CrimeDistricts

ಕೆಲಸ ಕೊಡಿಸುವ ಆಮಿಷ ತೋರಿಸಿ ಲೈಂಗಿಕ ಕಿರುಕುಳ ಕೊಟ್ಟ ರೈಲ್ವೆ ಕ್ಲರ್ಕ್!

ಹುಬ್ಬಳ್ಳಿ; ‌ಮಹಿಳೆಯೊಬ್ಬರಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಕೇಳಿಬಂದಿದೆ.. ಹುಬ್ಬಳ್ಳಿಯ ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್‌ ಆಗಿರುವ ನದೀಂ ಎಂಬಾತನ ವಿರುದ್ಧ ಮಹಿಳೆಯೊಬ್ಬರು ದೂರ ನೀಡಿದ್ದಾರೆ.. ಕೆಲಸ ಕೊಡಿಸುತ್ತೇನೆ ಎಂದು ನನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.

ಇದನ್ನೂ ಓದಿ; ಜೈಲಿನಲ್ಲಿರುವ ಮಗನಿಗೆ ಗಾಂಜಾ ತಂದ ತಾಯಿ!

ಕೇಶ್ವಾಪುರದ ಮಹಿಳೆಗೆ ರೈಲ್ವೆ ಇಲಾಖೆ ಕ್ಲರ್ಕ್‌ ನದೀಂ ಪರಿಚಯವಾಗಿದ್ದ.. ಆತ ನಿನಗೆ ಕೆಲಸ ಕೊಡಿಸುತ್ತೇನೆ ಎಂದು ಆಕೆಗೆ ಆಮಿಷವೊಡ್ಡಿದ್ದ.. ಸ್ವಲ್ಪ ಸಲುಗೆ ಬೆಳೆಸಿದ ಆತ ಮಂಚಕ್ಕೆ ಬರುವಂತೆ ಕರೆದಿದ್ದಾನೆ.. ರೈಲ್ವೆ ಅಧಿಕಾರಿಗಳ ಗೆಸ್ಟ್‌ ಹೌಸ್‌ಗೆ ಬರುವಂತೆ ಒತ್ತಾಯ ಮಾಡಿದ್ದಾನೆ.. ಹೀಗಾಗಿ ಮಹಿಳೆ ಅಕ್ಕಪಕ್ಕದವರ ಬಳಿ ತನ್ನ ಗೋಳು ತೋಡಿಕೊಂಡಿದ್ದಾಳೆ.. ಸ್ಥಳೀಯರು ನದೀಂನನ್ನು ಗೆಸ್ಟ್‌ಹೌಸ್‌ನಲ್ಲಿ ಕೂಡಿಹಾಕಿದ್ದಾರೆ..
ಇನ್ನೊಂದೆಡೆ ಮಹಿಳೆ ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ನೀಡಿದ್ದಾಳೆ.. ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ನದೀಂನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ..

ಇದನ್ನೂ ಓದಿ; ಸರ್ಕಾರ ಬದಲಾದರೂ ಗೃಹಲಕ್ಷ್ಮೀ ಹಣ ಬರುತ್ತೆ!; ಹೇಗೆ ಗೊತ್ತಾ..?

Share Post