಲ್ಲಿಸಿದ್ದಾರೆ. ಈ ವಿಷಯವನ್ನು ಮರೆಮಾಚಲು ತಾಯಿ ಪೊಲೀಸರ ಮುಂದೆ ವಿಷಕಾರಿ ಹುಳು ಕಚ್ಚಿದ್ರಿಂದ ಮಗಳ ಸಾವು ಆಗಿದೆ ಎಂದು ಹೇಳಿದ್ದಾಳೆ. ಮೃತ ಬಾಲಕಿಯ ಸೋದರಯರು ಸಹ ಇದೇ ಹೇಳಿಕೆಯನ್ನು ನೀಡಿದ್ದರು.