CrimeNational

ನ್ಯಾಯ ಕೇಳಲು ಬಂದ ಮಹಿಳೆಗೆ ಸಬ್‌ಇನ್ಸ್‌ಪೆಕ್ಟರ್‌ ಲೈಂಗಿಕ ಕಿರುಕುಳ!

ನ್ಯಾಯ ಕೊಡಿಸುವಂತೆ ಪೊಲೀಸರ ಬಳಿ ಗೋಳು ತೋಡಿಕೊಳ್ಳಲು ಬಂದಿದ್ದ ಮಹಿಳೆಗೆ ಸಬ್‌ ಇನ್ಸ್‌ಪೆಕ್ಟರ್‌ ಒಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.. ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯ ಶಾಲಿಗೌರಾರಂ ಪೊಲೀಸ್‌ ಠಾಣೆಯಲ್ಲಿ ಈ ಘಟನೆ ನಡೆದಿದೆ.. ಜಮೀನು ವಿವಾದದ ಸಂಬಂಧ ಮಹಿಳೆಯೊಬ್ಬರು ನ್ಯಾಯ ಕೊಡಿಸುವಂತೆ ಕೇಳಿ ಪೊಲೀಸ್‌ ಠಾಣೆಗೆ ಬಂದಿದ್ದರು.. ಈ ವೇಳೆ ಠಾಣೆ ಎಸ್‌ಐ, ತನ್ನ ಆಸೆ ಈಡೇರಿಸುವಂತೆ ಹಾಗೂ ಅನೈತಿಕ ಸಂಬಂಧ ಹೊಂದುವಂತೆ ನಿರಂತರ ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.. ಇದರಿಂದ ರೋಸಿಹೋದ ಮಹಿಳೆ ಎಸ್ಪಿಗೆ ದೂರು ನೀಡಿದ್ದಾರೆ.. ಘಟನೆಯ ಕುರಿತು ತನಿಖೆಗೆ ಎಸ್ಪಿ ಶರತ್ ಚಂದ್ರ ಪವರ್ ಆದೇಶಿಸಿದ್ದಾರೆ. ಸದ್ಯ ಈ ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

ಶಾಲಿಗೌರಾರಾಮ್ ಮಂಡಲ್‌ನ ವಂಗಮರ್ತಿ ಗ್ರಾಮಕ್ಕೆ ಸೇರಿದ ಮಹಿಳೆಯೊಬ್ಬರು ಜಮೀನು ವಿವಾದದ ಕಾರಣ ಕೆಲವು ದಿನಗಳ ಹಿಂದೆ ಶಾಲಿಗೌರಾರಾಮ್ ಪೊಲೀಸ್ ಠಾಣೆಗೆ ಹೋಗಿದ್ದರು. ಜಮೀನು ವಿವಾದದಲ್ಲಿ ತನಗೆ ನ್ಯಾಯ ಕೊಡಿಸುವಂತೆ ಎಸ್ಸೈಗೆ ಮೊರೆ ಇಟ್ಟಿದ್ದರು. ಆದರೆ, ಪ್ರಕರಣ ದಾಖಲಾಗದ ಕಾರಣ ಶಾಲಿಗಾರರಾಮ್ ಎಸ್ ಐ ಪ್ರವೀಣ್ ಕುಮಾರ್ ಅವರನ್ನು ಮತ್ತೊಮ್ಮೆ ಭೇಟಿ ಮಾಡಿದ್ದಾರೆ. ಈ ವೇಳೆ ತನ್ನ ಕ್ಯಾಬಿನ್‌ನಲ್ಲಿ ಎರಡು ಗಂಟೆಗಳ ಕಾಲ ತನ್ನೊಂದಿಗೆ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

ಏಪ್ರಿಲ್ 16 ರಂದು ಮತ್ತೊಮ್ಮೆ ದೂರು ನೀಡುವಂತೆ ಅವರು ಹೇಳಿದರು. ನಂತರ ತನ್ನ ಮಾತಿಗೆ ಒಪ್ಪಿದರೆ ಪ್ರಕರಣವನ್ನು ಬಗೆಹರಿಸುವುದಾಗಿ ಎಸ್‌ಐ ಹೇಳಿದ್ದಾಗಿ ಸಂತ್ರಸ್ತೆ ಹೇಳುತ್ತಾಳೆ. ಪೊಲೀಸ್ ಠಾಣೆಯಲ್ಲಿ ಗ್ರೀನ್ ಟೀ ಕುಡಿಯುವಂತೆ ಒತ್ತಾಯಿಸಿದ್ದಾನೆ ಎಂದು ಆಕೆ ಹೇಳಿದ್ದಾಳೆ. ಕರೆದಾಗ ಬಾ ಎಂದೂ ಹೇಳಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ..

 

Share Post