ಹಳೆ ಲವರ್ ಗಾಗಿ ಗಂಡನ ಕೊಲೆ ಮಾಡಿಸಿದ ಯುವತಿ
ತುಮಕೂರು; ಹಳೆ ಲವರ್ ಗಾಗಿ ಕಟ್ಟಿಕೊಂಡ ಗಂಡನನ್ನೇ ಪತ್ನಿ ಕೊಲೆ ಮಾಡಿಸಿರುವ ಘಟನೆ ಕೊರಟಗೆರೆ ತಾಲೂಕು ಮಲ್ಲೇಕಾಪು ಗ್ರಾಮದಲ್ಲಿ ನಡೆದಿದೆ.. ಪ್ರಕಾಶ್ ಎಂಬ ಯುವಕನೇ ಕೊಲೆಯಾದವನು.
ಈತ ಕಲಬುರಗಿ ಜಿಲ್ಲೆ ಚಿಂಚೋಳಿಯವನು. ಇನ್ಸ್ಟಾಗ್ರಾಮ್ ನಲ್ಲಿ ಮಲ್ಲೇಕಾಪು ಗ್ರಾಮದ ಹರ್ಷಿತಗೆ ಪರಿಚಯವಾಗಿ ಲವ್ ಆಗುತ್ತದೆ.. ನಂತರ ಇಬ್ಬರು ಮದುವೆಯಾಗಿದ್ದು, ಪ್ರಕಾಶ್ ಹೆಂಡತಿ ಮನೆಯಲ್ಲೇ ಇರುತ್ತಾನೆ. ಇವರಿಗೆ ಒಂದು ಮಗು ಕೂಡಾ ಇದೆ.
ಇತ್ತ ಹರ್ಷಿತಗೆ ಈ ಹಿಂದೆ ಗುಂಡ ಎಂಬಾತನ ಜೊತೆ ಲವ್ ಆಗಿತ್ತು. ಆದ್ರೆ ಬ್ರೇಕ್ ಅಪ್ ಆಗಿತ್ತು.. ಆದ್ರೆ ಇತ್ತೀಚಿಗೆ ಆತ ಮತ್ತೆ ಇನ್ಸ್ಟಾಗ್ರಾಮ್ ನಲ್ಲಿ ಹರ್ಷಿತಗೆ ಸಿಕ್ಕಿದ್ದ.. ಆಗ ಮತ್ತೆ ಇಬ್ಬರ ನಡುವೆ ಲವ್ ಆಗಿ ಓಡಿಹೋಗಿದ್ದರು.. ಹೀಗಾಗಿ ಗಂಡ ಪ್ರಕಾಶ್ ಪೊಲೀಸರಿಗೆ ದೂರು ಕೊಟ್ಟಿದ್ದ.. ನಂತರ ಮನೆಗೆ ವಾಪಾಸ್ ಬಂದಿದ್ದ ಹರ್ಷಿತ ಗುಂಡ ಹಾಗೂ ತನ್ನ ಸಹೋದರನಿಗೆ ಹೇಳು ಗಂಡನನ್ನು ಕೊಲೆ ಮಾಡಿಸಿದ್ದಾಳೆ. ಈಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.