Skip to content
Saturday, May 17, 2025
Latest:
  • ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ ಮಹಿಳೆ!
  • ಕೆಲಸದ ಒತ್ತಡ; ಸಾಫ್ಟ್ವೇರ್ ಇಂಜಿನಿಯರ್ ಆತ್ಮಹತ್ಯೆ!
  • ಇರಾನ್‌ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ!
  • KSRTC ಬಸ್‌ನಲ್ಲಿ ಚಪ್ಪಲಿಯಲ್ಲಿ ಬಡಿದಾಡಿಕೊಂಡ ಮಹಿಳೆಯರು!
  • ನೀರು ಹೆಚ್ಚು ಸೇವಿಸಿದರೆ ರಕ್ತದೊತ್ತಡ ನಿವಾರಿಸಬಹುದೇ..?
Latest News in Kannada | Kannada News Channel | ಕನ್ನಡ ಸುದ್ದಿ | NewsX Kannada |

  • Bengaluru
  • Districts
  • Politics
  • Crime
  • National
  • International
  • Cinema
  • Health
  • Sports
  • Others
    • ASTROLOGY
    • History
    • Interviews
    • Lifestyle
    • Technology
BengaluruCrime

ರೇಣುಕಾಸ್ವಾಮಿ ಮರ್ಡರ್‌ ಕೇಸ್‌; 3991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ!

September 4, 2024 ITV Network

ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 24ನೇ ಎಸಿಎಂಎಂ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.. ಕೊಲೆ ನಡೆದು 89 ದಿನಗಳ ನಂತರ ಪೊಲೀಸರು ಎಲ್ಲಾ 17 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ.. 

ನಟ ದರ್ಶನ್‌ ಸೇರಿದಂತೆ 17 ಆರೋಪಿಗಳ ವಿರುದ್ಧ ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿರುವ ಪೊಲೀಸರು, ಬರೋಬ್ಬರಿ 3991 ಪುಟಗಳಲ್ಲಿ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಇದಲ್ಲಿ 10 ಕಡತಗಳು ಹಾಗೂ 7 ಸಂಪುಟಗಳಿವೆ ಎಂದು ತಿಳಿದುಬಂದಿದೆ.. ಪ್ರಕರಣದ ಬಗ್ಗೆ ಸುದೀರ್ಘವಾಗಿ ವಿವರಣೆ ನೀಡಲಾಗಿದ್ದು, ಆರೋಪಿಗಳ ವಿರುದ್ಧ ಹಲವಾರು ಪ್ರಬಲ ಸಾಕ್ಷ್ಯಗಳನ್ನು ದೋಷಾರೋಪ ಪಟ್ಟಿಯಲ್ಲಿ ನೀಡಲಾಗಿದೆ..

17 ಆರೋಪಿಗಳೂ ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷ್ಯವಾಗಿ ಸುಮಾರು 231 ಪ್ರಬಲ ಸಾಕ್ಷ್ಯಗಳನ್ನು ಕಲೆಹಾಕಿರುವ ಪೊಲೀಸರು ಅದನ್ನು ಕೋರ್ಟ್‌ಗೆ ಒದಗಿಸಿದ್ದಾರೆ.. ಇನ್ನು 27 ಸಾಕ್ಷಿದಾರರಿಂದ ಪಡೆದ ಮಾಹಿತಿಯನ್ನು ಕೂಡಾ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ..

ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್‌ ಕಳುಹಿಸಿದ್ದ ಎಂಬ ಕಾರಣಕ್ಕೆ ಪಟ್ಟಣಗೆರೆಯ ಶೆಡ್‌ಗೆ ಆತನನ್ನು ಕರೆಸಿಕೊಂಡು ಕೊಲೆ ಮಾಡಲಾಗಿತ್ತು.. ಅನಂತರ ಹಣಕಾಸಿನ ವಿಚಾರಕ್ಕೆ ನಡೆದ ಕೊಲೆ ಎಂದು ಬಿಂಬಿಸಲು ಹೊರಟಿದ್ದರು.. ಮೂವರು ಸ್ವತಃ ಪೊಲೀಸರಿಗೆ ಶರಣಾಗಿದ್ದರು.. ಆದ್ರೆ, ತೀವ್ರ ತನಿಖೆ ನಡೆಸಿದ ಪೊಲೀಸರು, ಇದರ ಹಿಂದೆ ನಟ ದರ್ಶನ್‌ ಇದ್ದಾರೆ ಎಂಬುದನ್ನು ಪತ್ತೆ ಹಚ್ಚಿದ್ದರು.. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಜಿಮ್‌ ಮಾಡುತ್ತಿದ್ದ ದರ್ಶನ್‌ರನ್ನು ಬಂಧಿಸಿ ಕರೆತಂದಿದ್ದರು..

Share Post
  • ತಂದೆಯಿಂದಲೇ ಅತ್ಯಾಚಾರ!; 14 ವರ್ಷದ ಬಾಲಕಿ ಗರ್ಭವತಿ!
  • ನಿನ್ನ ಪಡೆಯೋಕೆ ಪುಣ್ಯ ಮಾಡಿದ್ದೆ ಎಂದ ಪವಿತ್ರಾಗೌಡ ಪುತ್ರಿ!

You May Also Like

ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ಲೀಕ್‌ ವಿಚಾರ; ಚಂಡಿಗಢ ವಿವಿಯಲ್ಲಿ ಉದ್ವಿಗ್ನ

September 18, 2022 ITV Network

ಮಲಯಾಳಂ ನಟ ಎನ್‌.ಡಿ. ಪ್ರಸಾದ್‌ ಆತ್ಮಹತ್ಯೆ

June 27, 2022 ITV Network

ಇಂದು 46,426ಮಂದಿಗೆ ಕೊರೊನಾ ಸೋಂಕು ದೃಢ: 32 ಮಂದಿ ಸಾವು

January 24, 2022January 24, 2022 ITV Network
Copyright © 2025 Latest News in Kannada | Kannada News Channel | ಕನ್ನಡ ಸುದ್ದಿ | NewsX Kannada |. All rights reserved.
Theme: ColorMag by ThemeGrill. Powered by WordPress.