CrimeDistricts

ಬೇರೆ ಮಹಿಳೆಯರೊಂದಿಗೆ ಸಂಬಂಧ; ಪ್ರಶ್ನಿಸಿದ ಪತ್ನಿ, ಮಕ್ಕಳನ್ನು ಹೊರಹಾಕಿದ ಗಂಡ!

ತುಮಕೂರು; ಬೇರೆ ಮಹಿಳೆಯರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೇ ಅಲ್ಲದೇ, ಮಹಿಳೆಯೊಬ್ಬರನ್ನು ಎರಡನೇ ಮದುವೆಯಾಗಿರುವುದನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿ, ಮಕ್ಕಳನ್ನು ವ್ಯಕ್ತಿಯೊಬ್ಬ ಮನೆಯಿಂದ ಹೊರದೂಡಿದ್ದಾನೆ.  ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಈ ದುರ್ಘಟನೆ ನಡೆದಿದೆ.

ರಾಮನಗರ ಮೂಲದ ಮುಸ್ಕಾನ್‌ ಖಾನ್‌ ಎಂಬ ಮಹಿಳೆಯೇ ಗಂಡನಿಂದ ಮೋಸಕ್ಕೊಳಗಾದ ಮಹಿಳೆ. ಈಕೆ ಈಗ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ. 2018ರ ಡಿಸೆಂಬರ್‌ನಲ್ಲಿ ಬೆಂಗಳೂರು ಪ್ಯಾಲೇಗ್‌ ಗ್ರೌಂಡ್ಸ್‌ನಲ್ಲಿ ತುರುವೇಕೆರೆ ಮೂಲದ ಜೀಲಾನ್‌ ಬೇಗ್‌ ಎಂಬಾತನ ಜೊತೆ ಮುಸ್ಕಾನ್‌ ಖಾನ್‌ಳನ್ನು ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಜೊತೆಗೆ ವರದಕ್ಷಿಣೆಯಾಗಿ ಒಂದೂವರೆ ಕೆಜಿಯಷ್ಟು ಚಿನ್ನವನ್ನು ಕೂಡಾ ನೀಡಲಾಗಿತ್ತಂತೆ. ಆದ್ರೂ ಕೂಡಾ ಜೀಲಾನ್‌ಗೆ ಹಲವು ಮಹಿಳೆಯರ ಜೊತೆ ಸಂಬಂಧ ಇದೆ ಅನ್ನೋದು ಮದುವೆಯಾದ ಮೇಲೆ ಮುಸ್ಕಾನ್‌ಗೆ ಗೊತ್ತಾಗಿದೆ.

ಜೀಲಾನ್‌ ಮೊಬೈಲ್‌ ಪರಿಶೀಲನೆ ಮಾಡಿದಾಗ ಬೇರೊಂದು ಮಹಿಳೆ ಜೊತೆ ಇರುವ ವಿಡಿಯೋ ಕಾಣಿಸಿದೆ. ಈ ಬಗ್ಗೆ ಗಂಡನಿಗೆ ಬುದ್ಧಿವಾದ ಹೇಳಿದರೂ ಕೇಳಿಲ್ಲ. ಗಂಡನ ಮೊಬೈಲ್‌ನಲ್ಲಿ ಮಹಿಳೆಯರ ನಂಬರ್‌ಗಳು ಹೆಚ್ಚಾಗಿದ್ದವಂತೆ. ಅಷ್ಟೇ ಅಲ್ಲದೇ ಮಧುಗಿರಿ ಮೂಲದ ಮುಸ್ಕಾನ್‌ ಎಂಬಾಕೆಯನ್ನು ಜೀಲಾನಿ ಮತ್ತೊಂದು ಮದುವೆ ಕೂಡಾ ಆಗಿದ್ದಾನಂತೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿದೇ, ಜೀವನಾಂಶ ಕೂಡಾ ನೀಡದೇ ಎರಡನೇ ಮದುವೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಮೊದಲ ಪತ್ನಿ ಮುಸ್ಕಾನ್‌ ಖಾನ್‌ಗೆ ಇಬ್ಬರು ಮಕ್ಕಳಿದ್ದು, ಗಂಡ ಜೀಲಾನಿ ಹೆಂಡತಿ, ಮಕ್ಕಳು ಇಬ್ಬರನ್ನೂ ಮನೆಯಿಂದ ಹೊರಗೆ ಹಾಕಿದ್ದಾನಂತೆ. ಹೀಗಾಗಿ ಮುಸ್ಕಾನ್‌ ಖಾನ್‌ ನ್ಯಾಯ ಕೋರಿ ಪೊಲೀಸ್‌ ಠಾಣೆ ಮೆಟ್ಟಿಳೇರಿದ್ದಾಳೆ. ಆರೋಪಿ ಜೀಲಾನ್‌ ತುರುವೇಕೆರೆಯಲ್ಲಿ ಜೆಕೆ ಗ್ಯಾಸ್‌ ಏಜೆನ್ಸಿ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.

 

Share Post