ಪ್ರೇಯಸಿಗಾಗಿ ಪತ್ನಿ, ಇಬ್ಬರು ಮಕ್ಕಳನ್ನು ಕೊಂದ ಫಿಸಿಯೋಥೆರಪಿಸ್ಟ್!
ಹೈದರಾಬಾದ್; ಫಿಸಿಯೋಥೆರಪಿಸ್ಟ್ ಒಬ್ಬ ತನ್ನ ಪ್ರಿಯತಮೆಗಾಗಿ ಮುದ್ದಾದ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಕೊಂದಿದ್ದಾನೆ.. ಹೈ ಡೋಸ್ ಇಂಜೆಕ್ಷನ್ ಹಾಕಿ ಹೆಂಡತಿಯನ್ನು ಕೊಲೆ ಮಾಡಿದ ಆರೋಪಿ, ನಂತರ ಇಬ್ಬರು ಪುಟ್ಟ ಮಕ್ಕಳನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ.. ಹೈದರಾಬಾದ್‌ನ ಅತ್ತಾಪುರ ಪ್ರದೇಶದಲ್ಲಿ ಈ ಕೃತ್ಯ ಎಸಗಲಾಗಿದೆ..
ಇದನ್ನೂ ಓದಿ; ಕೆಂಪು ಬದಲು ಮರೂನ್ ಲಿಪ್‌ಸ್ಟಿಕ್ ತಂದ ಗಂಡ; ಡಿವೋರ್ಸ್ ಕೇಳಿದ ಪತ್ನಿ!
ಬೋಡಾ ಪ್ರವೀಣ್ ಎಂಬ ಫಿಜಿಯೋಥೆರಪಿಸ್ಟ್‌ಗೆ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳಿದ್ದರು.. ಸಂಸಾರ ಸುಖಮಯವಾಗುಯೇ ಇತ್ತು.. ಆದ್ರೆ ಸೋನಿ ಫ್ರಾನ್ಸಿಸ್ ಎಂಬಾಕೆಯ ಮೇಲೆ ಆತನಿಗೆ ಮನಸು ಬಿದ್ದಿದ್ದು, ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ.. ಅನಂತರ ಸೋನಿ ಫ್ರಾನ್ಸಿಸ್ ತನ್ನನ್ನು ಮದುವೆಯಾಗುವಂತೆ ಪೀಡಿಸಲು ಶುರು ಮಾಡಿದ್ದಾಳೆ.. ಆಕೆಯೇ ಹೆಂಡತಿ ಮಕ್ಕಳನ್ನು ಸಾಯಿಸಿಬಿಡು ಎಂದು ಸಲಹೆ ಕೂಡಾ ನೀಡಿದ್ದಳಂತೆ.. ಪ್ರೇಯಸಿ ಹೇಳಿದಂತೆ ಮಾಡಿ ಆರೋಪಿ ಈಗ ಕಂಬಿ ಎಣಿಸುತ್ತಿದ್ದಾನೆ..
ಇದನ್ನೂ ಓದಿ; ಶಾಸಕ ನಾಗೇಂದ್ರ ಪತ್ನಿ ಮಂಜುಳಾ ಇಡಿ ವಶಕ್ಕೆ!
ಬೋಡಾ ಪ್ರವೀಣ್ ಪತ್ನಿ ಕುಮಾರಿ (29) ಮತ್ತು ಪುತ್ರಿಯರಾದ ಕೃಷಿಕಾ (5) ಮತ್ತು ಕೃತಿಕಾ (3) ಕೊಲೆಯಾದವರು.. ಮೂವರನ್ನು ಕೊಲೆ ಮಾಡಿದ್ದ ಬೋಡಾ ಪ್ರವೀಣ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆಂದು ಕಥೆ ಕಟ್ಟಿದ್ದ.. ಆದ್ರೆ ಅಪಘಾತದಲ್ಲಿ ಸಾವನ್ನಪ್ಪಿದ್ದರೆ ದೇಹದ ಮೇಲೆ ಗಂಭೀರ ಗಾಯಗಳಿರಬೇಕು.. ಆದ್ರೆ ಗಾಯಗಳಿರಲಿಲ್ಲ.. ಹೀಗಾಗಿ ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ನಿಜ ವಿಷಯ ಬಯಲಾಗಿದೆ..
ಇದನ್ನೂ ಓದಿ; ಪತ್ನಿಗೆ ಮೇಕಪ್ ಹುಚ್ಚು!; ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪತಿ!
45 ದಿನಗಳ ಹಿಂದೆ ಈ ಕೊಲೆ ನಡೆದಿದ್ದು, ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.. ಪೊಲೀಸರ ತನಿಖೆ ವೇಳೆ ಕಾರಿನಲ್ಲಿ ಸಿರಿಂಜ್ ಸಿಕ್ಕಿತ್ತು.. ಅದರ ಆಧಾರದ ಮೇಲೆ ತನಿಖೆ ಕೈಗೊಂಡಾದ ನಿಜ ವಿಚಾರ ಬಯಲಾಗಿದೆ..