National

ಭೂಕುಸಿತಗಳು ಏಕೆ ಸಂಭವಿಸುತ್ತವೆ..?; ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ..?

ಕೇರಳದ ವಯನಾಡಿನಲ್ಲಿ ಭೂಕುಸಿತ ಉಂಟಾಗಿ ದೊಡ್ಡ ದುರಂತ ನಡೆದಿದೆ.. ಇದ್ರಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.. ಸಾವಿರಾರು ಜನ ಮನೆ ಮಠ ಕಳೆದುಕೊಂಡಿದ್ದಾರೆ.. ಹಲವಾರು ಮಂದಿ ಮನೆಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ.. ಕೆಲವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.. ಇಂತಹ ಪ್ರಕೃತಿ ವಿಕೋಪ ನಡೆದ್ದದ್ದು ಇದು ಮೊದಲೂ ಅಲ್ಲ, ಕೊನೆಯೂ ಅಲ್ಲ.. ಪ್ರತಿ ವರ್ಷ ಇಂತಹ ಘಟನೆಗಳು ನಡೀತಾನೇ ಇರುತ್ತೆ.. ಭಾರತದಲ್ಲಷ್ಟೇ ಅಲ್ಲ, ಪ್ರಪಂಚದ ಹಲವು ದೇಶಗಳಲ್ಲಿ ಇಂತ ಪ್ರಕೃತಿ ವಿಕೋಪಗಳು ನಡೆಯುತ್ತಲೇ ಇರುತ್ತವೆ.. ಕೆಲವು ದಿನಗಳ ಹಿಂದೆ, ಆಫ್ರಿಕಾದ ಇಥಿಯೋಪಿಯಾದಲ್ಲಿ ಉಂಟಾದ ಭೂಕುಸಿತದಲ್ಲಿ 260ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ಇದನ್ನೂ ಓದಿ; ಹಳೆ ಲವರ್ ಗಾಗಿ ಗಂಡನ ಕೊಲೆ ಮಾಡಿಸಿದ ಯುವತಿ

ಹಾಗಾದ್ರೆ ಯಾಕೆ ಈ ಪ್ರಕೃತಿ ವಿಕೋಪಗಳು ನಡೆಯುತ್ತವೆ..? ಭೂಕುಸಿತ ಅಂದ್ರೆ ಏನು..? ಅದು ಎಷ್ಟು ವಿಧದಲ್ಲಿ ಆಗುತ್ತೆ..? ಭೂಮಿ ಯಾಕೆ ಕುಸಿಯುತ್ತೆ..? ಕುಸಿಯೋ ಮುನ್ನ ಪ್ರಕೃತಿ ನೀಡೋ ಮುನ್ಸೂಚನೆ ಹೇಗಿರುತ್ತೆ..? ಭೂಕುಸಿತದಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದು ಹೇಗೆ..? ಈ ಬಗ್ಗೆ ನಾನು ಚರ್ಚೆ ಮಾಡೋಣ..
ಭೂಕುಸಿತ ಅಂದ್ರೇ ಬೇರೇನೂ ಅಲ್ಲ, ಬೆಟ್ಟಗಳಂತಹ ನೈಸರ್ಗಿಕ ಭೂಪ್ರದೇಶಗಳಿಂದ ಬಂಡೆಗಳು ಮತ್ತು ಮಣ್ಣು ಕೆಳಗೆ ಜಾರುವುದು.. ಇದು ಸಾಮಾನ್ಯವಾಗಿ ಕಡಿದಾದ ಪ್ರದೇಶಗಳಲ್ಲಿ ಮಳೆ ಹೆಚ್ಚಾದಾಗ ಸಂಭವಿಸುತ್ತದೆ.. ವಿಪರೀತವಾದ ಮಳೆ, ಹಿಮ ಕರಗುವುದು, ನೀರಿನ ಮಟ್ಟದಲ್ಲಿನ ದಿಢೀರ್‌ ಏರಿಕೆಯಾಗುವುದು, ತೊರೆಗಳ ಸವೆತವಾಗುವುದು, ಭೂಕಂಪಗಳು, ಜ್ವಾಲಾಮುಖಿಗಳು ಮತ್ತು ಮಾನವನ ಪ್ರಕೃತಿ ಮೇಲಿನ ಪ್ರಹಾರ, ಇವೆಲ್ಲವೂ ಕೂಡಾ ಭೂಕುಸಿತಕ್ಕೆ ಕಾರಣ ಅಂತ ಸಮೀಕ್ಷೆಗಳು ಹೇಳುತ್ತವೆ..

ಇದನ್ನೂ ಓದಿ; ಗಂಡ-ಮಕ್ಕಳನ್ನು ಬಿಟ್ಟು ಮಾವನೊಂದಿಗೆ ಓಡಿ ಹೋದ ಮಹಿಳೆ..!

ಕಡಿದಾದ ಬೆಟ್ಟಗಳು, ಕಣಿವೆಗಳ ಕೆಳಗಿನ ಪ್ರದೇಶಗಳು, ಅರಣ್ಯನಾಶವಾಗಿರುವ ಪ್ರದೇಶಗಳು, ಮಾನವನಿಂದ ಅಭಿವೃದ್ಧಿ ಚಟುವಟಿಕೆಗಳು ಹೆಚ್ಚಿರುವ ಪ್ರದೇಶಗಳು ಬಹುಕಾಲದಿಂದ ನೀರಿನಲ್ಲಿ ಮುಳುಗಿರುವ ಪ್ರದೇಶಗಳಲ್ಲಿ ಈ ಭೂಕುಸಿತ ಉಂಟಾಗುತ್ತದೆ.. ಭೂಕುಸಿತ ಐದು ರೀತಿಯಲ್ಲಿ ಉಂಟಾಗುತ್ತದೆ.. ಕಡಿದಾದ ಬೆಟ್ಟದ ಇಳಿಜಾರು ಪ್ರದೇಶದಿಂದ ಕಲ್ಲುಗಳು ಮತ್ತು ಮಣ್ಣು ಹಠಾತ್‌ ಆಗಿ ಕೆಳಗೆ ಬೀಳುತ್ತದೆ.. ಇನ್ನು ಕೆಲವೊಮ್ಮೆ ಇದ್ದಲ್ಲಿಯೇ ಭೂಮಿ ಒಳಗಡೆಗೆ ಕುಸಿಯುತ್ತದೆ.. ಇನ್ನು ಕೆಲವೊಮ್ಮೆ ಬೆಟ್ಟ ಪ್ರದೇಶದಿಂದ ಮಣ್ಣು ಹಾಗೂ ಬಂಡೆಗಳು ಉರುಳಿಕೊಂಡು ಬರುತ್ತವೆ.. ಕೆಲವೊಮ್ಮೆ ಭೂಮಿಯೊಳಗಿನ ಕಂಪನಗಳಿಂದ ಮಣ್ಣು ಸಡಿಲವಾಗಿ ಎಲ್ಲಡೆ ಹರಡಿಕೊಳ್ಳುತ್ತದೆ.. ಇನ್ನು ಮಣ್ಣು ಸಡಿಲವಾಗಿ ಅದು ಚಲಿಸುವ ಮೂಲಕವೂ ಮಾನವನಿಗೆ ಸಂಕಷ್ಟ ತಂದೊಡ್ಡುತ್ತದೆ..

ಇದನ್ನೂ ಓದಿ; ನಿಮ್ಮ ಗ್ರಹಿಕೆಗೊಂದು ಚಾಲೆಂಜ್‌; ಈ ಚಿತ್ರದಲ್ಲಿ ಎರಡು ಕುದುರೆ ಇದೆ, ಗುರುತಿಸಿ..

ವಿಶ್ವ ಆರೋಗ್ಯ ಸಂಸ್ಥೆಯ ದಾಖಲೆಗಳ ಪ್ರಕಾರ, 1998 ಮತ್ತು 2017 ರ ನಡುವೆ ಭೂಕುಸಿತದಿಂದ 18,000 ಜನರು ಸಾವನ್ನಪ್ಪಿದ್ದಾರೆ. ಈ ಭೂಕುಸಿತಗಳಿಂದ 48 ಲಕ್ಷ ಜನರು ಬಾಧಿತರಾಗಿದ್ದಾರೆ. ಹಾಗಾದರೆ ಭೂಕುಸಿತದ ಮುನ್ಸೂಚನೆ ಹೇಗೆ ಸಿಗುತ್ತದೆ..? ನಾವು ಏನು ಮಾಡಬೇಕು ಎಂಬುದನ್ನು ತಿಳಿದುಕೊಳೋಣ.. ಮರಗಳು, ಕಲ್ಲುಗಳು ಬೀಳುವ ಸದ್ದು ಕೇಳಿಸಿದರೆ ಎಚ್ಚರವಾಗಿರಬೇಕು. ಎತ್ತರದ ಪ್ರದೇಶಗಳಿಗೆ ತೆರಳುವ ಮೂಲಕ ಜನರು ತಮ್ಮ ಜೀವವನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ..
ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಟ್ಟರೆ ಒಳ್ಳೆಯದು. ಅವಶೇಷಗಳಲ್ಲಿ ಸಿಲುಕಿಕೊಂಡರೆ, ನೀವು ಚಲಿಸಬೇಕು ಮತ್ತು ಶಬ್ದ ಮಾಡಬೇಕು.

ಇದನ್ನೂ ಓದಿ; 20 ಸೆಕೆಂಡ್‌ HUG ಮಾಡಿದರೆ ಹಲವಾರು ಆರೋಗ್ಯ ಪ್ರಯೋಜನಗಳು!

 

Share Post