CrimeDistricts

ತಂದೆಯಿಂದಲೇ ಅತ್ಯಾಚಾರ!; 14 ವರ್ಷದ ಬಾಲಕಿ ಗರ್ಭವತಿ!

ತುಮಕೂರು(Tumkur); ಇಲ್ಲೊಬ್ಬ ದುರುಳ ಅಪ್ಪ ಹೆತ್ತ ಮಗಳ ಮೇಲೇ ನಿರಂತರ ಅತ್ಯಾಚಾರ ಎಸಗಿದ್ದು, ಆಕೆಯನ್ನು ಗರ್ಭವತಿ ಮಾಡಿದ್ದಾನೆ.. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೊಂದು ದುಷ್ಕೃತ್ಯ ನಡೆದಿದೆ..

ಇದನ್ನೂ ಓದಿ; ವೇಶ್ಯೆ ಬಳಿ ಹೋಗಿ ಸಿಕ್ಕಿಬಿದ್ದ ನಿಶ್ಚಿತಾರ್ಥವಾಗಿದ್ದ ಟೆಕ್ಕಿ; ಮದುವೆ ಕ್ಯಾನ್ಸಲ್‌!

ಹೊರ ರಾಜ್ಯದಿಂದ ಕೂಲಿ ಕೆಲಸಕ್ಕೆಂದು ಕುಟುಂಬವೊಂದು ಇಲ್ಲಿಗೆ ಬಂದಿತ್ತು.. ಆ ಮನೆಯ ಮಗಳು 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಆಕೆಯ ತಂದೆಯೇ ನಿರಂತರ ಅತ್ಯಾಚಾರ ಎಸಗಿದ್ದಾನೆ.. ಬಾಲಕಿಯ ಆರೋಗ್ಯದಲ್ಲಿ ಇತ್ತೀಚೆಗೆ ಏರುಪೇರಾಗಿತ್ತು.. ಈ ಹಿನ್ನೆಲೆಯಲ್ಲಿ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಪರೀಕ್ಷೆ ಮಾಡಿಸಲಾಗಿತ್ತು.. ಈ ವೇಳೆ ಆಕೆ ಗರ್ಭವತಿಯಾಗಿರುವುದು ಗೊತ್ತಾಗಿದೆ.. ಈ ಬಗ್ಗೆ ಆಕೆಯನ್ನು ವಿಚಾರಣೆ ಮಾಡಿದಾಗ, ತಂದೆಯೇ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿರುವುದಾಗಿ ಹೇಳಿಕೊಂಡಿದ್ದಾಳೆ..
ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ..

ಇದನ್ನೂ ಓದಿ; ಕೆಲಸ ಕೊಡಿಸುವ ಆಮಿಷ ತೋರಿಸಿ ಲೈಂಗಿಕ ಕಿರುಕುಳ ಕೊಟ್ಟ ರೈಲ್ವೆ ಕ್ಲರ್ಕ್!

Share Post