ED ಅಧಿಕಾರಿಗಳಿಂದ ನಟಿ ತಮನ್ನಾ ವಿಚಾರಣೆ!
ಮುಂಬೈ; ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು ವಿಚಾರಣೆಗೊಳಪಡಿಸಿದ್ದಾರೆ.. ಅಕ್ರಮ ವರ್ಗಾವಣೆ ಪ್ರಕರಣವೊಂದರ ಸಂಬಂಧ ತಮನ್ನಾ ಅವರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ..
HPZ ಟೋಕನ್ ಮೊಬೈಲ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ.. ಈ ಸಂಬಂಧ ವಿಚಾರಣೆಗೆ ಬರುವಂತೆ ತಮನ್ನಾಗೆ ನೋಟಿಸ್ ನೀಡಲಾಗಿತ್ತು.. ಅದರಂತೆ ಗುವಾಹಟಿಯ ಇಡಿ ಕಚೇರಿಗೆ ಆಗಮಿಸಿದ್ದ ತಮನ್ನಾ ವಿಚಾರಣೆ ಎದುರಿಸಿದ್ದಾರೆ.. ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತೆರ ಕೊಟ್ಟಿದ್ದಾರೆ.
ತಮನ್ನಾ ಭಾಟಿಯಾ ಅವರು HPZ ಟೋಕನ್ ಮೊಬೈಲ್ ಅಪ್ಲಿಕೇಶನ್ ಪ್ರಚಾರ ರಾಯಭಾರಿಯಾಗಿ ಕೆಲಸ ಮಾಡಿದ್ದರು.. ಈ ಅಪ್ಲಿಕೇಷನ್ ಮೂಲಕ ನೂರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪವಿದೆ.. ಪ್ರಚಾರ ನಡೆಸಿದ್ದರ ಕಾರಣದಿಂದಾಗಿ ತಮನ್ನಾರನ್ನು ವಿಚಾರಣೆಗೊಳಪಡಿಸಲಾಗಿದೆ..