CrimeNational

ಬ್ಲ್ಯೂಫಿಲಂ ಮರುಸೃಷ್ಟಿ ಮಾಡಲು 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ!

ನಂದ್ಯಾಲ; ಬ್ಲ್ಯೂಫಿಲಂ ನೋಡಿದ್ದ ಅಪ್ರಾಪ್ತ ಬಾಲಕರು ಅದನ್ನು ಮರುಸೃಷ್ಟಿ ಮಾಡುವುದಕ್ಕಾಗಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ.. ಮೂವರು ಬಾಲಕರಿಂದ ಈ ಕೃತ್ಯ ಎಸಗಲಾಗಿದ್ದು, ಬಾಲಕಿ ಅದನ್ನು ಪೋಷಕರಿಗೆ ಹೇಳುತ್ತಾಳೆ ಎಂಬ ಭಯದಿಂದ ಆಕೆಯನ್ನು ಕೊಲೆ ಮಾಡಿ ಸಮೀಪದ ಕಾಲುವೆಗೆ ಎಸೆದಿದ್ದರು.. ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರ ಎಸಗಿದವರಲ್ಲಿ ಒಬ್ಬ ಬಾಲಕನಿಗೆ 12 ವರ್ಷವಾದರೆ, ಮತ್ತೊಬ್ಬನಿಗೆ 13 ವರ್ಷ ಎಂದು ತಿಳಿದುಬಂದಿದೆ.. ಅತ್ಯಾಚಾರಕ್ಕೊಳಗಾದ ಬಾಲಕಿ 3ನೇ ತರಗತಿ ಓದುತ್ತಿದ್ದಳು ಎಂದು ತಿಳಿದುಬಂದಿದೆ.

ಇದನ್ನೂ ಓದಿ; ಹಳೆ ಲವರ್ ಗಾಗಿ ಗಂಡನ ಕೊಲೆ ಮಾಡಿಸಿದ ಯುವತಿ

ಬಾಲಕರು ಹುಡುಗಾಟಕ್ಕೆ ಈ ಕೆಲಸ ಮಾಡಿದ್ದರು.. ಇದರಲ್ಲಿ ಒಬ್ಬ ಹುಡುಗ ತಡೆಯಲಾಗದೆ ತನ್ನ ಪೋಷಕರಿಗೆ ಈ ಮಾಹಿತಿಯನ್ನು ನೀಡಿದ್ದ.. ಇದರಿಂದ ಭೀತಿಗೊಂಡ ಪೋಷಕರು, ಸಂಬಂಧಿಯೊಬ್ಬರ ಸಹಾಯದಿಂದ ಬಾಲಕಿಯ ಮೃತದೇಹವನ್ನು ಕಾಲುವೆಯಿಂದ ಹೊರತೆಗೆದಿದ್ದಾರೆ.. ಅನಂತರ ಅದಕ್ಕೆ ಕಲ್ಲೊಂದನ್ನು ಕಟ್ಟಿ ಕೃಷ್ಣಾ ನದಿಗೆ ಎಸೆದುಬಂದಿದ್ದರು..

ಇದನ್ನೂ ಓದಿ; ಮೂತ್ರ ಕುಡಿಸಿ, ಭೀಕರವಾಗಿ ಥಳಿಸಿ ಪ್ರಿಯಕರನ ಕೊಲೆ ಮಾಡಿದ ಯುವತಿ!

ಬಾಲಕಿಗೆ ತಿಂಡಿಕೊಡಿಸುವುದಾಗಿ ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.. ಎರಡು ವಾರದ ಹಿಂದೆ ಆಂದ್ರಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಮುಚ್ಚಿ ಹಾಕಲೂ ಯತ್ನಿಸಿ ಬಾಲಕನ ಪೋಷಕರನ್ನು ಬಂಧಿಸಲಾಗಿದೆ..

Share Post