CrimeNational

ದುರಂಹಕಾರಿ ಪೊಲೀಸ್‌ ವರ್ತನೆಗೆ ಅಮಾನತು ಶಿಕ್ಷೆ

ಕೇರಳ: ಅಸಹಾಯಕನಾಗಿ ಕೆಳಗೆ ಕುಳಿತಿರುವ ವ್ಯಕ್ತಿ, ಅಹಂಕಾರಿ ನೆತ್ತಿಗೇರಿ ಬೂಟ್‌ ಕಾಲಿನಿಂದ ಒದೆಯುತ್ತಿರುವ ಪೊಲೀಸ್‌, ಕಂಡೂ ಕಾಣದಂತೆ ಪಕ್ಕದಲ್ಲಿ ನಿಂತಿರುವ ಇನ್ನೊಬ್ಬ ಪೇದೆ ಈ ದೃಶ್ಯಗಳೆಲ್ಲಾ ಕಂಡುಬಂದಿದ್ದು ಮಾವೇಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ. ಹೌದು ಟಿಕೆಟ್‌ ಇಲ್ಲದೆ ರೈಲಿನಲ್ಲಿ ಪ್ರಯಾಣ ಮಾಡ್ತಿದ್ದಾನೆ ಎಂಬ ಕಾರಣಕ್ಕೆ ಒಬ್ಬ ಬಡ ಅಮಾಯಕ ವ್ಯಕ್ತಿಯನ್ನು ಅಮಾನುಷವಾಗಿ ಬೂಟ್‌ ಕಾಲಿನಿಂದ ಒದ್ದಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಖಾಕಿ ದರ್ಪ ತೋರುತ್ತಿ ಈ ವಿಡಿಯೋ ವೈರಲ್‌ ಆಗಿ ಪೊಲೀಸ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಭಾನುವಾರ ಮಾವೇಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ವಿಡಿಯೋದಲ್ಲಿ ಒದೆ ತಿನ್ನುತ್ತಿರುವ ವ್ಯಕ್ತಿ ಹತ್ತಿದ್ದಾರೆ. ಮಾರ್ಗಮಧ್ಯೆ ಕಣ್ಣೂರಿನ ಸಮೀಪ  ಟಿಕೆಟ್‌ ಪರಿಶೀಲನೆಗಾಗಿ ಬಂದ ಟಿಟಿ ವ್ಯಕ್ತಿಯನ್ನು ಟಿಕೆಟ್‌ ನೀಡುವಂತೆ ಕೇಳಿದ್ದಾರೆ. ಟಿಕೆಟ್‌ ನೀಡದಿದ್ದಕ್ಕೆ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಅಲ್ಲಿದ್ದ ಪೊಲೀಸ್‌ ಇಷ್ಟಬಂದಂತೆ ಆ ವ್ಯಕ್ತಿಯನ್ನು ಥಳಿಸಿದ್ದಾನೆ. ಏನೂ ಮಾಡಲಾಗದೆ ಅಸಾಹಯಕವಾಗಿ ವ್ಯಕ್ತಿ ಕೆಳಗೆ ಬೀಳುತ್ತಿರುವ ದೃಶ್ಯ ಮನುಕುಲಕುವಂತಿದೆ. ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆಗ್ತಿದ್ದಂತೆ ದರ್ಪ ತೋರಿದ ಪೊಲೀಸ್‌ ಅನ್ನ ಕೆಲಸದಿಂದ ವಜಾ ಮಾಡಲಾಗಿದೆ.

ಭಾರತದಲ್ಲಿ ಕೇರಳ ರಾಜ್ಯ ಅತೀ ಹೆಚ್ಚು ಸಾಕ್ಷರತೆಯನ್ನು ಹೊಂದಿದೆ. ಆದ್ರೆ ಇಂತಹ ನಾಡಿನಲ್ಲಿ ಹೇಯ ಮನಸ್ಥಿತಿ ಇರುವುದನ್ನು ನೋಡಿದ್ರೆ ಜನರಿಗೆ ಯಾವ ರೀತಿಯ ಸಂದೇಶವನ್ನು ನೀಡ ಬಯಸಿದ್ದೀರಿ. ತಪ್ಪು ಮಾಡಿದ್ರೆ ಅದಕ್ಕೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು.ಅದು ಬಿಟ್ಟು ಹೀಗೆ ಮೃಗಗಳಂತೆ ವರ್ತಿಸಿವುದು ಸರಿಯಾ..? ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Post