CrimeNational

ಮೂತ್ರ ಕುಡಿಸಿ, ಭೀಕರವಾಗಿ ಥಳಿಸಿ ಪ್ರಿಯಕರನ ಕೊಲೆ ಮಾಡಿದ ಯುವತಿ!

ಜೈಪುರ; ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಮನೆಯವರೊಂದಿಗೆ ಸೇರಿ ಪ್ರಿಯತಮೆಯೇ ಆತನನ್ನು ಬಡಿದು ಕೊಂದಿದ್ದಾಳೆ.. ಸಾಲದೆಂಬಂತೆ ಬಲವಂತದಿಂದ ಆತನಿಗೆ ಮೂತ್ರ ಕೂಡಾ ಕುಡಿಸಲಾಗಿದೆ.. ಬಾಲಮೇರ್ ಜಿಲ್ಲೆಯ ಬಾಲತೋರ ಕ್ಷೇತ್ರದ ಕೋಶಲು ಎಂಬಲ್ಲಿ ಈ ಘಟನೆ ನಡೆದಿದೆ.. ಪ್ರಿಯತಮೆ ಹಾಗೂ ಆಕೆಯ ಮನೆಯವರೆಲ್ಲಾ ಸೇರಿಕೊಂಡು ಪ್ರಿಯತಮಗೆ ಮೂತ್ರ ಕುಡಿಸಿದ್ದು ನಂತರ ಕೋಲು, ದೊಣ್ಣೆಗಳೊಂದಿಗೆ ದಾಳಿ ನಡೆಸಿದ್ದಾರೆ.. ಇದ್ರಿಂದ ತೀವ್ರ ಅಸ್ವಸ್ಥನಾಗಿದ್ದ ಆತನನ್ನು ಅವರೇ ಆಸ್ಪತ್ರೆಗೆ ಸೇರಿಸಿದ್ದರು.. ಆದ್ರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ.. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲೇ ಶವ ಬಿಟ್ಟು ಅವರು ಪರಾರಿಯಾಗಿದ್ದಾರೆ..

ಇದನ್ನೂ ಓದಿ; ಟೆಕ್ಕಿ ಯುವತಿ ಮೇಲೆ ದೇವಸ್ಥಾನವೊಂದರ ಪೂಜಾರಿಯಿಂದ ಅತ್ಯಾಚಾರ!

ಯುವಕನ ಗೆಳತಿ ಜೆಠಿ ಎಂದು ತಿಳಿದುಬಂದಿದೆ.. ಈಕೆಯೊಂದಿಗೆ ಮಗರಾಮ ಎಂಬಾತ ಪ್ರೀತಿಯಲ್ಲಿದ್ದ.. ಈಬರಬ ನಡುವೆ ಅಕ್ರಮ ಸಂಬಂಧವೂ ಇತ್ತು.. ಆದ್ರೆ ಅದೇನಾಗಿತ್ತೋ ಏನೋ.. ಪ್ರಿಯತಮೆ ನೇರವಾಗಿ ಆತನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ.. ಮನೆಯ ಬಾಗಿಲು ಹಾಕಿ ಆತನಿಗೆ ಚಿತ್ರಹಿಂಸೆ ನೀಡಿ ಸಾಯಿಸಿದ್ದಾರೆ..
ಈ ಸಂಬಂಧ ಸಂತ್ರಸ್ತನ ಪ್ರಿಯತಮೆ ಜೆಠಿ, ಚುನ್ನಿದೇವಿ, ಚೌಥಾರಾಮ್, ತಾಜಾಯರಾಮ್, ಖೋರಾಜರಾಮ್ ಮತ್ತು ಮನಾರಾಮ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ಕೊಲೆಗೆ ನಿಖರ ಕಾರಣ ಇನ್ನೂ ಬಾಯಿಬಿಟ್ಟಿಲ್ಲ..

ಇದನ್ನೂ ಓದಿ; ಚೀನಾದಲ್ಲಿ ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಟ್ರೆಂಡ್‌!; HUGಗೆ 11 ರೂಪಾಯಿ, KISSಗೆ 110 ರೂಪಾಯಿ!

Share Post